ವರಧಿ : ಹರೀಶ್, ತಿಮ್ಮಪ್ಪಯ್ಯನಹಳ್ಳಿ
ನಾಯಕನಹಟ್ಟಿ
ನೇರಲಗುಂಟೆ, ಭೀಮನಕೆರೆ, ಎನ್.ದೇವರಹಳ್ಳಿ, ಗಜ್ಜುಗಾನಹಳ್ಳಿ ಮತ್ತು ತಿಮ್ಮಪ್ಪಯ್ಯನಹಳ್ಳಿಗೆ ಹೋಗುವ ರಸ್ತೆಯಲ್ಲಿ ಕಳಪೆ ಡಾಂಬರೀಕರಣ ಮಾಡಿರುವುದರಿಂದ ಲೋಕೋಪಯೋಗಿ ಇಲಾಖೆ ವಿರುದ್ಧ ಗರ್ಭಿಣಿಯರು, ವಿಕಲಚೇತನರು ಹಾಗೂ ಶಾಲೆಯ ಮಕ್ಕಳು ಸಾರ್ವಜನಿಕರು ಶಾಪ ಹಾಕಿದ್ದಾರೆ. ಈ ರಸ್ತೆಯಲ್ಲಿ ನೂರಾರು ವಾಹನಗಳು ಹಾಗೂ ಸಾಕಷ್ಟು ತಗ್ಗು ಗುಂಡಿ ಬಿದ್ದಿರುವುದರಿಂದ ಸಾಕಷ್ಟು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.



ಗರ್ಭಿಯರು, ವಿಕಲಚೇತನರು, ಸಾರ್ವಜನಿಕರು, ಶಾಲೆಯ ಮಕ್ಕಳು ಏನಾದರೂ ಆದರೆ ಲೋಕೋಪಯೋಗಿ ಇಲಾಖೆಯವರೇ ನೇರ ಹೊಣೆಗಾರರಾಗಿರುತ್ತಾರೆ. ಕಮಿಷನ್ ಆಸೆಗಾಗಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ಈಗ ಹಾಕಿರುವ ಡಾಂಬರನ್ನು ತೆರೆವುಗೊಳಿಸಿ ಗುಣಮಟ್ಟದ ರಸ್ತೆ ಮಾಡಬೇಕೆಂದು ಆಗ್ರಹಿಸಿದರು. ಕಳಪೆ ಡಾಂಬರೀಕರಣ ರಸ್ತೆಯಲ್ಲಿ ಹಾಕುವ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ಫೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ. ಅವರ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ರಸ್ತೆಯಲ್ಲಿ ಗರ್ಭಿಣಿಯರು, ವಿಕಲಚೇತನರು ಇದೇ ರಸ್ತೆಯಲ್ಲಿ ಚಲಿಸುತ್ತಾರೆ. ಕೆ.ಎಸ್.ಆರ್.ಟಿ.ಸಿ. ಬಸ್ ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಸುಮಾರು 7 ಕಿ.ಮೀ.ವರೆಗೆ ತೇಪೆ ಡಾಂಬರ್ ರಸ್ತೆ ಗುಂಡಿಗಳು ಬಿದ್ದಿವೆ. ಇವುಗಳನ್ನು ಸರಿಪಡಿಸದೇ ಗುತ್ತಿಗೆದಾರರು ಬಿಲ್ ಪಡೆಯಲು ಮುಂದಾಗುತ್ತಿದ್ದಾರೆ. ಅಧಿಕಾರಿಗಳು ಸಾತ್ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕಳಪೆ ಡಾಂಬರೀಕರಣ ಮಾಡಿರುವ ರಸ್ತೆ ಕೆಲವೇ ದಿನಗಳಲ್ಲಿ ಕಿತ್ತು ಬಂದಿರುವುದು ಬೇಸರದ ಸಂಗತಿಯಾಗಿದೆ. ಸಹಾಯಕ ಕಾರ್ಯನಿರ್ವಹಕ ಅಭಿಯಂತರರು ರಾಜಪ್ಪ, ಗುತ್ತಿಗೆದಾರರಾದ ಪಾಲಣ್ಣ, ತಾಲ್ಲೂಕು ಅಭಿಯಂತರರು ವಿಜಯಭಾಸ್ಕರ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸುತ್ತ-ಮುತ್ತ ಹಳ್ಳಿಯ ಜನರು ಆರೋಪಿಸಿದರು.
ಈ ಸಂದರ್ಭದಲ್ಲಿ ನೊಂದ ಗೃಹಿಣಿ ಮಾತನಾಡಿ ಈ ರಸ್ತೆಯನ್ನು ಗುಣಮಟ್ಟದ ರಸ್ತೆಯನ್ನು ಮಾಡಬೇಕು ಎಲ್ಲಿಯಂದರಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದರಿಂದ ಹಲವು ಬಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಕಲಚೇತನರು, ಶಾಲೆಯ ಮಕ್ಕಳು ಬಿದ್ದಿದ್ದಾರೆ ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಗುಣಮಟ್ಟದ ರಸ್ತೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಹಿಂದೆ ಬೈಕ್ ಸವಾರರು ಬಿದ್ದು ಪ್ರಾಣ ಹಾನಿಗಳು ಸಂಭವಿಸಿರುವ ಘಟನೆಗಳು ಸಾಕಷ್ಟು ಉದಾಹರಣೆಗಳು ಇವೆ. ಈ ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಲು ಮುಂದೆ ಸಾಗಲು ಹೋಗಿ ಅನೇಕರು ಗಾಯಗೊಂಡಿದ್ದಾರೆ. ಗುಂಡಿಗಳನ್ನು ಸರಿಪಡಿಸುವಂತೆ ಜನರು ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ರಸ್ತೆಗಳನ್ನು ದುರಸ್ತಿ ಮಾಡದ ಕಾರಣ ಪ್ರಯಾಣಿಕರು ನಿತ್ಯ ಪರದಾಡುವಂತಾಗಿದೆ. ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದಲ್ಲ. ರಸ್ತೆಯಲ್ಲಿ ಗುಂಡಿಗಳು ಇದ್ದು ಇದು ದ್ವೀಚಕ್ರ ಸೇರಿದಂತೆ, ಕಾರು, ಸೈಕಲ್, ಆಟೋ, ಟ್ರಾö್ಯಕ್ಟರ್ ಹಲವು ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ವಾಹನ ಸವಾರರ ಪಾಡು ದೇವರ ಪ್ರೀತಿ ಎಂಬAತಾಗುತ್ತದೆ. ಅಪಾಯಕ್ಕೆ ಆಹ್ವಾನಿಸುತ್ತಿರುವ ಈ ರಸ್ತೆ ಸುತ್ತಮುತ್ತಲಿನ ಹಳ್ಳಿಯ ಜನರು ಗುಣಮಟ್ಟದ ಕಾಮಗಾರಿ ಮಾಡಿ ಎಂದು ಮನವಿಮಾಡಿಕೊಂಡರು ಕ್ಯಾರೆ ಎನ್ನದ ಗುತ್ತಿಗೆದಾರರು ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ನೂರಾರು ವಾಹನಗಳು ಓಡಾಡುತ್ತಿದ್ದು ತ್ಯಾಪೆ ಡಾಂಬರ್ ಹಾಕಿ ಕೆಲಸ ಮುಗಿಸಿದ್ದಾರೆ ಈಗಾದರೆ ರಸ್ತೆ ಬಾಳಿಕೆ ಬರೋದು ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು. ಗುಣಮಟ್ಟದ ರಸ್ತೆ ಆಗುವವರೆಗೂ ಒಂದು ನಯಾ ಪೈಸೆ ಬಿಲ್ ಪಾವತಿ ಮಾಡಬೇಡಿ ಎಂದು ಸಾರ್ವಜನಿಕರು ಹೇಳಿದರು. ತಗ್ಗು-ಗುಂಡಿ ಕೆಲವೇ ದಿನಗಳಲ್ಲಿ ತೇಪೆ ಎದ್ದು ರಸ್ತೆಯ ತುಂಬ ತಗ್ಗು-ಗುಂಡಿಗಳು ಬಿದ್ದಿವೆ. ಸಕಾರ ಕೋಟಿಗಟ್ಟಲೆ ಅನುದಾನ ಕೊಟ್ಟರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸರಿಯಾದ ರಸ್ತೆ ಡಾಂಬರೀಕರಣ ಮಾಡುತ್ತಿಲ್ಲ. ರಸ್ತೆ ಅಗೆದಿರುವ ಜಾಗದಲ್ಲಿ ಜಲ್ಲಿ ಪುಡಿ ಹಾಕಿ ಅದರ ಮೇಲೆ ಟಾರ್ ಮುಚ್ಚುವುದರಿಂದ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಕಾಟಾಚಾರಕ್ಕಾಗಿ ಕಳಪೆ ಡಾಂಬರೀಕರಣ ಮಾಡುತ್ತಿದ್ದಾರೆ. ಸಾರ್ವಜನಿಕರು ದೂರಿದರು.
About The Author
Discover more from JANADHWANI NEWS
Subscribe to get the latest posts sent to your email.