ಚಳ್ಳಕೆರೆ ಡಿ.24
ಸರಕಾರದ ಯೋಜನೆಗಳನ್ನು ಕೇವಲ ಸಹಾಯಧನ ಪಡೆಯುವುದನ್ನು ಬಿಟ್ಟು ಯೋಜನನೆ ಸದುಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ನರಹರಿನಗರದ ನರಹರಿ ಸೇವಾ ಪ್ರತಿಷ್ಠಾನ (ರಿ.)
ಪಶುಪಾಲನ ಮತ್ತು ಪಶುವೈದ್ಯ ಸೇವಾಇಲಾಖೆ,
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು
ಉತ್ಪಾದಕರ ಸಂಘಗಳ ಒಕ್ಕೂಟ.
ನರಹರಿನಗರ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇವರ ಸಂಯುಕ್ತಾಶ್ರಯದಲ್ಲಿ ಮಿಶ್ರತಳಿ ಹಸು
– ಕರುಗಳ ಪ್ರದರ್ಶನ
ಮತ್ತು
ಬರಡು ರಾಸುಗಳ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಾನು ಶಾಸಕನಾಗಿ ಕೇವಲ ಕ್ಷೇತ್ರದ ಜನತೆಗೆ ಸಹಕಾರ ಮಾಡಬಹುದು ಆದರೆ ನಾನು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕನಾಗಿ ಇಡೀ ಜಿಲ್ಲೆಯ ಜನತೆಗೆ ಸಹಕಾರ ಮಾಡುವ ಇದ್ದೇಶದಿಂದ ಸಹಕಾರ ಸಂಸ್ಥೆಯ ಪ್ರತಿನಿಧಿಯಾಗಿದ್ದೇನೆ ರೈತರಿಗೆ ಸಾರ್ವಜನಿಕರುಗೆ ಸಹಕಾರ ಸಂಸ್ಥೆಗಳಿಂದ ಹತ್ತು ಹಲವು ಸೌಲಭ್ಯಗಳಿವೆ.
ಅವುಗಳನ್ನು ಜನರಿಗೆ ತಲುಪಿಸಲು ಇಚ್ಚಾಶಕ್ತಿ.ಸೇವಾ ಮನೋಭಾವ ಇರಬೇಕು.
ಸಹಕಾರ ಸಂಸ್ಥೆವತಿಯಿಂದ ಹೈನುಗಾರಿಕೆಗೆ ಸರಕಾರ ಅನೇಕ ಉಪಯುಕ್ತ ಸೌಲಭ್ಯಗಳನ್ನು ನೀಡು ತ್ತಿದೆ. ಪ್ರತಿಯೊಬ್ಬರೂ ಇಂತಹ ಸೌಲಭ್ಯ ಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ತಿಳಿಸಿದರು.
ಶಿವಮೊಗ್ಗ ಶೀಮುಲ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾತನಾಡಿ ತಾಲೂಕಿನಲ್ಲಿ ಸ್ಥಗಿತಗೊಂಡ ಹಾಲು ಉತ್ಪಕ ಸಂಘಗಳಿ ಮತ್ತೆ ಪುನಶ್ಚೇತನ ನೀಡಲಾಗುವುದು. ನಾಲ್ಕು ಹೊಬಳಿ ಕೇಂದ್ರದಲ್ಲೂ ರೈತರಿಗೆ ಹೈನುಗಾರಿಕೆಗೆ ಉತ್ತೇಜನ ನೀಡಲು ಶಿಬಿರಗಳನ್ನು ಆಯೋಜನೆ ಮಾಡಿ ಹೈನುಗಾರಿಗೆಪ್ರೋತ್ಸಹಿಸಿ ಹೆಚ್ಚು ಹಾಲು ಉತ್ಪಾದನೆ ಮಾಡಲಾಗುವುದು.
ಸರಕಾರಿಂದ ರೈತರಿಗೆ ಬಾಕಿಯಿರುವ ಸಹಾಯಧನವನ್ನು ಸರಕಾರದ ಗಮನ ಸೆಳೆದು ರೈತರಿಗೆ ಕೊಡಿಸುವಂತೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಉಚಿತ ನಿವೇಶನ ನೀಡಿದರು ಹಾಲು ಒಕ್ಕೂಟದಿಂದ ಸ್ವಂತ ಕಟ್ಟಡ ಕಟ್ಟಿಸಿಕೊಳ್ಳಲಾಗುವುದು ಎಂದು ಶಾಕರ ಗಮನ ಸೆಳೆದರು.
ಪಶುಸಂಗೋಪನೆ ಉಪನಿರ್ದೇಶಕ ಕುಮಾರಸ್ವಾಮಿ ಮಾತನಾಡಿ ಪಶುಸಂಗೋಪನೆಯಿಂದ ಹಲವು ಯೋಜನೆಗಳಿವೆ ವರ್ಷದಲ್ಲಿ ಮೂರು ಬಾರಿ ರಾಸುಗಳಿಗೆ ಕಾಲಯ ಬಾಯಿ ಜ್ವರ ಲಸಿಕೆ ಹಾಕಲಾಗುವುದು ಪ್ರತಿಯೊಬ್ಬರೈತರು ಲಸಿಕೆ ಹಾಕಿಸುವಂತೆ ತಿಳಿಸಿದರು.
ಗ್ರಾಪಂ ಪಿಡಿಒ ರಾಮಚಂದ್ರಪ್ಪ ಮಾತನಾಡಿ ಗ್ರಾಮಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ಜಾನುವಾರು ಶೆಡ್ ನಿರ್ಮಾಣಕ್ಕೆ 55 ಸಾವಿರ ನೀಡಲಾಗುವುದು ಜಾನುವಾರುಗಳ ರಕ್ಷಣೆಗಾಗಿ ಈ ಯೋಜನೆ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.






ದಿವ್ಯ ಸಾನಿಧ್ಯ :
ಡಾ।। ಶ್ರೀ ವೈ. ರಾಜಾರಾಂ ಸ್ವಾಮೀಜಿ ವಹಿಸಿದ್ದರು.ಗ್ರಾಪಂ ಅಧ್ಯಕ್ಷೆ ಮಂಗಳಮ್ಮ
ಜಿ.ಪಿ. ರೇವಣಸಿದ್ದಪ್ಪ, ನಿರ್ದೆಶಕರು, ಶಿಮುಲ್, ಚಿತ್ರದುರ್ಗ,ಜಿ.ಬಿ. ಶೇಖರಪ್ಪ, ನಿರ್ದೇಶಕರು, ಶಿಮುಲ್, ಚಿತ್ರದುರ್ಗ,
ಎಸ್.ಜಿ. ಶೇಖರ್, ವ್ಯವಸ್ಥಾಪಕ ನಿರ್ದೇಶಕರು, ಶಿಮುಲ್, ಶಿವಮೊಗ್ಗ.
ಡಾ॥ ಶ್ರೀ ಕೆ.ಆರ್.ಮುರುಳೀಧರ್, ವ್ಯವಸ್ಥಾಪಕರು, (ಪಿ & ಐ.)ಶಿಮುಲ್, ಶಿವಮೊಗ್ಗ.
ಡಾ. ಎಸ್.ಎಂ.ಮೂರ್ತಿ, ವ್ಯವಸ್ಥಾಪಕರು, (ಪಿ & ಐ.ಶಿಮುಲ್, ಶಿವಮೊಗ್ಗ.
ಡಾ।। ಟಿ.ಎಸ್. ರೇವಣ್ಣ, ಸಹಾಯಕ ನಿರ್ದೇಶಕರು,
ಡಾ।। ಶ್ರೀನಿವಾಸಬಾಬು, ಮುಖ್ಯ ಪಶುವೈದ್ಯಾಧಿಕಾರಿಗಳು (ವಿಸ್ತರಣೆ) ಪಶುವೈದ್ಯಾಧಿಕಾರಿಗಳಾದ
ಡಾ ನರೇಶ್, ಬಿ.ಕೆ.
ಡಾ ಶ್ರೀ ಸಂಜಯ್ ಕೆ.ಪಿ,
ಡಾ। ಮುಕುಂದನಾಯಕ್, .
ನಯಾಜ್‌ಬೇಗ್ ಎಸ್. ಎಸ್ತರಣಾಧಿಕಾರಿ, ಶಿಮುಲ್, ಕೃಷ್ಣಕುಮಾರ್, ವಿಸ್ತರಣಾಧಿಕಾರಿ, ಶಿಮುಲ್,
ಡಾ।। ಸತ್ಯನಾರಾಯಣ,
ಡಾ।। ಶ್ರೀ ಪುನೀತ್, ಕಾರ್ಯಕ್ರ ಉದ್ಘಾಟನೆಗೂ ಮುನ್ನ ಶಾಸಕ ಟಿ.ರಘುಮೂರ್ತಿ ಗೋಪೂಜೆ ನೆರವೇರಿಸಿದರು:
ಬರಡು ಉತ್ತಮವಾಗಿ ಸಾಕಲ್ಪವ್ವ ಜಾನುವಾರುಗಳ, ಕರುಗಳ
ಮಾಲೀಕರಿಗೆ ಬಹುಮಾನಗಳನ್ನು ವಿತರಣೆ ಮಾಡಿದರು.
About The Author
Discover more from JANADHWANI NEWS
Subscribe to get the latest posts sent to your email.