ಚಳ್ಳಕೆರೆ: ಭಾರತ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಮತದಾನದ ಹಕ್ಕನ್ನು ಪ್ರಜೆಗಳಿಗೆ ಮೂಲಭೂತ ಹಕ್ಕನ್ನಾಗಿ ನೀಡಿದ್ದು ಈ ಹಕ್ಕನ್ನು ಚಲಾಯಿಸುವ ಮೂಲಕ ದೇಶಕ್ಕೆ ಉತ್ತಮ ಚುನಾಯಿತ ಜನಪ್ರತಿನಿಧಿಯನ್ನು ಆರಿಸುವ ಜವಾಬ್ದಾರಿಯನ್ನು ಇಂದಿನ ಯುವಕರು ತೆಗೆದುಕೊಳ್ಳಬೇಕು ಎಂದು ಚಳ್ಳಕೆರೆ ಜೆ ಎಂ ಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಹೆಚ್ ಆರ್ ಹೇಮಾ ಕರೆ ನೀಡಿದರು.













ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ಚುನಾವಣಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯಲು ಭಾರತದ ಚುನಾವಣಾ ಆಯೋಗ ಪ್ರಮುಖ ಪಾತ್ರವಹಿಸುತ್ತದೆ 1950ರ ಜನವರಿ 25ರಂದು ಚುನಾವಣಾ ಆಯೋಗದ ಸ್ಥಾಪನೆಯ ನೆನಪಿಗಾಗಿ 2011 ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಸರ್ಕಾರ ಆಚರಿಸುತ್ತಿದೆ ಯುವ ಜನತೆಯನ್ನು ಚುನಾವಣಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಈ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದು ಇಂದಿನ ಯುವ ಜನತೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಸ್ವತಹ ಮತಗಟ್ಟೆಗೆ ತೆರಳಿ ಮತದಾರರ ಗುರುತಿನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕು ಚುನಾವಣಾ ಅಧಿಕಾರಿಗಳು ತಮ್ಮ ಮನೆಗೆ ಬಂದು ಗುರುತಿನ ಚೀಟಿ ನೀಡಲಿ ಎಂಬ ತಾತ್ಸಾರ ಮನೋಭಾವ ಬಿಡಬೇಕು ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಕೇವಲ 60ರಷ್ಟು ಮತದಾನವಾಗುತ್ತಿದ್ದು ಶೇ. 60 ರಿಂದ ಚುನಾಯಿತರಾದ ಪ್ರತಿನಿಧಿಗಳು ನೂರರಷ್ಟು ಜನಗಳನ್ನು ಆಳುವ ಪರಿಸ್ಥಿತಿ ನಿರ್ಮಾಣವಾಗಿದೆ ಮತದಾನದ ದಿನ ತಮ್ಮ ಹಕ್ಕನ್ನು ಚಲಾಯಿಸದೆ ಇದ್ದು ಬೇರೆಯವರು ಮತ ಚಲಾಯಿಸಿದ ಜನಪ್ರತಿನಿಧಿಯಿಂದ ಆಳ್ವಿಕೆ ಮಾಡಿಸಿಕೊಳ್ಳುವ ಬದಲು ತಾವೇ ತಮ್ಮ ಜನಪ್ರತಿನಿಧಿಯನ್ನು ಆರಿಸುವಂತಾಗಬೇಕು ಮತದಾನ ಮಾಡುವ ದಿನ ತಮ್ಮ ವೈಯಕ್ತಿಕ ಕೆಲಸಗಳನ್ನು ದೂರವಿರಿಸಿ ಮತದಾನ ಮಾಡುವುದರಿಂದ ದೇಶಕ್ಕೆ ಉತ್ತಮ ಜನ ಪ್ರತಿನಿಧಿಯ ಕೊಡುಗೆ ನೀಡಲು ಕಾರಣವಾಗಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆಎಂ ನಾಗರಾಜ್ ಮಾತನಾಡಿ ಚುನಾವಣೆಗಳಲ್ಲಿ ಯುವ ಮತದಾರರು ಚಲಾಯಿಸುವ ಮತವು ಕ್ರಯ ವಾಗದೆ ದಾನವಾಗಬೇಕು ಮತದಾರರ ಕೈ ದಾನದ ರೂಪದಲ್ಲಿ ಇರಬೇಕೆ ಹೊರತು ತೆಗೆದುಕೊಳ್ಳುವ ರೀತಿಯಲ್ಲಿ ಇರಬಾರದು ಪ್ರತಿಯೊಬ್ಬ ಭಾರತೀಯರಲ್ಲಿ ಮತದಾನ ಮಾಡುವ ಮನಸ್ಸು ಬರಬೇಕು ಒಂದು ಮತದಿಂದ ಸರ್ಕಾರವೇ ಉರುಳಿದ ನಿದರ್ಶನಗಳು ದೇಶದಲ್ಲಿವೆ ಮತದ ಮೌಲ್ಯ ತುಂಬಾ ಅಮೂಲ್ಯವಾಗಿದ್ದು ಸಂವಿಧಾನ ನೀಡಿರುವ ಹಕ್ಕನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರೆಹಾನ್ ಪಾಷಾ ಮಾಸ್ಟರ್ ಟ್ರೈನರ್ ಈ ಎಂ ಸತೀಶ್ ಮುರಳಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೇವಲ ನಾಯಕ್ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ಉಪನ್ಯಾಸಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.