September 15, 2025
1740492347022.jpg


ಹಿರಿಯೂರು :
ಕೇಂದ್ರ ಶಿಕ್ಷಣ ಸಚಿವಾಲಯದಿಂದ ಆಯೋಜಿಸಲ್ಪಡುವ ಪ್ರೇರಣಾ ಕಾರ್ಯಕ್ರಮ ಒಂದು ಪ್ರತಿಷ್ಠಿತ ಅನುಭವಾಧಾರಿತ ಕಲಿಕಾ ಕಾರ್ಯಕ್ರಮದಲ್ಲಿ ನಮ್ಮ ಗಂಗಾ ಸೆಂಟ್ರಲ್ ಶಾಲೆಯ 9ನೇ ತರಗತಿಯ ಟಿ.ರೋಹಿತ್ ಎಂಬ ವಿದ್ಯಾರ್ಥಿ ಭಾಗವಹಿಸಿ ಅಭಿನಂದನಾಪತ್ರವನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂಬುದಾಗಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಪ್ರಶಾಂತ್ ಓಬಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವಾಲಯದಿಂದ ಆಯೋಜಿಸಲ್ಪಡುವ ಪ್ರೇರಣಾ ಕಾರ್ಯಕ್ರಮ ಒಂದು ಪ್ರತಿಷ್ಠಿತ ಅನುಭವಾಧಾರಿತ ಕಲಿಕಾ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ 2025ರ ಜನವರಿ 5 ರಿಂದ 11 ರವರೆಗೆ ಗುಜರಾತ್ ನ ವಡ್ನ ನಗರದ ಪ್ರೇರಣಾ ಕೇಂದ್ರದಲ್ಲಿ ನಡೆಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನಷ್ಟೇ ಆಯ್ಕೆಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಂಗಾ ಸೆಂಟ್ರಲ್ ಶಾಲೆಯ 9ನೇ ತರಗತಿಯ ಟಿ.ರೋಹಿತ್ ಎಂಬ ವಿದ್ಯಾರ್ಥಿ ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿ ಭಾಗವಹಿಸಿದ್ದನು. ದೇಶಾದ್ಯಂತ ಆಯ್ಕೆಯಾದ 20 ವಿದ್ಯಾರ್ಥಿಗಳಲ್ಲಿ ರೋಹಿತ್ ಕೂಡ ಒಬ್ಬನಾಗಿದ್ದ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರು ಈ ವಿದ್ಯಾರ್ಥಿಯನ್ನು ಶ್ಲಾಘಿಸಿ, ಅಭಿನಂದನಾಪತ್ರವನ್ನು ಕಳಿಸಿಕೊಟ್ಟಿರುತ್ತಾರೆ ಎಂದು ಗಂಗಾ ಸೆಂಟ್ರಲ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಪ್ರಶಾಂತ್ ಓಬಯ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading