March 16, 2026
image_870x_68a07735f2889.jpg


ನಾಯಕನಹಟ್ಟಿ : ತಳಕು‌ ಉಪ ವಿಭಾಗದ ಮೈಲನಹಳ್ಳಿ ಮತ್ತು ವಿಶ್ವೇಶ್ವರಪುರ 66/11 ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಶುಕ್ರವಾರ ಕೆಪಿಟಿಸಿಎಲ್ ವತಿಯಿಂದ ಎರಡನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಪ್ರಯುಕ್ತ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.
ತಳಕು ಹೋಬಳಿಯ ಮೈಲನಹಳ್ಳಿ, ರೇಣುಕಾಪುರ, ಓಬಳಾಪುರ, ಕಾಲುವೆಹಳ್ಳಿ, ದೊಡ್ಡ ಉಳ್ಳಾರ್ತಿ, ಘಟಪರ್ತಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ನಿರಂತರ ಜ್ಯೋತಿ, ಕೃಷಿ ಸಂಬಂದಿಸಿದಂತೆ ಎಲ್ಲ ವಿಧದ
ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ.‌ ಹಾಗಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಎಇಇ ಮಮತ, ಎಂಜಿನಿಯರ್ ವೆಂಕಟೇಶ್ ಮನವಿ ಮಾಡಿಕೊಂಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading