ಚಿತ್ರದುರ್ಗಏ.25:
ನಿಮ್ಮ ಮಕ್ಕಳಿಗೆ 2 ವರ್ಷ ತುಂಬುವ ಮುನ್ನ 12 ಮಾರಕ ರೋಗಗಳನ್ನು ನಿಯಂತ್ರಿಸುವ ಲಸಿಕೆಗಳನ್ನು ಕಾಲ ಕಾಲಕ್ಕೆ ತಪ್ಪದೇ ಕೊಡಿಸಿ. ಲಸಿಕೆಗಳು ಜೀವ ರಕ್ಷಕಗಳಾಗಿ ಕಾರ್ಯ ನಿರ್ವಹಿಸಿತ್ತವೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ಇಲ್ಲಿನ ನೆಹರು ನಗರದ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಚೇಳುಗುಡ್ಡದ ಮಾರಮ್ಮ ದೇವಸ್ಥಾನದ ಆವರಣದಲ್ಲಿ ವಿಶ್ವ ಲಸಿಕಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವ ಲಸಿಕಾ ಸಪ್ತಾಹ ಪ್ರತಿ ವರ್ಷ ಏಪ್ರಿಲ್ 24 ರಿಂದ 30 ರವರೆಗೆ ನಡೆಸುವ ವಿಶೇಷ ಲಸಿಕಾ ಅಭಿಯಾನವಾಗಿರುತ್ತದೆ. ಪ್ರತಿ ಗುರುವಾರ ಮತ್ತು ಮಂಗಳವಾರ ದೈನಂದಿನ ಲಸಿಕಾ ಕಾರ್ಯಕ್ರಮ ಜರುಗುತ್ತಿದ್ದರೂ ಸಹ ವಿಶೇಷ ಲಸಿಕಾ ಸಪ್ತಾಹ ಕಾರ್ಯಕ್ರಮ ಲಸಿಕೆ ಪಡೆಯದೆ ಬಿಟ್ಟು ಹೋದ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಇಲ್ಲದ ಮತ್ತು ತಲುಪಲು ದುಸ್ಥರವಾದ ಪ್ರದೇಶ ನಗರ ಕೊಳಚೆ ಪ್ರದೇಶಗಳನ್ನು, ಆರೋಗ್ಯ ಸೇವೆ ಒದಗಿಸುವ ಸಿಬ್ಬಂದಿ ಕೊರತೆ ಇರುವ ಪ್ರದೇಶಗಳು ಎಂದು ಗುರುತಿಸಿ, ಸೇವಾ ವಂಚಿತ ಪ್ರದೇಶದಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಲಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಪೂರ್ವ ನಿಯೋಜಿತವಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಲಸಿಕಾ ಕ್ರಿಯಾ ಯೋಜನೆ ತರಿಸಿ, ಯೋಜನೆಯಂತೆ ಲಸಿಕಾ ಸತ್ರಗಳನ್ನು ನಡೆಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಲಸಿಕೆ ಬಿಟ್ಟುಹೋದ 8 ಮಕ್ಕಳಿಗೆ ವಿವಿಧ ಹಂತದ ಲಸಿಕೆ ನೀಡಲಾಯಿತು
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸೈಯದ್ ಬಿಲಾಲ್, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್.ಎಸ್.ಮಂಜುನಾಥ, ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪ್ರವೀಣ್, ಗುರುಮೂರ್ತಿ, ಗೋಪಾಲ ಕೃಷ್ಣ, ಹನುಮಂತಪ್ಪ, ನಿತಿನ್, ತಾಲ್ಲೂಕು ಆಶಾ ಭೋದಕಿ ತಬಿತಾ, ಆಶಾ ಕಾರ್ಯಕರ್ತೆಯರಾದ ಅಭಿನಯ, ಸಂಗೀತ ಹಾಗೂ ತಾಯಿ ಮಕ್ಕಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.