ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಮಧ್ಯ ಕರ್ನಾಟಕದ ಜಲಪಾತ್ರೆ ಎಂದೇ ಖ್ಯಾತಿ ಪಡೆದಿರುವ ವಿ.ವಿ.ಸಾಗರ ಜಲಾಶಯ ೪ನೇ ಬಾರಿಗೆ ಕೋಡಿ ಬೀಳುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು ಇತಿಹಾಸವಾದರೆ ಇದು ಅಣೆಕಟ್ಟೆಯ ಮುಂಭಾಗದ ಜನರಿಗೆ ಸಂತಸವನ್ನುAಟು ಮಾಡಿದರೆ, ಹಿನ್ನೀರಿನ ಜನರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಬಹಳಷ್ಟು ರೈತರ ಖಾಸಗಿ ಜಮೀನುಗಳು ಮುಳುಗಡೆಯಾಗುತ್ತಿದ್ದು, ರೈತರ ಮತ್ತು ಜನರ ಕಣ್ಣಲ್ಲಿ ಕಣ್ಣೀರ ತರಿಸಿದೆ.
ನಿಜಸ್ಧಿತಿ ಏನಪ್ಪಾ ಎಂದರೆ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ ೧೩೩.ಅಡಿಗೆ ತಲುಪಿದ್ದು, ಇದೇ ತಿಂಗಳೊಳಗೆ ೧೩೫.ಅಡಿಗೆ ತಲುಪುವ ಸಾಧ್ಯತೆಯಿದೆ. ತಾಲೂಕಿನ ಪೂಜಾರಹಟ್ಟಿ, ಅಯ್ಯನಹಳ್ಳಿ, ಬೇವಿನಹಳ್ಳಿ, ಕೆರೆಕೋಡಿಹಟ್ಟಿ, ಎಂ.ಮಲ್ಲಾಪುರ, ಅತ್ತಿಮಗೆ, ಅರೇಹಳ್ಳಿ, ಇಂಡೇ ದೇವರಹಟ್ಟಿ, ಸಿದ್ದಪ್ಪನಹಟ್ಟಿ ಮತ್ತು ಲಿಂಗದಹಳ್ಳಿ ಇನ್ನಿತರ ಗ್ರಾಮಗಳ ರೈತರ ಖಾಸಗಿ ಜಮೀನುಗಳು ಮುಳುಗಡೆ ಆಗುತ್ತಿದ್ದು, ಸಂಕಷ್ಟದ ಸ್ಥಿತಿ ಎದುರಾಗಿದೆ.ಡ್ಯಾಮ್ ನಿರ್ಮಾಣವಾಗಿ ೮೯ ವರ್ಷಗಳ ಬಳಿಕ ಮೊದಲ ಬಾರಿಗೆ ಜಲಾಶಯ ೧೯೩೪ ರಲ್ಲಿ ಕೋಡಿ ಬಿದ್ದಿತ್ತು. ಅದಾದ ಮೇಲೆ ೨೦೨೨ ರಲ್ಲಿ ೨ ನೇ ಬಾರಿಗೆ, ೨೦೨೫ರ ಜನವರಿ ತಿಂಗಳಲ್ಲಿ ೩ನೇ ಬಾರಿಗೆ ಕೋಡಿ ಬಿದ್ದಿತ್ತು. ಅದರಂತೆಯೇ, ೪ನೇ ಬಾರಿಗೆ ಕೋಡಿ ಬೀಳುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಜಲಾಶಯ ೨೦೨೨ ರಲ್ಲಿ ಕೋಡಿ ಬಿದ್ದಂತಹ ಸಂದರ್ಭದಲ್ಲಿ ನೀರಿನ ಮಟ್ಟ ೧೩೫ ಅಡಿಗೆ ತಲುಪಿತ್ತು. ಇದರಿಂದಾಗಿ ಹಿನ್ನೀರಿನ ಸಮೀಪದ ಬಹಳಷ್ಟು ಗ್ರಾಮಗಳ ಅಡಿಕೆ, ತೆಂಗು, ದಾಳಿಂಬೆ ಮತ್ತು ಇನ್ನಿತರ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿದ್ದವು. ಇದರಿಂದ ಜನರಲ್ಲಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ, ೨೦೨೨ರಲ್ಲಿ ಆದಂತಹ ಪರಿಸ್ಥಿತಿ ಮತ್ತೊಮ್ಮೆ ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ.
