
ಚಳ್ಳಕೆರೆ ಆ.25
ಆಗಸ್ಟ್ 27ರಂದು ಗಣೇಶ ಚತುರ್ಥಿ ಪ್ರಯುಕ್ತ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಪರಿಸರ ಸ್ನೇಹಿಯಾಗಿ ವಿಸರ್ಜಿಸಲು ಚಳ್ಳಕೆರೆ ನಗರಸಭೆಯು ನಗರದ ವಿವಿಧೆಡೆ ತಾತ್ಕಾಲಿಕವಾಗಿ ನೀರಿನ ತೊಟ್ಟಿಗಳನ್ನು ವ್ಯವಸ್ಥೆ ಮಾಡಿದೆ.
ಗಣೇಶ ಚತುರ್ಥಿ ಪ್ರಯುಕ್ತ ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂಹತಹ ಯಾವುದೇ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ಸರ್ಕಾರದಿಂದ ನಿಷೇಧಿಸಲಾಗಿದೆ. ಸಾರ್ವಜನಿಕರು ಮಣ್ಣಿನಿಂದ ನಿರ್ಮಿಸಿದ ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿ ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿ ಆಚರಿಸಲು ಕೋರಿದೆ.
ಪ್ರತಿಷ್ಠಾಪಿಸಿ ಪೂಜಿಸಿದ ಗಣೇಶ ಮೂರ್ತಿಗಳನ್ನು ನೈಸರ್ಗಿಕ ನೀರಿನ ಮೂಲಗಳಾದ ಹೊಂಡ, ಕೆರೆ, ಭಾವಿಗಳಲ್ಲಿ ವಿಸರ್ಜಿಸುವುದರಿಂದ ಜಲ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಉಂಟಾಗಿ ಜೀವ ರಾಶಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸರಕ್ಕೆ ದಕ್ಕೆಯಾಗದಂತೆ ಗಣೇಶ ಚತುರ್ಥಿ ಆಚರಿಸಲು ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ತಾತ್ಕಾಲಿಕ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ.
ಚಳ್ಳಕೆರೆ ನಗರಸಭೆ ಪ್ರದೇಶದಸಾರ್ವಜನಿಕ ಸ್ಥಳಗಳಾದ ಸರ್ಕಾರಿ/ ರಸ್ತೆಗಳ ಮೇಲೆ ವಾಹನಗಳು ಸಂಚರಿಸುವಜಾಗದಲ್ಲಿ ಗಣಪತಿ ಪ್ರತಿಸ್ಥಾಪನೆ
ನೀಷೇಧಿಸಲಾಗಿದೆ.
ಪ್ಲಾಸ್ಟಿಕ್, ಪ್ಲೆಕ್ಸ್, ಬ್ಯಾನರ್ ಗಳ ಬಳಕೆ ನೀಷೇಧಿಸಲಾಗಿದೆ.ಧ್ವನಿವರ್ಧಕಗಳು ಬಳಕೆ ರಾತ್ರಿ 10.ಗಂಟೆಯಿಂದ ಬೆಳ್ಳಿಗೆ 6. ಗಂಟೆಯ
ತನಕ ನಿಷೇಧಿಸಲಾಗಿದೆ. ಪ್ರತಿಸ್ಟಾಪನೆ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಬಳಕೆಮಾಡಲಾಗುವ ವಾಹನಗಳಿಗೆ ಕಡ್ಡಾಯವಾಗಿ
ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯುವುದು,
ದಾಖಲೆಸಲ್ಲಿಸಿ . ನೈಸರ್ಗಿಕ ಮಣ್ಣಿನ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್/ಕಲ್ಯಾಣಿಗಳ ಪಕ್ಕದಲ್ಲಿ
ಹಸಿ ಕಸ ಒಣ ಕಸವನ್ನು ವಿಂಗಡಿಸಿ (ಹೂ ಹಣ್ಣು ಬಾಳೆಕಂಬ ಮಾವಿನ ತೋರಣ, ಆಲಂಕಾರಿಕ ವಸ್ತುಗಳನ್ನು ವಿಂಗಡಿಸಿ
ವಾಹನಕ್ಕೆ ನೀಡತಕ್ಕದ್ದು.
ನಗರಸಭೆ ಚಳ್ಳಕೆರೆ ವತಿಯಿಂದ ಈ ಕೆಳಕಂಡ ಸ್ಥಳಗಳಲ್ಲಿ ಮೂರ್ತಿವಿಸರ್ಜನಾ ಕೇಂದ್ರಗಳಾಗಿಸ್ಥಾಪಿಸಲಾಗಿದೆ.
ಹಳೇನಗರಸಭೆ ಕಛೇರಿಹತ್ತಿರ. ಪಂಪ್ ಹೌಸ್ ವಾಲ್ಮೀಕಿ ನಗರ.
ಕಸ್ತೂರಿ ಬಾ ಶಾಲೆ ಮುಂಬಾಗ. ಕೆ.ಎಸ್.ಆರ್.ಟಿ ಸಿ ಬಸ್ ನಿಲ್ದಾಣ ಸಮೀಪ, ಸಾರ್ವಜನಿಕರು ಪೂಜಿಸಿದ ನಂತರ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ಸದ್ಬಳಕೆ ಮಾಡಿಕೊಂಡು ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸಲು ಮನವಿ ಮಾಡಿದೆ.
ನಿಗಧಿತ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ನಗರಸಭೆ ಪೌರಾಯುಕ್ತ ಜಗ್ಗರೆಡ್ಡಿ ತಿಳಿಸಿದ್ದಾರೆ

About The Author
Discover more from JANADHWANI NEWS
Subscribe to get the latest posts sent to your email.