ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ::
ಅಭಿವೃದ್ಧಿ ಸೂಚ್ಯಾಂಕದಲ್ಲಿ ನಲಗೇತನಹಟ್ಟಿ ಗ್ರಾಮ ಹಿಂದುಳದಿದ್ದರೂ ಸಾಂಸ್ಕೃತಿಕ ಪರಂಪರೆಯಲ್ಲಿ ಮುಂದುವರೆದಂತೆ ಗ್ರಾಮವಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿಯನ್ನು ರಘುಮೂರ್ತಿ ಹೇಳಿದರು


ಅವರು ನಾಯಕನಹಟ್ಟಿ ಹೋಬಳಿಯ ನಲಕೇತನಹಟ್ಟಿ ಗ್ರಾಮದಲ್ಲಿ ಚನ್ನಕೇಶವ ನಾಟಕ ಮಂಡಳಿ ಆಯೋಜಿಸಿದಂತ ಸಾಮಾಜಿಕ ನಾಟಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಅತಿ ಹಿಂದುಳಿದಂತ ಗ್ರಾಮವಾಗಿದ್ದರೂ ಕೂಡ ಎರಡು ಬಾರಿ ಇದೇ ಗ್ರಾಮದ ಶಾಸಕರನ್ನು ಆಯ್ಕೆ ಮಾಡಿದಂತ ಹೆಗ್ಗಳಿಕೆ ಈ ಗ್ರಾಮಕ್ಕೆ ಇದೆ ಬಡತನವನ್ನು ಮೀರಿ ರಾಜಕೀಯ ಮುನ್ನಡೆಗೆ ಬಂದಂತ ಈ ಗ್ರಾಮ ಉತ್ಕೃಷ್ಟವಾದಂತಹ ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವನೆಗಳನ್ನು ಮೈಗೂಡಿಸಿಕೊಂಡಿದೆ ಈ ಗ್ರಾಮದ ಯುವಕರು ಕಲೆಗೆ ಎತ್ತಿದ ಕೈ ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಗ್ರಾಮದ ನಾಟಕಗಳು ಪ್ರದರ್ಶನಗೊಂಡಿವೆ ಗ್ರಾಮದ ಜನರು ಕೂಡ ಸಚ್ಚಾರಿತವಂತರು ಪರೋಪಕಾರ ಮತ್ತು ಸಹ ಬಾಳ್ವೆಗೆ ಮುಂದಾಗುವಂತಹ ಜನ ಇವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಈ ಗ್ರಾಮದ ಜನರು ಇನ್ನೂ ಮುನ್ನೆಲೆಗೆ ಬರಬೇಕು ಈ ಗ್ರಾಮದ ಆರಾಧ್ಯದೈವ ಚೆನ್ನಕೇಶವ ಸ್ವಾಮಿ ಗ್ರಾಮಸ್ಥರು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ತೊರೆದು ಈ ಬಾರಿ ಚೆನ್ನಕೇಶವ ಸ್ವಾಮಿಯ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಿ ಎಂಬ ಸಂಕಲ್ಪವನ್ನು ಗ್ರಾಮದ ಜನತೆ ಮಾಡಬೇಕು ಪಟೇಲ್ ಜಿ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು ಆದಿಯಾಗಿ ಗ್ರಾಮದ ಎಲ್ಲ ಗುಡಿಕಟ್ಟಿನವರು ಈ ಸ್ವಾಮಿಯ ಜಾತ್ರೆಯನ್ನು ನಡೆಸಲು ಉತ್ಸುಕರಾಗಿದ್ದಾರೆ ಇದು ಶೈಕ್ಷಣಿಕ ಪ್ರಗತಿ ಕುಂಟಿತ ಗ್ರಾಮವಾಗಿದ್ದು ಈ ಗ್ರಾಮದ ಪ್ರತಿ ಮನೆಯಿಂದ ಉನ್ನತ ಶಿಕ್ಷಣದ ದಿಕ್ಕಿಗೆ ಯುವಕರು ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ. ಸದಸ್ಯಪಿ.ಎನ್. ಮುತ್ತಯ್ಯ ಮಾತನಾಡಿ ಆಡಂಬರದಿಂದ ಆಚರಣೆ ಮಾಡುತ್ತಿರುವಂತಹ ಈ ಜಾತ್ರೆಯಲ್ಲಿ ಸಾಮರಸ್ಯ ಮನೆ ಮಾಡಬೇಕು ಈ ಗ್ರಾಮದಲ್ಲಿ ಉತ್ತಮ ಕಲಾವಿದರು ಇದ್ದು ತಮ್ಮಗಳ ಕಲಾ ನೈಪುಣ್ಯತೆ ಮುಂಬರುವ ದಿನಗಳಲ್ಲಿ ಹೊರಹೊಮ್ಮ ಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಪಿ.ಎಂ. ಪೂರ್ಣ ಓಬಯ್ಯ, ಸಂಗೀತ ನಿರ್ದೇಶಕ ದೊಡ್ಡ ಪಾಲಯ್ಯ, ನಿಂಗರಾಜ್, ಗಾಯಕ ಕೆ.ಟಿ. ಮುತ್ತುರಾಜ್ ಸೇರಿದಂತೆ ಸಮಸ್ತ ನಲಗೇತನಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.