
ಹಿರಿಯೂರು:
ನಗರದ ಪ್ರವಾಸಿ ಮಂದಿರದಲ್ಲಿ ಕೆರೆಗಳಿಗೆ ನೀರು ತುಂಬಿಸುವಂತೆ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ರೈತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಸಭೆ ನಡೆಸುವ ಮೂಲಕ ಪ್ರತಿಭಟನಾ ನಿರತ ರೈತರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಉಸ್ತುವಾರಿ ಸಚಿವರು ಯಾವುದೇ ನಿಶ್ಚಿತ ಭರವಸೆ ನೀಡದೆ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಬಜೆಟ್ ಅಲ್ಲಿ ಹಣ ಮೀಸಲಿಡಲು ಕೇಳಿಕೊಂಡಿದ್ದೇನೆ ಎಂದು ಹೇಳುತ್ತಾ ರೈತರನ್ನು ಮನವೊಲಿಸಲು ಪ್ರಯತ್ನಿಸಿದರು.
ಈ ಜಿಲ್ಲಾ ಸಚಿವರ ಹಾರಿಕೆ ಉತ್ತರವನ್ನು ಮನಗಂಡ ರೈತರು ಇದು ರೈತರ ಕಣ್ಣುಹೊರಿಸುವ ತಂತ್ರವಾಗಿದೆ ಹೊರತು, ಕೆರೆಗಳಿಗೆ ನೀರು ತುಂಬಿಸುವ ಬದ್ಧತೆಯನ್ನು ತೋರಿಸಲು ಸಚಿವರು ವಿಫಲವಾಗಿದ್ದಾರೆ. ಆದ್ದರಿಂದ ಚಳುವಳಿಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಮಾಡು ಇಲ್ಲ ಮಡಿ ಎಂಬ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಉತ್ತರದಿಂದ ತೃಪ್ತರಾಗದ ಪ್ರತಿಭಟನಾ ನಿರತ ರೈತರು ಜೆ.ಜೆ. ಹಳ್ಳಿ ಹೋಬಳಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವನ್ನು ತಾಲ್ಲೂಕು ಕಚೇರಿಗೆ ವರ್ಗಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಜೊತೆಗೆ ಆಮರಣಾಂತರ ಉಪವಾಸ ಸತ್ಯಾಗ್ರವನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ರೈತ ಮುಖಂಡರುಗಳಾದ ಆಲೂರುಸಿದ್ದರಾಮಣ್ಣ, ಎಂ.ಆರ್.ಈರಣ್ಣ ಜೆ.ಜಿಹಳ್ಳಿ ಅರಳಿಕೆರೆ ತಿಪ್ಪೇಸ್ವಾಮಿ, ಎ.ಆರ್.ಹಳ್ಳಿ ರಾಜಪ್ಪ, ರಾಜಕುಮಾರ್, ರಾಮಣ್ಣ, ಸಣ್ಣತಿಮ್ಮಣ್ಣ, ವಿರುಪಾಕ್ಷಪ್ಪ, ರಂಗಸ್ವಾಮಿ, ಶಿವಣ್ಣ, ರಾಮಕೃಷ್ಣ, ರಾಮಣ್ಣ, ಗೋವಿಂದಪ್ಪ, ತಿಮ್ಮಾರೆಡ್ಡಿ, ಸುರೇಶ್, ತಿಮ್ಮಣ್ಣ, ಜಯಣ್ಣ, ಸೇರಿದಂತೆ ಅನೇಕ ರೈತ ಮುಖಂಡರುಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.