ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಕೇಂದ್ರ ಸರ್ಕಾರವು ನಬಾರ್ಡ್ ಮೂಲಕ ಸಹಕಾರ ಸಂಘಗಳಿಗೆ ನೀಡುವ ಸಾಲ ಸೌಲಭ್ಯವನ್ನು ತಡೆ ಹಿಡಿದಿದ್ದಾರೆ ಎಂದು ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.

ಅವರು ತಾಲೂಕಿನ ಚನ್ನಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯ ಸರ್ಕಾರವು ಸಹಕಾರ ಸಂಘಗಳ ಮೂಲಕ ರೈತರುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದ್ದು ಹೆಚ್ಚಿನ ಸಾಲ ಸೌಲಭ್ಯ ಒದಗಿಸಿದರೆ ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ದುರಾಲೋಚನೆಯಿಂದ ಕೇಂದ್ರ ಸರ್ಕಾರವು ಈ ನೀತಿ ಅನುಸರಿಸುತ್ತಿದೆ ಎಂದರು.
ಜಿಲ್ಲಾ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಸಂಪೂರ್ಣ ರಚನೆಯಾದ ನಂತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸ ಸದಸ್ಯರುಗಳಿಗೆ ಸಾಲ ಸೌಲಭ್ಯವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರತಿವರ್ಷವೂ 54,000 ಕೋಟಿಯನ್ನು ಖರ್ಚು ಮಾಡುತ್ತಿದೆ. ಈ ಯೋಜನೆಗಳಿಗಾಗಿ ಇದುವರೆಗೆ ಸರ್ಕಾರವು 98,000 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂದರು. ಸಂಘದ ಆಡಳಿತ ಮಂಡಳಿ ಕಚೇರಿ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ
ಸಿ.ವೈ.ಅಭಿಲಾಷ್ ಮಾತನಾಡಿ ಸಂಘಕ್ಕೆ ನೂತನವಾಗಿ ಷೇರುದಾರರುಗಳನ್ನು ಮಾಡುವ ಉದ್ದೇಶದಿಂದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸಂಘದಿಂದ ರೈತರುಗಳಿಗೆ ಕೆ ಸಿ ಸಿ ಸಾಲದೊಂದಿಗೆ ವಿವಿಧ ಸಾಲವನ್ನು 5 ಕೋಟಿ 64ಲಕ್ಷದ 98,000ಗಳನ್ನು ನೀಡಲಾಗಿದೆ ಹಾಗೂ ಗೊಬ್ಬರವನ್ನು ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿತ್ತನೆ ಬೀಜ ಹಾಗೂ ಔಷಧಿಗಳನ್ನು ವಿತರಣೆ ಮಾಡುವ ಕೆಲಸವನ್ನು ಮಾಡಲಾಗುವುದು ಎಂದರು. ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ 5 ಲಕ್ಷ ರೂಗಳ ನಿವ್ವಳ ಲಾಭ ಬಂದಿದ್ದು ಮುಂದಿನ ದಿನಗಳಲ್ಲಿ ಸಂಘದ ಆಡಳಿತ ಮಂಡಳಿಯವರು ಹಾಗೂ ಸದಸ್ಯರುಗಳ ಸಹಕಾರದೊಂದಿಗೆ ಹೆಚ್ಚಿನ ಕೆಲಸವನ್ನು ಮಾಡಲು ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೂರು ಮಹಿಳಾ ಸಂಘಗಳಿಗೆ ತಲಾ 15 ಲಕ್ಷ ರೂಗಳಂತೆ ಒಟ್ಟು 45 ಲಕ್ಷ ರೂ ಗಳ ಚೆಕ್ ಗಳನ್ನು ವಿತರಣೆ ಮಾಡಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶಂಕರನಾಯಕ, ನಿರ್ದೇಶಕರುಗಳಾದ ಉಷಾ ಸಂಜಯ್ ಕುಮಾರ್,
ಸಿ.ಎಚ್.ಕುಮಾರ್, ಚಲುವಯ್ಯ, ಸಿ.ಜಿ.ತಮ್ಮೇಗೌಡ, ಪುಟ್ಟೇಗೌಡ,
ಸಿ.ಕೆ.ಮಲ್ಲಿಕಾರ್ಜುನ, ಸೈಯದ್ ಇಸ್ರಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ
ಎನ್.ದಿನೇಶ್, ಸಂಘದ ಸಿಇಒ ಆರ್.ಮಂಜು, ಸಿಬ್ಬಂದಿಗಳಾದ ಎಚ್.ಪಿ.ರಾಜೇಶ, ಕೆ.ಎನ್.ಧನಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ರೈತ ಸಂಘದ ರವೀಂದ್ರ, ಶಿಕ್ಷಕ ಪ್ರಭು, ಹಾಲಿನ ಡೇರಿ ಅಧ್ಯಕ್ಷ ಸಿ.ಪಿ.ಪ್ರಕಾಶ್, ಮುಖಂಡರುಗಳಾದ ಮಲ್ಲಿಕಾರ್ಜುನ, ನರಸಿಂಹೇಗೌಡ, ಅಸ್ಲಂ, ಜವರೇಗೌಡ, ಚಂದ್ರೇಗೌಡ, ರವಿ, ಲೋಹಿತ್, ಎ.ಪಿ.ಮಂಜು, ಮಾಸ್ಟರ್ ಚೆನ್ನಯ್ಯ, ಶಿವಮೂರ್ತಿ, ವೈ.ಎಸ್.ಸುಂದರ, ಜಗಣ್ಣ, ಕಾಂತರಾಜು, ಈ.ಚಂದ್ರು, ಲೋಕೇಶ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.