September 15, 2025
Go.ru_.-Channabasappa.jpeg

ಚಳ್ಳಕೆರೆ:
ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ಚಳ್ಳಕೆರೆ ತಾಲೂಕಿನ ಕನ್ನಡ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಕರ‍್ಲಕುಂಟೆ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಸಾಹಿತ್ಯ ಕೊಡುಗೆ ಜತೆಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಮಾಡಿರುವ ಚನ್ನಬಸಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ಮೂಲಕ ಸಮ್ಮೇಳನದ ಸಂಭ್ರಮಕ್ಕೆ ಮುನ್ನುಡಿ ಬರೆದಂತಾಗಿದೆ. ಸಮ್ಮೇಳನ ಅಧ್ಯಕ್ಷರ ಪಟ್ಟಿಯಲ್ಲಿ ಸಾಹಿತ್ಯ ಕೃಷಿ ಇಲ್ಲದವರು ಮತ್ತು ಮಠಾಧಿಪತಿಗಳ ಹೆಸರುಗಳು ಕೇಳಿ ಬರಲಾಗಿತ್ತು. ಇಂತಹ ನಿರ್ಧಾರಗಳು ಕೈಗೂಡಬಾರದು. ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನ ಆಚರಣೆಗಳು ಮೌಲ್ಯತೆ ಕಾಪಾಡಿಕೊಳ್ಳುವ ರೀತಿ ಸಮ್ಮೇಳನಗಳು ರೂಪುಗೊಳ್ಳಬೇಕು. ಈ ಎಲ್ಲಾದರ ನಡುವೆ ಜನಪದ ವಿಧ್ವಾಂಸರು ಮತ್ತು ಹಿರಿಯ ಸಾಹಿತಿ ಚನ್ನಬಸಪ್ಪ ಅವರ ಆಯ್ಕೆ ಸಮಾಜಕ್ಕೆ ಮಾದರಿಯಾಗಿದೆ ಎಂದಿದ್ದಾರೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading