ಚಳ್ಳಕೆರೆ ಅ.24
ಚಳ್ಳಕೆರೆ ಅ.24 ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ಲಂಚ ನೀಡಲು ಅಥವಾ ಆಮೀಶವೊಡ್ಡಿದರೆ ಅಂತವರ ಬಗ್ಗೆ ದೂರು ನೀಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಪೋಲಿಸ್ ಅಧೀಕ್ಷಕ ವಾಸುದೇವ್ ಕಿವಿಮಾತು ಹೇಳಿದರು.






ನಗರದ ತಾಲೂಕು ಮಚಾಯತ್ ಸಭಾಂಗಣದಲ್ಲಿ ಕಂದಾಯ. ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆಯೋಜಿಸಿದ್ದ ‘ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಭ್ರಷ್ಟಾಚಾರ ದೇಶದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದೆ. ಅದರ ತಡೆಗೆ ಅಧಿಕಾರಿಗಳು, ಸಾರ್ವಜನಿಕರು ಕೈಜೋಡಿಸಬೇಕು
ಯಾವುದೇ ಸರ್ಕಾರಿ ಅಧಿಕಾರಿಗಳು ಜನ ಸೇವಕರು ಎಂಬುದನ್ನು ಮನದಲ್ಲಿಟ್ಟುಕೊಂಡು ಜವಾಬ್ದಾರಿ ಅರಿತು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಡತಗಳ ವಿಲೇವಾರಿ ವಿಳಂಬ ಮಾಡುವುದು, ಸಾರ್ವಜನಿಕ ಕೆಲಸಕ್ಕೆ ಅಲೆದಾಡಿಸುವುದು, ಹಣಕ್ಕೆ ಬೇಡಿಕೆ ಇಡುವುದನ್ನು ಮಾಡದೆ ಕಾನೂನಿನ ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು
‘ಬಹುತೇಕ ಕಚೇರಿಗಳಲ್ಲಿ ಅಧಿಕಾರಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಆದರೆ, ಕರ್ತವ್ಯ ಪಾಲನೆ, ಸಮಾಜಸೇವೆ ನಮ್ಮ ಧ್ಯೇಯವಾಗಿರಬೇಕು. ಕಚೇರಿಗಳಲ್ಲಿ ವಿಳಂಬ ಮಾಡದೆ ಸೂಕ್ತ ಹಿಂಬರಹ ನೀಡಬೇಕು. ಅಧಿಕಾರಿಗಳು ಮಾನವೀಯ ಮೌಲ್ಯದ ನೆಲೆಗಟ್ಟಿನಲ್ಲಿ ಜನರ ಸಂಕಷ್ಟವನ್ನು ಅರಿತು ಕೆಲಸಮಾಡಬೇಕು.
ವಾರೆಂಟ ಹೊರಡಿಸುವ ಹಾಗೂ ಸಮನ್ಸ್ ಕೊಡುವ ಅಧಿಕಾರ ಇದೆ ಎಫ್ ಐ ಆರ್ ಇಲ್ಲದೆ ಕಚೇರಿ ಸರ್ಚ್ ಮಾಡುತ್ತಾರೆ ಎಂಬ ಸಂಶಯ ನಿಮಗೆ ಇರುತ್ತದೆ.
ನಮಗೆ ದೂರುಬಂದ ತಕ್ಷಣ ಲೋಕಾಯುಕ್ತ ಮೇಲಾಧಿಕಾರಿಗೆ ಮಾಹಿತಿ ನೀಡಿ ಬಂದು ಸರ್ಚ್ ಮಾಡಿದ ನಂತರ ಸರ್ಚ್ ವಾರೆಂಟ್ ಪಡೆಯುತ್ತೇವೆ ಸಾರ್ವಜನಿಕ ಮುಖ್ಯಂಮತ್ರಿ ಸೇರಿದಂತೆ ಜನಪ್ರತಿನಿಧಿಗಳು ಬರುತ್ತಾರೆ ಹಾಗೂ ಸರಕಾರಿ ಸೇವೆ ಸರಕಾರಿ ವೇತನ ಪಡೆಯುವ ನೌಕರು ಬರುತ್ತಾರೆ. ಹಣ ತೆಗೆದುಕೊಳ್ಳುವುದೇ ಲಂಚವಲ್ಲ ಯಾವುದೇ ಆಮೀಶವೊಡ್ಡಿದರೂ ಭ್ರಷ್ಟಾಚಾರ ದಡಿಯಲ್ಲಿ ಬರುತ್ತದೆ.ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳನ್ನು ಹತ್ತು ವರ್ಷಗಳ ಗಟ್ಟಲೆ ಹಲಸಿ ಮಾನಸಿಕವಾಗಿ ಕುಗ್ಗಿಸುವುದನ್ನು ತಪ್ಪಿಸಲು 2 ರಿಂದ ನಾಲ್ಕು ವರ್ಷಗಳಲ್ಲಿ ಪ್ರಕರಣ ತನಿಖೆ ನಡೆಸಿ ಶಿಕ್ಷೆ ಕೊಡಲಾಗುವುದು. ಯಾವುದೇ ಸರಕಾರಿ ಅಧಿಕಾರಿ ಲಂಚ ಸ್ವೀಕರಿಸುವುದು ಎಷ್ಟು ಅಪರಾದವೋ ಲಂಚ ಕೊಡುವುದು ಅಷ್ಟೆ ಅಪರಾದ ಆಧಾಯಕ್ಕಿಂತೆ ಹೆಚ್ಚು ಆಸ್ತಿಗಳಿಸಿರುವ ವ್ಯಕ್ತಿ ಮೇಲೆ ದೂರು ದಾಖಲಿ ದಾಳಿ ಮಾಡಿ ಜೈಲಿಗೆ ಕಳಿಸಲಾಗುವುದು.
ಕಾರ್ಯಕ್ರಮದ 180 ದೇಶಗಳಲ್ಲಿ ‘ಭ್ರಷ್ಟಾಚಾರ ಎಂಬುದು ಭಾರತ ದೇಶ 90 ನೇ ಸ್ಥಾನ ಪಡೆದಿದೆ.
ಸರಕಾರಿ ನೌಕರಿ ಪಡೆಯುವಾಗ ಲಂಚ ನೀಡಿ ನೌಕರಿ ಗಿಟ್ಟಿಸಿಕೊಂಡರೆ ದುರಾಸೆಗೆ ಆಯಾಕಟ್ಟಿನ ಸ್ಥಳ ಪಡೆಯಲುಲಂಚ ನೀಡುವುದು ಅಪರಾದ.
ಅಧಿಕಾರಿ ಅಥವಾ ಸಿಬ್ಬಂದಿ ಸಂವಿಧಾನಿಕ, ಕಾನೂನುಬದ್ಧ ಹಾಗೂ ನೈತಿಕವಾಗಿ ಕೆಲಸ ಮಾಡದಿದ್ದಲ್ಲಿ ಅದು ಭ್ರಷ್ಟಾಚಾರವಾಗಲಿದೆ. ಅದರ ಹೊರತಾಗಿ ಹಣ ಪಡೆಯುವುದು, ಹಣಕ್ಕೆ ಬೇಡಿಕೆ ಇಡುವುದು, ಕೆಲಸದ ವಿಳಂಬ, ಸ್ವಜನಪಕ್ಷಪಾತ, ನಿರಾಸಕ್ತಿ ಕೂಡ ಲೋಕಾಯುಕ್ತ ಕಾಯ್ದೆ ವ್ಯಾಪ್ತಿಗೆ ಒಳಪಡಲಿದೆ’ ಎಂದು ತಿಳಿಸಿದರು.
ಒಬ್ಬ ನೌಕರ ಮಾಡುವ ಭ್ರಷ್ಟಾಚಾರದ ಕೆಲಸ ಸರ್ಕಾರಿ ನೌಕರರಿಗೆ ಅಪವಾದದ ಹಣೆಪಟ್ಟಿಯಾಗಲಿದೆ. ಅದಕ್ಕೆ ಯಾವುದೇ ಅಧಿಕಾರಿ, ಸಿಬ್ಬಂದಿ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.
ಲೋಕಾಯುಕ್ತ ಪೋಲಿಸ್ ಉಪಾಧೀಕ್ಷ ಬಿ.ಮಂಜುನಾಥ್ ಮಾತನಾಡಿ ಭ್ರಷ್ಟಾಚಾರ ಎಂಬುದಯ ಕದಂಬ ಬಾವುನಂತೆ ಹಬ್ಬಿದೆ ಹಿಂದಿನ ಕಾಲ ಸೇರಿದಂತೆ ಎರಡನೇ ಮಹಾಯುದ್ದದ ಕಾಲದಿಂದಲೂ ಭ್ರಷ್ಟಾಚಾರ ಇತ್ತು ಪ್ರಜಾಪ್ರಭುತ್ವ ದೇಶ ಸಾರ್ವಜನಿಕರ ಸೇವಕರು ತೆರಿಗೆ ಹಣದಲ್ಲಿ ನೌಕರರಿಗೆ ವೇತನನೀಡಿದರೂ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಮಾಡಲು ಕಾಯ್ದೆ ಜಾರಿಗೆ ತಂದಿದೆ ಸರಕಾರಿ ನೌಕರರಾಗಿ ಭ್ರಷ್ಟಾಚಾರ ದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೂ ಇದೆ. ಸಾರ್ವಜನಿಕರಿಂದ ದೂರುಗಳು ಬಂದರೆ ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ತಾಪಂ ಇ.ಒ ಶಶಿಧರ್. ಶುರಸ್ತೆದಾರ್ ಸದಾಶಿವಪ್ಪ. ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಪಂ ಪಿಡಿಒ. ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.