ವಿವಿ ಸಾಗರದ ಹಿನ್ನೀರಿನಲ್ಲಿ ಅನೇಕ ಗ್ರಾಮಗಳು, ಸಾಕಷ್ಟು ಜಮೀನುಗಳು ಇವೆಲ್ಲ ವಿವಿ ಸಾಗರದ ಹಿನ್ನೀರಿನ ಒಡೆತಕ್ಕೆ ನಲುಗಿ ಅನೇಕ ಗ್ರಾಮದ ಮನೆಗಳು ಜಮೀನುಗಳು ಮುಳುಗಡೆಯಾಗಿವೆ ಕೆಲವರಿಗೆ ಇರಲು ಮನೆಯಿಲ್ಲ ಇನ್ನು ಕೆಲವರಿಗೆ ಜಮೀನಿನಲ್ಲಿ ಬೆಳೆದ ಬೆಳೆ ಕೈಗೆ ಸಿಗಲಿಲ್ಲ ಸುಮಾರು ವರ್ಷಗಳಿಂದ ಬೆಳೆಸಿದ್ದ ತೆಂಗಿನ ಫಲ ಕೈಗೆ ಸಿಗುತ್ತಿಲ್ಲ ಇಂತಹ ಶೋಚನೀಯ ಸ್ಧಿತಿ ರೈತರ ಜೀವನವನ್ನೆ ಒಂದು ರೀತಿಯಾಗಿ ಅಲ್ಲೋಲ ಕಲ್ಲೋಲವನ್ನಾಗಿಸಿದೆ ಅಕಾಲಿಕ ವಿಪರೀತ ಮಳೆಬಂದಾಗ, ಮಳೆಗಾಲದಲ್ಲಿ ವಿಪರೀತ ಮಳೆ ಬಂದಾಗ ಕೆರೆ ಕಟ್ಟೆಗಳು ಕೋಡಿ ಬಿದ್ದಾಗ, ವಿವಿ ಸಾಗರದ ಹಿನ್ನೇರು ಪ್ರದೇಶಕ್ಕೆ ನಿರೀಕ್ಷೆ ಮಾಡಲಾಗದಷ್ಟು ನೀರು ನುಗ್ಗಿದಾಗ ಆ ಪ್ರದೇಶದ ರೈತರ ಕಣ್ಣಲ್ಲಿ ಕಣ್ಣೀರ ಹನಿಗಳ ಜೋತೆಗೆ ಸುರಿಯುತ್ತದೆ ರಕ್ತದ ಕಣ್ಣೀರು, ಇದೊಂದು ರೀತಿಯ ಕಣ್ಣೀರಿನ ಕಥೆಯಾಗಿದೆ. ವಿವಿ ಸಾಗರ ಹಿನ್ನೀರಿನ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಪೂಜಾರಹಟ್ಟಿ, ಲಕ್ಕಿಹಳ್ಳಿ, ಮಾದಿಹಳ್ಳಿ, ಶೀರನಕಟ್ಟೆ, ಐಯ್ಯನಹಳ್ಳಿ, ಬೇವಿನಹಳ್ಳಿ, ಅತ್ತಿಮಗ್ಗೆ ಕಾರೇಹಳ್ಳಿ, ಜಿ ಎನ್ ಕೆರೆ ಹಾಗೂ ಮತ್ತೋಡು ಗ್ರಾಪಂ ವ್ಯಾಪ್ತಿಯ ಸಾಕಷ್ಟು ಪ್ರದೇಶಗಳು ಹಿನ್ನೀರಿನಿಂದ ಮುಳುಗಡೆಯಾಗಿವೆ.

ಕಳೆದ ಭಾರಿ ಇಲ್ಲಿ ಬೇಟಿ ನೀಡಿ ಪರಿಶೀಲಿಸಿದ್ದ ವೀಕ್ಷಣಾ ತಂಡದ ಮುಖ್ಯಸ್ಥ ಹಾಗೂ ಡಿಸಿಎಂ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಬರವ ಏಪ್ರಿಲ್‌ನಲ್ಲಿ ವಿವಿಸಾಗರ ಜಲಾಶಯಕ್ಕೆ ಸ್ಪಿಲ್ಲರ್ ಗೇಟ್ ಅಳವಡಿಕೆಗೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದ್ದರು.ವಿವಿಸಾಗರ ಜಲಾಶಯದ ಹಿನ್ನಿರಿನ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಈ ಭಾಗದ ಶಾಸಕರ ಮನವಿಯಂತೆ ಹಿನ್ನಿರಿನ ಪರಿಸ್ಥಿತಿಯ ಬಗ್ಗೆ ವರದಿ ನೀಡುವಂತೆ ಮೂವರು ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿತ್ತು. ಅದರಂತೆ ಅಂದೇ ಸ್ಧಳ ಪರಿಶೀಲನೆಯೂ ನಡೆದಿತ್ತು, ಅದರಂತೆ ಕೇಂದ್ರ ಸರ್ಕಾರ ಇದಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಅನುಮೋದನೆ ದೊರೆತ್ತಿದ್ದು ವಿಶ್ವ ಬ್ಯಾಂಕಿನ ಆರ್ಥಿಕ ಸಹಾಯದಿಂದ ೧೩೦ ಅಡಿಗೆ ಸೀಮಿತವಾದಂತೆ ಹೆಚ್ಚುವರಿ ನೀರು ಸರಾಗವಾಗಿ ಹರಿಯಲು ಸ್ಪಿಲ್ಲರ್ ಗೇಟ್ ಅಳವಡಿಕೆ ಮಾಡುವ ಭರವಸೆಯನ್ನ ತಜ್ಞರು ನೀಡಿ ಹೋಗಿದ್ದರು ಅದರಂತೆ ಈ ಕಾರ್ಯ ಪ್ರಗತಿಯಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಕ್ಷೇತ್ರದ ಶಾಸಕರಾದ ಬಿ.ಜಿ.ಗೋವಿಂದಪ್ಪನವರು.
