December 14, 2025
FB_IMG_1729777214965.jpg


ಚಿತ್ರದುರ್ಗ ಅ.24:
ಸಾಂಕ್ರಾಮಿಕ ಕಾಲುಬಾಯಿ ರೋಗ ಹರಡದಂತೆ ತಡೆಯಲು, ತಪ್ಪದೇ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಜಿ.ಪಂ.ಸಿಇಓ ಎಸ್.ಜೆ ಸೋಮಶೇಖರ್ ಕರೆ ನೀಡಿದರು.
ಚಿತ್ರದುರ್ಗ ತಾಲ್ಲೂಕು ವಿಜಾಪುರ ಗ್ರಾಮದಲ್ಲಿ ಗುರುವಾರ, 6ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಲುಬಾಯಿ ರೋಗ ಒಂದು ರಾಸಿನಿಂದ ಇನ್ನೊಂದಕ್ಕೆ ರಾಸುವಿಗೆ ಅತಿ ಬೇಗನೆ ಹರಡುತ್ತದೆ. ರೋಗಗ್ರಸ್ತ ರಾಸುವಿನ ನೇರ ಸಂಪರ್ಕವಷ್ಟೇ ಅಲ್ಲದೇ ಗಾಳಿಯ ಮೂಲಕ ತುಂಬಾ ದೂರದವರೆಗೂ ರೋಗ ಹರಡುತ್ತದೆ. ಆದ್ದರಿಂದ ಸಾರ್ವಜನಿಕರು ಅತಿ ಜಾಗರೂಕರಾಗಿರಬೇಕು. ಕಾಲುಬಾಯಿ ರೋಗ ಲಕ್ಷಣ ಕಂಡುಬAದ ರಾಸುಗಳನ್ನು ತಕ್ಷಣವೇ ಹಿಂಡಿನಿAದ ಬೇರ್ಪಡಿಸಬೇಕು. ಜಾತ್ರೆಗಳಿಗೆ ಇವುಗಳನ್ನು ಕೊಂಡಯ್ಯಬಾರದು. ಇದರಿಂದ ಬೇರೆ ಬೇರೆ ಪ್ರದೇಶದ ರಾಸುಗಳಿಗೂ ಕೂಡ ರೋಗ ಶೀಘ್ರವಾಗಿ ಹರಡುತ್ತದೆ ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.
ಕಾಲುಬಾಯಿ ರೋಗದ ರೋಗಾಣುಗಳು ಕಲುಷಿತಗೊಂಡ ಮೇವು ಹಾಗೂ ನೀರು, ರೋಗಗ್ರಸ್ತ ರಾಸಿನ ಮೂತ್ರ, ಸಗಣಿ, ಹಾಲಿನ ಮುಖಾಂತರವೂ ಹರಡುತ್ತದೆ. ಆದ್ದರಿಂದ ಆರೋಗ್ಯವಂತ ಜಾನುವಾರಗಳಿಗೆ ರೋಗ ಬರದಂತೆ ತಡೆಯಲು ಮುಂಜಾಗೃತಾ ಕ್ರಮವಾಗಿ ಪ್ರತಿ ವರ್ಷ ತಪ್ಪದೇ ಕಾಲು ಹಾಗೂ ಬಾಯಿರೋಗದ ಲಸಿಕೆ ಹಾಕಿಸಬೇಕು. ರೋಗ ಪೀಡಿತ ಪ್ರದೇಶಗಳಿಂದ ಪಶುಗಳ ಆಹಾರ ಖರೀದಿಸಬಾರದು. ರೋಗಗ್ರಸ್ತ ರಾಸುವಿನ ಹಾಲು ಕುಡಿವ ಕರುವನ್ನು ತಕ್ಷಣ ಬೇರ್ಪಡಿಸಿ ಬೇರೆ ಹಸುವಿನ ಹಾಲ ಕುಡಿಸಬೇಕು. ರೋಗದಿಂದ ಸತ್ತ ದನ ಆಳವಾದ ಗುಂಡಿಯ ತಳಕ್ಕೆ ಸುಣ್ಣ ಹರಡಿ ಕಳೇಬರವನ್ನು ಹಾಕಿ ಮತ್ತೆ ಅದರ ಮೇಲೆ ಸುಣ್ಣಹಾಕಿ ಮುಚ್ಚಬೇಕು. ಇದರಿಂದ ದನಕರುಗಳಿಗೆ ಕಾಲು ಹಾಗೂ ಬಾಯಿ ಜ್ವರದಿಂದ ದೂರವಿಡಲು ಸಾಧ್ಯ ಆದ್ದರಿಂದ ಎಲ್ಲಾ ಗ್ರಾಮದ ಎಲ್ಲಾ ರೈತ ಬಾಂದವರು ತಮ್ಮ ರಾಸುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸುವುದರ ಮೂಲಕ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಕೋರಿದರು.
ಇದೇ ಸಂದರ್ಭದಲ್ಲಿ ವಿಜಾಪುರ ಮತ್ತು ಓಬವ್ವನಾಗತಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿ, ಈ ಕಾರ್ಯಕ್ರಮದ ಉಪಯುಕ್ತತೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಹಾಗೇ ರೈತರೊಂದಿಗೆ ಚರ್ಚಿಸಿದರು. ಸಿರಿಗೆರೆ ಪಶು ಚಿಕಿತ್ಸಾಲಯಕ್ಕೆ ಬೇಟಿ ನೀಡಿ ಲಸಿಕೆ ದಾಸ್ತಾನು, ಶೀತಲಿಕರಣ ನಿರ್ವಹಣೆ ಬಗ್ಗೆ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್ ಪರಿಶೀಲಿಸಿದರು.
ಅ.21 ರಿಂದ ನ.20 ರವರೆಗೆ ಒಂದು ತಿಂಗಳ ಕಾಲ ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ, ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ರೈತರ ಮನೆಗಳಿಗೆ ಲಸಿಕೆದಾರರು ಭೇಟಿ ನೀಡಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ನೀಡುತ್ತಿದ್ದಾರೆ.
ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡುವ ವೇಳೆ ವಿಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಸ್ವಾಮಿ, ಸದಸ್ಯ ಶಿವಚಂದ್ರನಾಯಕ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಕುಮಾರ್, ಸಹಾಯಕ ನಿರ್ದೇಶಕಿ. ಡಾ ಜಿ. ಇಂದಿರಾಬಾಯಿ, ಸ್ಥಳೀಯ ಪಶುವೈದ್ಯಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ,ನ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ಸಿ.ತಿಪ್ಪೇಸ್ವಾಮಿ, ವಿಸ್ತರಣಾಧಿಕಾರಿ ಡಾ. ಮುರಗೇಶ್, ಪಶುವೈದ್ಯಕೀಯ ಪರೀಕ್ಷಕರಾದ ಬಸವರಾಜ್ ಮತ್ತು ಸಿಬ್ಬಂದಿ ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading