ಹೊಸದುರ್ಗ:ತಾಲೂಕಿನ ಹಲವು ಕಡೆಗಳಲ್ಲಿ ಕಡಲೆ ಬೆಳೆಯನ್ನ ಬೆಳೆಯಲಾಗುತ್ತಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ಕಡಲೆ ಬೆಳೆಗೆ ಸೊರಗು ರೋಗ ಕಾಣಿಸಿಕೊಂಡು ಬೆಳೆ ಬೆಳೆಯುತ್ತಿರುವ ರೈತರಲ್ಲಿ ಒಂದು ರೀತಿಯಲ್ಲಿ ಆತಂಕ ಮನೆ ಮಾಡಿದ್ದು ರೈತರು ಅತಂಕ ಪಡುವ ಅಗತ್ಯವಿಲ್ಲ ಎಂದು ಇಲ್ಲಿನ ಸಹಾಯಕ ಕೃಷಿ ನಿರ್ಧೇಶಕ ಸಿ.ಎಸ್.ಈಶ ರೈತರಲ್ಲಿ ಆತ್ಮ ಸ್ಥೈರ್ಯ ತುಂಬಲು ಮುಂದಾಗಿದ್ದಾರೆ.
ತಾಲೂಕಿನ ಬಾಗೂರಿನಲ್ಲಿ ಕ್ಷೇತ್ರ ಬೇಟಿ ಮಾಡಿ ರೈತರಿಗೆ ಕಡಲೆ ರೋಗದ ಬಗ್ಗೆ ಮಾಹಿತಿ ನೀಡಿದ ಅವರು ಕಡಲೆ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರಗುತ್ತವೆ, ಗಿಡಗಳು ಬೆಳವಣಿಗೆ ಹಂತದಿಂದ ಹೆಚ್ಚಾಗಿ ಹೂವಿನ ಹಂತದಿಂದ ಕಾಳು ಕಟ್ಟುವವರೆಗೆ ಸಾಯುತ್ತಿರುತ್ತವೆ ಇವು ರೋಗದ ಚಿನ್ಹೆಗಳಾಗಿದ್ದು ಇದನ್ನು ನಿಯಂತ್ರಿಸುವ ಸಲುವಾಗಿ ರೈತರು ಅನುಸರಿಸಬೇಕಾದ ಕ್ರಮಗಳೆಂದರೆ ಸೊರಗು ರೋಗ ಬಂದಿರುವ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಬಿತ್ತನೆಗೆ ಮೊದಲು ಪ್ರತಿ ಎಕರೆಗೆ ಬೇಕಾಗುವ ರೈಜೋಬಿಯಂ ಹಾಗೂ ರಂಜಕ ಕರಗಿಸುವ ಜೀವಾಣುಗಳಿಂದ ಲೇಪಿಸಿ ಬಿತ್ತನೆ ಮಾಡಬೇಕು ಅಥವಾ ಕಾರ್ಬೆಂಡೈಜಿA ಅಥವಾ ಥೈರಾಮ್ 2ಗ್ರಾಂ ಪ್ರತಿ 1 ಕೆಜಿ ಬೀಜಕ್ಕೆ ಲೇಪಿಸಿ ಬಿತ್ತನೆ ಮಾಡಬೇಕು. ಬಿತ್ತನೆಗೆ 3ವಾರ ಮೊದಲು ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿ ಭೂಮಿಗೆ ಹಾಕಬೇಕು. ಕಾರ್ಬೆಂಡೈಜಿ50ಡಬ್ಲೂ.ಪಿ 2 ಗ್ರಾಂ/ಲೀ ಮತ್ತು ಟ್ರೆöÊಕೋಡರ್ಮಾ ವಿರಿಡೇ 5 ಗ್ರಾಂ/ಲೀ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು. ಕಾರ್ಬೆಂಡೈಜಿಂ50 ಡಬ್ಲೂ.ಪಿ 1ಗ್ರಾಂ/ಲೀ ನೀರಿನೊಂದಿಗೆ ಬೆರೆಸಿ ಬುಡದ ಸುತ್ತಲೂ ತೇವಗೊಳಿಸಬೇಕು. ಬೆಳೆ ಪರಿವರ್ತನೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು (ಹಿಂಗಾರಿ ಜೋಳದ ಬೆಳೆ ಹಾಕಬೇಕು) ಎಂದು ಅವರು ಮಾಹಿತಿ ನೀಡಿದರು.


ಹೊಸದುರ್ಗ ತಾಲೂಕು ಬಾಗೂರಿನಲ್ಲಿ ಕ್ಷೇತ್ರ ಬೇಟಿ ಮಾಡಿ ರೈತರಿಗೆ ಕಡಲೆ ರೋಗದ ಬಗ್ಗೆ ಮಾಹಿತಿ ನೀಡುತ್ತಿರುವ ಸಹಾಯಕ ಕೃಷಿ ನಿರ್ಧೇಶಕ ಸಿ.ಎಸ್.ಈಶ.
ಕಡಲೆ ಬೆಳೆಗೆ ಸೊರಗು ರೋಗ ಕಾಣಿಸಿಕೊಂಡಿರುವುದು.
About The Author
Discover more from JANADHWANI NEWS
Subscribe to get the latest posts sent to your email.