
ನಿಸ್ವಾರ್ಥ ಸಮಾಜ ಸೇವೆ ಮತ್ತು ದಾನ ಮನುಷ್ಯನಿಗೆ ಅತ್ಯಂತ ಶ್ರೇಷ್ಠವಾದ ಆಭರಣಗಳಿದ್ದಂತೆಯೆಂದು ನಿವೃತ್ತ ಕೆಎಎಸ್ ಅಧಿಕಾರಿ ಎಂದು ರಘುಮೂರ್ತಿ ಹೇಳಿದರು







ಅವರು ಚಳ್ಳಕೆರೆ ನಗರದ ನರಹರಿ ಬಡಾವಣೆಯಲ್ಲಿರುವಂತ ಬನಶ್ರೀ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಮಾತನಾಡಿ ಇಲ್ಲಿನ ವೃದ್ಧಾಶ್ರಮದ ನಿರ್ವಹಣೆಯಲ್ಲಿ ಇದರ ವ್ಯವಸ್ಥಾಪಕರಾದ ಮಂಜುಳಮ್ಮ ಇವರು ವೃದ್ಧರಿಗೆ ನಿರ್ಮಿಸಿರುವಂತಹ ನಾಲ್ಕು ಕೊಠಡಿಗಳ ಕಾರ್ಯ ಇವರ ನಿಸ್ವಾರ್ಥ ಸೇವೆಗೆ ಹಿಡಿದಂತ ಕೈಗನ್ನಡಿ
ತಾಯಿ ಮಗುವನ್ನು ಹೆರುವುದು ಮತ್ತು ಪಾಲನೆ ಮಾಡುವುದು ಅವಳ ಪ್ರೀತಿಯ ಜೊತೆಗೆ ಕರ್ತವ್ಯ ಗಳ ಸಮ್ಮಿಶ್ರಣ ಇದರ ಜೊತೆಗೆ ಸಮಾಜದಲ್ಲಿ ಪರಮ ಶ್ರೇಷ್ಠವಾದದ್ದು ಅಂದ್ರೆ ಅದು ದಾನ ಇವರ ತಂದೆಯ ಜಮೀನನ್ನು ವೃದ್ಧಾಶ್ರಮಕ್ಕೆ ಬಳಸಿಕೊಂಡು ಈ ಸೇವೆಯಲ್ಲಿಯೇ ಎಲ್ಲವನ್ನು ಕಾಣುತ್ತಿರುವ ಇವರ ಕರ್ತವ್ಯ ತುಂಬಾ ಅನನ್ಯವಾದುದು ಅಗತ್ಯ ಉಳ್ಳವರಿಗೆ ಸಕಾಲದಲ್ಲಿ ಮಾಡುವಂತಹ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ ಸಮಾಜದಲ್ಲಿರುವಂತಹ ಉಳ್ಳವರು ತಮ್ಮ ದುಡಿಮೆ ಮತ್ತು ಉಳಿತಾಯಗಳಲ್ಲಿ ಅಲ್ಪ ಪ್ರಮಾಣದ ಸಹಾಯವನ್ನು ಇಂತಹ ಮಹತ್ ಕಾರ್ಯಕ್ಕೆ ನೀಡಿದಲ್ಲಿ ನಮ್ಮಗಳ ಬದುಕು ಸಾರ್ಥಕವೆನಿಸುತ್ತದೆ ಅಂತಹ ಸಾರ್ಥಕತೆಯಲ್ಲಿ ಈ ವೃದ್ಧಾಶ್ರಮದ ವ್ಯವಸ್ಥಾಪಕರು ಭಾಗಿಯಾಗಿದ್ದಾರೆ ಸಮಾಜದಲ್ಲಿ ಇಂತಹ ಹೆಚ್ಚು ಹೆಚ್ಚು ನಿಸ್ವಾರ್ಥ ಮನೋಭಾವದವರು ಮತ್ತು ದಾನಿಗಳು ಸಮಾಜವನ್ನು ಕಟ್ಟುವ ಕೆಲಸದಲ್ಲಿ ನಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು
ವೃದ್ಧಾಶ್ರಮದ ವ್ಯವಸ್ಥಾಪಕರಾದ ಮಂಜುಳಮ್ಮ ಮಾತನಾಡಿ ಭಗವಂತನ ಪ್ರೇರಣೆಯಂತೆ ನಮ್ಮ ತಂದೆಯ ಆಶೋತ್ತರಗಳು ಮತ್ತು ತಂದೆಯ ನಿರೀಕ್ಷೆಯಂತೆ ಈ ಕಾರ್ಯ ಕೈಗೊಂಡಿದ್ದೇನೆ ಕ್ಷೇತ್ರದ ಶಾಸಕರು ಒಳಗೊಂಡಂತೆ ಎಲ್ಲರೂ ಕೂಡ ಈ ಕೆಲಸಕ್ಕೆ ಸಹಾಯ ನೀಡಿದ್ದಾರೆ ಈ ಕಾರ್ಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನನಗೆ ಸಹಕರಿಸಿದಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು







About The Author
Discover more from JANADHWANI NEWS
Subscribe to get the latest posts sent to your email.