ಸ್ಥಳಕ್ಕೆ ಶಾಸಕರು, ಅಧಿಕಾರಿಗಳ ಭೇಟಿ: ಜಲಾಶಯದ ಹಿನ್ನೀರಿಗೆ ಸಮೀಪವಿರುವ ಗ್ರಾಮಗಳ ಜನರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಹಿಸಲು ಶಾಸಕ ಬಿ.ಜಿ.ಗೋವಿಂದಪ್ಪ, ತಹಸೀಲ್ದಾರ್ ತಿರುಪತಿ ಪಾಟೀಲ್, ತಾ.ಪಂ.ಇಒ ಸುನೀಲ್ ಕುಮಾರ್ ಸೇರಿದಂತೆ ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ.
ಬಾಕ್ಸ್ ಐಟಂ
ವಿವಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಸೇತುವೆಗಳು, ರಸ್ತೆಗಳು ಮತ್ತು ಮನೆಗಳ ಅಭಿವೃದ್ಧಿಗೆ ಅಂದಾಜು ಪಟ್ಟಿ ಸಲ್ಲಿಸಿದೆ. ಈ ಬಗ್ಗೆ ಇದೇ ತಿಂಗಳ ೨೬ ಕ್ಕೆ ಸಭೆ ನಿಗದಿಯಾಗಿದೆ. ೧೨೪.ಕೋಟಿ ರೂ.ಗೆ ಅನುಮೋದನೆಯಾಗಿ, ಶೀಘ್ರವೇ ಕಾರ್ಯ ಪೂರ್ಣಗೊಳ್ಳಲಿದೆ. ತಾಲೂಕಿನ ೨೨೧ ಜನರು ಸ್ವಂತ ಜಮೀನು ಮುಳುಗಡೆಯಾಗಿದೆ ಎಂದು ಅರ್ಜಿ ಕೊಟ್ಟಿದ್ದು, ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳಲಾಗಿದೆ. ನಿಮ್ಮ ಪರವಾಗಿ ನಾನು ಮತ್ತು ಸರ್ಕಾರವಿದ್ದು, ಎದುರುವ ಅವಶ್ಯಕತೆಯಿಲ್ಲ. ಕೋಡಿ ನೀರು ಹರಿಯುವ ಮುಖ್ಯ ರಸ್ತೆಯ ಜಾಗದಲ್ಲಿ ಸೇತುವೆ ನಿರ್ಮಾಣಕ್ಕೆ ಶೀಘ್ರವೇ ಪೂಜೆ ಸಲ್ಲಿಸಿ, ಡಿಸೆಂಬರ್ ತಿಂಗಳಿನೊಳಗಡೆ ಪೂರ್ಣಗೊಳಿಸಲಾಗುವುದು
ಬಿ.ಜಿ.ಗೋವಿಂದಪ್ಪ,ಶಾಸಕರು
ಹೊಸದುರ್ಗ ವಿಧಾನ ಸಭಾ ಕ್ಷೇತ್ರಬಾಕ್ಸ್ ಐಟಂ
ವಿ.ವಿ.ಸಾಗರ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತಿದ್ದು, ತಾಲೂಕಿನ ಪೂಜಾರಹಟ್ಟಿ, ಎಂ.ಮಲ್ಲಾಪುರ ಮತ್ತು ಇನ್ನಿತರ ಗ್ರಾಮಗಳಿಗೆ ಜಿಲ್ಲಾಧಿಕಾರಿಯೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಜನರಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಲಾಗಿದ್ದು, ನಮ್ಮಿಂದ ಬೇಕಾದಂತಹ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಜನರು ಆತಂಕ ಪಡುವ ಅಗತ್ಯವಿಲ್ಲ.
ತಿರುಪತಿ ಪಾಟೀಲ್
ತಹಶೀಲ್ದಾರರು, ಹೊಸದುರ್ಗ
About The Author
Discover more from JANADHWANI NEWS
Subscribe to get the latest posts sent to your email.