March 17, 2026
1761314805122.jpg

ಮೊಳಕಾಲ್ಮೂರುಅ.24:
ಸ್ವಸ್ಥ ನಾರಿ ಸಶಕ್ತ ಪರಿವಾರ್ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದಂದು ಜಾರಿಗೆ ತರಲಾಗಿದೆ, ಆರೋಗ್ಯವಂತ ನಾರಿಯರು ಆರೋಗ್ಯವಂತ ಕುಟುಂಬವನ್ನು ಕಟ್ಟುತ್ತಾರೆ ಎನ್ನುವುದೇ ಈ ವಾಕ್ಯದ ಭಾವಾರ್ಥವಾಗಿದೆ. ದೈಹಿಕವಾಗಿ ಮಾನಸಿಕವಾಗಿ ಮನೆಯ ಯಜಮಾನಿ ಆರೋಗ್ಯವಾಗಿದ್ದಲ್ಲಿ ಮಾತ್ರ ಆರೋಗ್ಯವಂತ ಕುಟುಂಬ ನಿರ್ಮಾಣ ಸಾಧ್ಯ ಎಂದು ಮೊಳಕಾಲ್ಮೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್ ತಿಳಿಸಿದರು.

ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಎಸ್.ಪಿ.ಎಸ್.ಆರ್ ಪಿಯು ಕಾಲೇಜು ಹಾಗೂ ಪ್ರೌಢಶಾಲೆ ಹಾಗೂ ಗ್ರಾಮ ಪಂಚಾಯಿತಿ ರಾಂಪುರ ಇವರುಗಳ ಸಹಯೋಗದೊಂದಿಗೆ ಶುಕ್ರವಾರ ಎಸ್.ಪಿ.ಎಸ್.ಆರ್ ಪಿಯು ಕಾಲೇಜಿನ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೋಷಣ ಮಾಸಾಚರಣೆ ಹಾಗೂ ಸ್ವಸ್ಥ ನಾರಿ ಸಶಕ್ತ ಪರಿವಾರ್ ತಂಬಾಕು ಮುಕ್ತ ಯುವ ಅಭಿಯಾನ ವಿಕಸಿತ ಭಾರತ್ 2047 ಕುರಿತಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡಿದ ರಾಂಪುರÀ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ರವಿಶಂಕರ್ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಪ್ರತಿಯೊಬ್ಬರೂ ಯೋಜನೆಗಳ ಮಾಹಿತಿಯನ್ನು ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಿಯು ಕಾಲೇಜಿನ ಸಹ ಪ್ರಾಂಶುಪಾಲ ಬೋರಯ್ಯ ಮಾತನಾಡಿ ವಿಕಸಿತ ಭಾರತ 2047 ಕ್ಕೆ ಭಾರತವು ಸದೃಢ ಹಾಗೂ ಸಂಪತ್ ಭರಿತ ದೇಶವಾಗುವುದರಲ್ಲಿ ಯುವ ಜನತೆಯ ಪಾತ್ರ ಅಪಾರವಾಗಿದೆ. ಪ್ರತಿಯೊಬ್ಬರು ಭಾರತವನ್ನು ವಿಶ್ವಗುರು ಮಾಡಲು ಶ್ರಮವಹಿಸಬೇಕು. ಯುವಶಕ್ತಿ ಬಳಕೆಯಿಂದ ಮಾತ್ರ ವಿಕಸಿತ ಭಾರತ್ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಪ್ರಭುದೇವ.ಬಿ.ಎಂ ಮಾತನಾಡಿ ತಂಬಾಕು ಆರೋಗ್ಯಕ್ಕೆ ಹಾನಿಕರ ಪ್ರತಿಯೊಬ್ಬ ಯುವಕರು ತಂಬಾಕನ್ನು ನಿಷೇಧಿಸಬೇಕು ತಂಬಾಕು ಕ್ಯಾನ್ಸರ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಕ ಗುರುಮೂರ್ತಿ ಆಪ್ತ ಸಮಾಲೋಚಕ ಕಾಂತರಾಜು ಇಸಿಓ ಲೋಹಿತ್ ಕುಮಾರ್ ಭಾಗವಹಿಸಿದ್ದರು. ಕೇಂದ್ರ ಸಂವಹನ ಇಲಾಖೆಯ ಎನ್.ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading