ನಾಯಕನಹಟ್ಟಿ:: ನಮ್ಮ ಪೂರ್ವಿಕರ ಕಾಲದಿಂದಲೂ ಸುಮಾರು 200 ವರ್ಷಗಳ ಇತಿಹಾಸವುಳ್ಳ ಕೊಲ್ಲಾಪುರದಮ್ಮ ದೇವಿಗೆ ಗಂಗಾ ಪೂಜೆ ನೆರವೇರಿಸಿ ಜಾತ್ರೆ ನಡೆಸುವುದು ವಾಡಿಕೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಸ್ ಸಿದ್ದಪ್ಪ ಹೇಳಿದ್ದಾರೆ.

ಅವರು ಶುಕ್ರವಾರ ಹೋಬಳಿಯ ಎನ್ ದೇವರಹಳ್ಳಿ ಗ್ರಾಮದ ಜೋಗಿ ಜನಾಂಗದ ಆರಾಧ್ಯದೈವ ಶ್ರೀ ಕೊಲ್ಲಾಪುರದಮ್ಮ ದೇವಿಯ ಗಂಗಾ ಪೂಜೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಮ್ಮ ಸಮುದಾಯದ ಅಣ್ಣತಮ್ಮಂದಿರು ಎಲ್ಲಾ ಸೇರಿ ಶ್ರೀ ಕೊಲ್ಲಾಪುರದಮ್ಮ ದೇವಿಗೆ ಮೂರು ವರ್ಷಕ್ಕೊಮ್ಮೆ ಗಂಗಾ ಪೂಜೆಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮಕ್ಕೆ ಸಕಲ ವಾದ್ಯಗಳೊಂದಿಗೆ ಅದ್ದೂರಿಯಾಗಿ ಶ್ರೀದೇವಿಯನ್ನು ಕರೆದೊಯ್ದು ದೇವಸ್ಥಾನದಲ್ಲಿ ಹೋಮ ಹವನ ವಿಶೇಷ ಪೂಜೆ ಸಲ್ಲಿಸಿ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಿ ನಂತರ ಶ್ರೀದೇವಿಯನ್ನು ಗುಡಿ ತುಂಬಿಸಲಾಗುವುದು ಎಂದರು.
ಇದೆ ವೇಳೆ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಬಿ ಎಚ್ ಸಣ್ಣ ಸಿದ್ದಪ್ಪ ಮಾತನಾಡಿದರು ನಮ್ಮ ಪೂರ್ವಿಕರ ಕಾಲದಿಂದಲೂ ಶ್ರೀ ಕೊಲ್ಲಾಪುರದಮ್ಮ ದೇವಿಯನ್ನು ಪೂಜಿಸುತ್ತಾ ಬಂದಿದ್ದಾರೆ ಮೂರು ವರ್ಷಕ್ಕೊಮ್ಮೆ ಶ್ರೀ ಕೊಲ್ಲಾಪುರದಮ್ಮ ದೇವಿಯನ್ನು ಹೊಳೆಗೆ ಗಂಗಾ ಪೂಜೆಗೆ ಕರೆತಂದು ಪೂಜಿಸಲ್ಲಿಸಿ ಅದ್ದೂರಿಯಾಗಿ ಜಾತ್ರೆ ಉತ್ಸವವನ್ನು ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜೋಗಿ ಜನಾಂಗದ ಯಜಮಾನರಾದ ಸಿದ್ದಯ್ಯ, ಹಾಗೂ ದೊಡ್ಡ ಯಲ್ಲಪ್ಪ ಧನ್ ಗರ್ ಭಂಡಾರಿ ವಂಶಸ್ಥರು ಹಾಗೂ ಎನ್ ದೇವರಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.