ಚಳ್ಳಕೆರೆ:
ಯುಗಾದಿ ಮತ್ತು ರಂಜನ್ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಬಾಹಿರ ಕೃತ್ಯ ಎಸಗಿ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಚಳ್ಳಕೆರೆ ಡಿವೈಎಸ್ಪಿ ಟಿಬಿ ರಾಜಣ್ಣ ಹೇಳಿದರು.











ನಗರದ ಪೋಲೀಸ್ ಠಾಣೆಯಲ್ಲಿ ಯುಗಾದಿ, ರಂಜಾನ್ ಹಬ್ಬದ ಅಂಗವಾಗಿ ಇಂದು ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಎರಡು ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. .ಎಲ್ಲ ಧರ್ಮೀಯರು ಕೋಮು ಸೌಹಾರ್ದತೆಯಿಂದ ಬದುಕಿದರೆ ನಗರ-ಊರು ಶಾಂತಿ ತೋಟವಾಗುತ್ತದೆ. ಯಾವುದೇ ಕಾರಣಕ್ಕೂ ಭಾವೋದ್ವೇಗಕೊಳಗಾಗಿ ಕಾನೂನು ಕೈಗೆತ್ತಿಕೊಳ್ಳಬಾರದು. ಪ್ರತಿಯೊಂದು ಸಮಸ್ಯೆಗೂ ಕಾನೂನಿನಲ್ಲಿ ಪರಿಹಾರವಿದೆ. ಸಹೋದರತ್ವ ಭಾವದಿಂದ ಮೂಲಕ ಹಬ್ಬಗಳನ್ನು ಆಚರಣೆ ಮಾಡಿ ಇತರರಿಗೆ ಮಾದರಿಯಾಗಬೇಕು ಹಬ್ಬದ ಸಮಯದಲ್ಲಿ ಇಸ್ಪುಟ್ ದೊಂಬಿ ಮಧ್ಯದ ಆಮೇಲೆ ಗಲಾಟೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಎಲ್ಲ ಸಮುದಾಯಕ್ಕೂ ಹಬ್ಬಗಳು ದೊಡ್ಡ ಹಬ್ಬವಾಗಿದ್ದು ಕುಟುಂಬದೊಂದಿಗೆ ಸಡಗರ ಸಂಭ್ರಮದಿಂದ ಆಚರಣೆ ಮಾಡಿ. ಗಲಾಟೆ ಮಾಡಿಕೊಂಡು ಗುಂಪು ಘರ್ಷಣೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಹೇರಿದರೆ ಮನೆಯವರಿಗೂ ನೆಮ್ಮದಿ ಇರುವುದಿಲ್ಲ. ಕುಟುಂಬಸ್ಥರು ಹಬ್ಬವನ್ನು ಮಾಡುವುದಾದರೆ ಹೇಗೆ ಆದ ಕಾರಣ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಿಸಿ, ಕುಟುಂಬದೊಂದಿಗೆ ಆನಂದಿಸಿ ಎಂದರು…
ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ.. ಪೋಲಿಸ್ ಇಲಾಖೆ ಇಂತಹ ಹಬ್ಬಗಳ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೋಸ್ಕರ ಹಲವು ಮಾರ್ಗಗಳನ್ನು ಅನುಸರಿಸುತ್ತದೆ ಅಂತಹ ಮಾರ್ಗಗಳನ್ನು ಅನುಸರಿಸಿ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಬೇಕು ಎಂದರು.
ಮುಸ್ಲಿಂ ಹಿರಿಯ ಮುಖಂಡ ಎವ್ ಎಸ್ ಸೈಯಾದ್ ಮಾತನಾಡಿ. ನಾವು ಸಹ ಎಲ್ಲಾ ಅಣ್ಣ ತಮ್ಮಂದಿರಗಳಂತೆ ಜೀವನ ಸಾಗಿಸಿಕೊಂಡು ಬರುತ್ತಿದ್ದು ಯಾವುದೇ ಕೋಮು ನೀಡುವುದಿಲ್ಲ. ಎಲ್ಲ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಮಂಜು ಸಹ ಇದೇ ರೀತಿ ಎಲ್ಲರೂ ನಡೆದುಕೊಂಡು ಹೋಗೋಣ ಎಂದರು.
ಕನ್ನಡ ರಕ್ಷಣಾ ವೇದಿಕೆಯ ಮಾರುತಿ. ಪಿ ಎಸ್ ಐ ಶಿವರಾಜು ,ದರಪ್ಪ ಬಾಳಪ್ಪ ದೊಡ್ಮನಿ ಮಾತನಾಡಿದರು.
ಶಾಂತಿ ಸಭೆಯಲ್ಲಿ ರಮೇಶ್. ಜ್ಯೋತಿ ಪ್ರಕಾಶ್ ಓಟಿ ತಿಪ್ಪೇಸ್ವಾಮಿ, ಚಿದಾನಂದಪ್ಪ ಹನುಮಂತಪ್ಪ ಸುರೇಶ್, ಅನ್ವರ್ ಮಾಸ್ಟರ್ ದಾದಾಪೀರ್.ಎಸ್.ಬಿ ಜುಬೇರ್ ಸೈಯದ್ ಸರ್ವರ್.ಮಂಜುನಾಥ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ರೈತ ಮುಖಂಡರು ಹಾಗೂ ಮುಸ್ಲಿಂ ಬಾಂಧವರು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಪೊಲೀಸ್ ಪೇದೆಗಳಾದ ಶಂಕರ್ ,ಸಂತೋಷ್ ಕುಮಾರ್, ಶಿವನಂದ ಮಡಿವಾಳ, ವೆಂಕಟೇಶ್ ಇದ್ದರು….
About The Author
Discover more from JANADHWANI NEWS
Subscribe to get the latest posts sent to your email.