ಭಕ್ತಿ ಮತ್ತು ನಂಬಿಕೆಗಳ ಸಂಗಮವೇ ನಮ್ಮ ಹಿಂದೂ ಧರ್ಮ ಎಂದು ಚಳ್ಳಕೆರೆಯ ನಿಕಟ ಪೂರ್ವ ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು .







ಚಳ್ಳಕೆರೆ ತಾಲೂಕ ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಕಾಳಿಕಾಂಬ ದೇವಿಯ ಪ್ರತಿಷ್ಠಾಪನ ಸಂದರ್ಭದಲ್ಲಿ ಹಾಜರಿದ್ದು ಮಾತನಾಡಿ ಇಂದು ಸನಾತನ ಸಂಸ್ಕೃತಿಯಲ್ಲಿ ಧಾರ್ಮಿಕ ಬೇರುಗಳು ಗಟ್ಟಿಯಾಗಿದೆ ಎಲ್ಲಿ ದಾರ್ಮಿಕ ಮತ್ತು ಅಧ್ಯಾತ್ಮಿಕ ನೆಲೆಗಟ್ಟು ಗಟ್ಟಿಯಾಗಿರುತ್ತದೆ ಅಲ್ಲಿ ಮನುಷ್ಯನ ಏಕಾಗ್ರತೆ ಮತ್ತು ಪ್ರಶಾಂತತೆ ಮನೆ ಮಾಡಿರುತ್ತದೆ ಇಂದಿನ ವೈಜ್ಞಾನಿಕ ಯಾಂತ್ರಿಕ ಜೀವನದಲ್ಲಿ ಇಂತಹ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಂಡಲ್ಲಿ ಮನುಷ್ಯನ ಏಕಾಗ್ರತೆ ಜಾಸ್ತಿಯಾಗಿ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಮನೆ ಮಾಡುತ್ತದೆ ಹಾಗಾಗಿ ನಮ್ಮ ಪೂರ್ವಜರು ಹಾಕಿ ಕೊಟ್ಟಿರುವಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಅಡೆತಡೆ ಇಲ್ಲದೆ ಸಾಗಲಿ ಎಂದು ಆಶಿಸಿದರು
ಪಟೇಲ್ ಜಿ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು ಮಾತನಾಡಿ ಗೌಡಗೆರೆ ಗ್ರಾಮದ ವಿಶ್ವಕರ್ಮ ಸಮಾಜದವರು ಎಷ್ಟೇ ಬಡತನ ಇದ್ದರೂ ಕೂಡ ಇಂಥದೊಂದು ಧಾರ್ಮಿಕ ಕಾರ್ಯಕ್ಕೆ ಕೈ ಹಾಕಿ ತಾಯಿ ಕಾಳಿಕಾದೇವಿಯ ಪ್ರತಿಷ್ಠಾಪನೆ ಮತ್ತು ಆರಾಧನೆ ನಮ್ಮೆಲ್ಲರಿಗೂ ಸ್ಪೂರ್ತಿ ತಂದಿದೆ ಎಂದು ಅಭಿನಂದಿಸಿದರು ತಿಪ್ಪೇಸ್ವಾಮಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಎಂ ಓ ಟಿ ಸ್ವಾಮಿ ಮಾತನಾಡಿ ಧಾರ್ಮಿಕ ತಪ್ಪೋ ಭೂಮಿ ಆದಂತ ನಾಯಕನಹಟ್ಟಿ ಹೋಬಳಿಯಲ್ಲಿ ಇಂತಹ ಆರಾಧನೆಗಳು ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಸಾಮರಸ್ಯ ಮೂಡುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು ಬಸವರಾಜು ಮುಂತಾದವರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.