March 17, 2026
1761311753985.jpg

ಚಿತ್ರದುರ್ಗಅ.24:
ಮೂರು ತಿಂಗಳುಗಳ ಹಕ್ಕು ಪಡೆಯದ ಠೇವಣೆಗಳ ಇತ್ಯರ್ಥಪಡಿಸುವ ರಾಷ್ಟ್ರವ್ಯಾಪ್ತಿ ಅಭಿಯಾನಕ್ಕೆ (ಅಕ್ಟೋಬರ್-ಡಿಸೆಂಬರ್ 2025) ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯದ ಆದೇಶದಂತೆ ಮೂರು ತಿಂಗಳುಗಳ ಹಕ್ಕು ಪಡೆಯದ ಠೇವಣಿಗಳ ಇತ್ಯರ್ಥಪಡಿಸುವ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಎಂ.ರಾಘವೇಂದ್ರ, ಹಣಕಾಸು ಸಚಿವಾಲಯದ ಆಜ್ಞೆಯ ಮೇರೆಗೆ ಈ ಮೂರು ತಿಂಗಳುಗಳ ಕಾಲ ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳು ಹಾಗೂ SEBI, IRDAI, IEPF, RBI ನ ವತಿಯಿಂದ ನಡೆಸಲ್ಪಡುತ್ತಿರುವ ಅಭಿಯಾನದಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಹಕ್ಕು ಪಡೆಯದ ಠೇವಣಿಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಲ್ಲಾ ಬ್ಯಾಂಕ್ ಶಾಖೆಗಳಿಂದ 308898 ಖಾತೆಗಳಿದ್ದು, ಸುಮಾರು ರೂ.66.97 ಕೋಟಿ ರೂಗಳು ಹಕ್ಕು ಪಡೆಯದ ಠೇವಣಿಗಳಿವೆ. ಈ ಮೂರು ತಿಂಗಳುಗಳ ಅವಧಿಯಲ್ಲಿ ಗರಿಷ್ಟ ಪ್ರಮಾಣದ ಖಾತೆಗಳನ್ನು ಇತ್ಯರ್ಥಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಲ್ಲಾ ಬ್ಯಾಂಕರುಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಎಲ್ಲ ಪ್ರಮುಖ ಬ್ಯಾಂಕಿನ ಅಧಿಕಾರಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading