
ಹೊಸದುರ್ಗ: ಹಲವು ವರ್ಷಗಳಿಂದ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ ಬಡಾವಣೆಗಳಿಗೆ ಯಾವುದೇ ದಾಖಲೆಯಿಲ್ಲದೆ ಜನ ಅಸಹಾಯಕರಾಗಿದ್ದರು ಇದನ್ನು ಮನಗಂಡ ನಮ್ಮ ಸರ್ಕಾರ ದುಪ್ಪಟ್ಟು ಕಂದಾಯ ಕಟ್ಟಸಿಕೊಳ್ಳುವ ಮೂಲಕ ಅಂತಹ ನಿವೇಶನಗಳಿಗೆ ಬಿ ಖಾತಾ ದಾಖಲೆ ನೀಡಲು ಅನುಕೂಲ ಮಾಡಿಕೊಟ್ಟಿದೆ ಸರ್ಕಾರದ ನಿರ್ದೇಶನದಂತೆ ಮೂರು ತಿಂಗಳೋಳಗಾಗಿ ಎಲ್ಲಾ ಹಿನ್ನಲೆಯಲ್ಲಿ ನಿವೇಶನಗಳಿಗೂ ದಾಖಲೆ ನೀಡಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಪುರಸಭೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಇ ಖಾತಾ ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ನಂತರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಪುರಸಭೆ ಕಂದಾಯ ಇಲಾಕೆ ಅಧಿಕಾರಿ ಯೋಗೀಶ್‌ಗೆ ನಿನ್ನ ಮೇಲೆ ತುಂಬಾ ದೂರುಗಳಿವೆ. ಸರಿಯಾಗಿ ಕೆಲಸ ಮಾಡು.ಪುರಸಭೆಗೆ ಗೌರವ ತರುವ ಕೆಲಸ ಮಾಡು ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು ಎಂದು ಎಚ್ಚರಿಕೆ ನೀಡಿದರು.
ಹೊಸದುರ್ಗ ಪುರಸಭೆಗೆ ಮರ್ಯಾದೆ ಇಲ್ಲ. ಅಡ್ಡ ದಾರಿ ತೋರಿಸುವ ಜನರ ಜೊತೆ ಸಾರ್ವಜನಿಕರು ಹೋಗಬೇಡಿ.ಸರಕಾರದ ಮಾನ ನನ್ನ ಮಾನ ಹರಾಜು ಹಾಕುತ್ತಿದ್ದೀರಾ, ನಿಮ್ಮ ಜೇಬು ತುಂಬಿಸಿಕೊAಡು ಹೋಗ್ತಾ ಇದ್ದೀರಾ.
ಸಾರ್ವಜನಿಕರಿಂದ ಯಾವುದಾದರು ಸಣ್ಣ ದೂರು ಬಂದರೂ ಸಹಾ ನಿಮ್ಮೆಲ್ಲಾ ಗ್ರಹಚಾರ ಬಿಡಿಸುತ್ತೇನೆ ಎಂದು ಶಾಸಕರು ಪುರಸಭಾ ಆಡಳಿತದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದಲ್ಲಿ ೬ ಸಾವಿರ ಬಿ ಖಾತಾ ಆಸ್ತಿಗಳಿದ್ದು ಪುರಸಭೆ ವ್ಯಾಪ್ತಿಯ ಆಸ್ತಿ ಮಾಲಿಕರು ದಾಖಲೆ ಸಲ್ಲಿಸಿ ಬಿ ಖಾತಾ ಪಡೆದುಕೊಳ್ಳಿ ಎಂದ ಶಾಸಕರು ನಾನು ಇಲ್ಲಿ ಭಾಷಣ ಮಾಡಲು ಬಂದಿಲ್ಲ ನನಗೆ ಯಾರ ಭಯವೂ ಇಲ್ಲ ಅಧಿಕಾರಿಗಳು ಮದ್ಯವರ್ತಿಗಳಿಗೆ ಬೆಂಬಲ ಕೊಟ್ಟರೆ ನಾನು ಸಹಿಸುವುದಿಲ್ಲ ನೀವು ಸರ್ಕಾರದ ಮಾನ ನನ್ನ ಮಾನ ಹರಾಜು ಹಾಕುತ್ತಿದ್ದೀರಾ, ನಿಮ್ಮ ಜೇಬು ತುಂಬಿಸಿಕೊAಡು ಹೋಗ್ತಾ ಇದ್ದೀರಾ ಇದನ್ನೆಲ್ಲಾ ಇಲ್ಲಿಗೆ ಕೈಬಿಡಿ ಆಡಳಿತ ನಡೆಸುವವರು, ಆಡಳಿತ ಮಾಡುವವರು ಇಬ್ಬರೂ ಮಾನ ಮರ್ಯಾದೆ ಇಟ್ಟುಕೊಂಡು ಕೆಲಸ ಮಾಡಿ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಾಜೇಶ್ವರಿಆನಂದ್, ಸದಸ್ಯರಾದ ಡಾ. ಸ್ವಾತಿ ಪ್ರದೀಪ್, ಸರೋಜಮ್ಮ, ಶ್ರೀನಿವಾಸ್, ಜಾಪರ್ ಸಾಧಿಕ್, ಶಂಕರಪ್ಪ, ಬ್ರಹ್ಮಪಾಲ್, ನಾಗರಾಜ್, ಮಂಜುನಾಥ್, ರಮೇಶ್, ಗೌಡ್ರು ತಿಪ್ಪೇಸ್ವಾಮಿ, ಮುಖ್ಯಾಧಿಕಾರಿ ತಿಮ್ಮರಾಜು, ಮುಖಂಡರಾದ ಆಗ್ರೋ ಶಿವಣ್ಣ, ಕೆ ಸಿ ನಿಂಗಪ್ಪ ಜಿಲ್ಲಾ ಕೆಡಿಪಿ ಸದಸ್ಯೆ ಶ್ರೀಮತಿದೀಪಿಕಾಸತೀಶ್, ಮಹಲಿಂಗಪ್ಪ,ಚAದ್ರಶೇಖರ್ ಮತ್ತಿತರರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.