ಹಿರಿಯೂರು :
ಜಾನಪದ ಕಲೆಯು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕಲೆಯಾಗಿದ್ದು, ಈ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಈ ನಿಟ್ಟಿನಲ್ಲಿ ಜಾನಪದ ಕಲಾವಿದರಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಬೇಕು ಎಂಬುದಾಗಿ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾಆರಾಧ್ಯ ಅವರು ಹೇಳಿದರು.
ನಗರದ ಕೆ.ಎಂ.ಕೊಟ್ಟಿಗೆಯಲ್ಲಿ ಹಗಲುವೇಷಗಾರರ ಸಾಂಸ್ಕೃತಿಕ ಕಲಾ ಸಂಘ ಕೆ.ಎಂ.ಕೊಟ್ಟಿಗೆ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಜಾನಪದ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಗೀತೆಗಳಿಗೆ ಒಬ್ಬ ನಿರ್ದಿಷ್ಟ ಕವಿ ಎಂಬುದಿಲ್ಲ. ಜನರು ಸಂದರ್ಭಕ್ಕೆ ತಕ್ಕಂತೆ ತಮ್ಮ ಕಲ್ಪನೆಯ ಮೂಲಕ ಸುಲಲಿತವಾಗಿ ರಚಿತಗೊಂಡು ಹಾಡಿನ ರೂಪ ಪಡೆದ ಗೀತೆಗಳು ಜಾನಪದ ಗೀತೆಗಳಾಗಿವೆ. ಜಾನಪದ ಗೀತೆಗಳು ವ್ಯಕ್ತಿಯ ಪದಸಂಪತ್ತು ಹಾಗೂ ಪದಗಳ ಬಳಕೆಯ ಕೌಶಲ್ಯವನ್ನು ವ್ಯಕ್ತಪಡಿಸುತ್ತದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕರಡಿ ಚಮಳ ವಾದ್ಯವೃಂದ, ಪಂಚಾಕ್ಷರಿ ಗವಾಯಿಗಳ ಕಲಾವೃಂದ, ನಾಸಿಕ್ ಡೋಲ್, ಜಯಮ್ಮನವರ ಭಜನಾ ತಂಡ, ಕೆಂಚಪ್ಪನವರ ಹಿಂದೂಸ್ತಾನಿ ಸಂಗೀತ ಜನಪದ ಗೀತೆಗಳ ಕೃಷ್ಣಪ್ಪ, ಗಂಜಿಗುಂಟೆ ಕೃಷ್ಣಮೂರ್ತಿ ಇವರಿಂದ ರಸಮಂಜರಿ ಕಾರ್ಯಕ್ರಮ ವೈಭವವಾಗಿ ನಡೆಯಿತು.
ಈ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರಾಧ ಗುರುಮೂರ್ತಿ ಮತ್ತು ಕೃಷ್ಣಪ್ಪನವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.