December 14, 2025
IMG-20241224-WA0206.jpg

ನಾಯಕನಹಟ್ಟಿ::ಡಿ 24. ಪ್ರತಿಯೊಬ್ಬ ವಿದ್ಯಾರ್ಥಿಯು ವಿದ್ಯಾಭ್ಯಾಸ ಮುಗಿದ ನಂತರವೂ ವಿದ್ಯಾರ್ಥಿಗಳು ತಾವು ಓದಿದ ಪ್ರಾಥಮಿಕ ಮತ್ತು ಪ್ರೌಢಶಾಲೆ ಗುರುಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ ಇದು ಮಾದರಿಯ ಕಾರ್ಯ ಎಂದು ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಸಂಸ್ಥಾಪಕ ನಿವೃತ್ತ ಮುಖ್ಯೋಪಾಧ್ಯಾಯ ಟಿ ತಿಪ್ಪೇಸ್ವಾಮಿ ರೆಡ್ಡಿ ಹೇಳಿದ್ದಾರೆ.

ಮಂಗಳವಾರ ಸಮೀಪದ ನೇರಲಗುಂಟೆ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ 2003 ನೇ ಸಾಲಿನ ಎಸ್ ಎಸ್ ಎಲ್ ಸಿ ಹಳೆ ವಿದ್ಯಾರ್ಥಿಗಳ ಬಳಗ ಹಮ್ಮಿಕೊಂಡಿದ್ದ ಗುರುವಂದನ ಮತ್ತು ಸ್ನೇಹ ಮಿಲನ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರು

ಬಯಲುಸೀಮೆ ಬರದ ನಾಡಿನಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಇದರ ನಡುವೆ ಸಾಕಷ್ಟು ಜನರು ಉತ್ತಮ ಬದುಕು ಕಟ್ಟಿಕೊಳ್ಳಲು ದಾರಿ ತೋರಿದ ಶಿಕ್ಷಕರಿಗೆ ಕೃತಜ್ಞ ಸಲ್ಲಿಸಲು 2003ರ ಎಸ್ ಎಸ್ ಎಲ್ ಸಿ ಹಳೆಯ ವಿದ್ಯಾರ್ಥಿಗಳ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮವನ್ನು ಆಯೋಜಿಸುವುದು ಶ್ಲಾಘನೀಯ 2003 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ನೋಡಿ ನನಗೆ ಜೀವನ ಸಾರ್ಥಕವಾಯಿತು ಹಾಗೂ ತನ್ನ ಸಹೋದ್ಯೋಗಿ ನೆನೆದು ಭಾವುಕರಾದರು ಹಳೆಯ ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೆ ಉತ್ತಮ ಕೀರ್ತಿ ತರುವ ಹಾಗೆ ತಮ್ಮ ಬದುಕನ್ನು ಕಟ್ಟಿಕೊಂಡು ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು

ಇನ್ನೂ ಇದೆ ವೇಳೆ ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಮಾತನಾಡಿದರು. ಪಠ್ಯ ಬೋಧನೆ ಸಮಾಜದಲ್ಲಿ ಸೌಹಾರ್ದತೆ ಪಡೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಜೀವನ ಕಾಣುತ್ತಾರೆ ಇಂತಹ ಅಪರೂಪದ ಸಂದರ್ಭದಲ್ಲಿ ಇಂದು ಕಾಣುವಂತಾಗಿದೆ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಾಜರಾತಿ ಕುಂಠಿತವಾಗುತ್ತದೆ ಆದ್ದರಿಂದ ಹಳೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಲ್ಲಿ ವಿದ್ಯಾರ್ಥಿಯ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಶಾಲೆಗೆ ಹಾಜರಾಗಿ ಉತ್ತಮ ಶಿಕ್ಷಣವನ್ನ ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು

ಇನ್ನೂ ಕಾರ್ಯಕ್ರಮದಲ್ಲಿ ಗುರುವನ್ನು ಸ್ಮರಿಸುವ ಗೀತೆಗಳನ್ನು ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಹಾಡಿ ಮನರಂಜನೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಟಿ ಅಶೋಕ್ ರೆಡ್ಡಿ, ಕಾರ್ಯದರ್ಶಿ ಟಿ. ವೆಂಕಟೇಶ ರೆಡ್ಡಿ, ಮುಖ್ಯ ಶಿಕ್ಷಕರಾದ ಸತ್ಯನಾರಾಯಣ, ನಿವೃತ್ತ ಮುಖ್ಯ ಶಿಕ್ಷಕ ಗೋವಿಂದ ರೆಡ್ಡಿ, ನಿವೃತ್ತ ಶಿಕ್ಷಕರಾದ ಟಿ. ಎಸ್. ರಿಜ್ವಾನ್, ಎಚ್ ಟಿ ರಾಮಚಂದ್ರಪ್ಪ, ಜಿ.ಟಿ. ಕೃಷ್ಣಾರೆಡ್ಡಿ, ಜಿ.ಎನ್.ನಾಗೇಂದ್ರ ರೆಡ್ಡಿ, ಎಸ್ ಎಸ್ ತೆರದಾಳ್, ರಾಮಕೃಷ್ಣ ರೆಡ್ಡಿ, ಸಿದ್ದಯ್ಯ, ಹಾಗೂ 2003ನೇ ಸಾಲಿನ ಕರ್ತವ್ಯ ನಿರ್ವಹಿಸಿದ ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕಿಯರು ಎಲ್ಲಾ ಹಳೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading