ಚಳ್ಳಕೆರೆ ಅ.24
ಮಾದಿಗ ಸಮಾಜದ ಆಸ್ತಿಯ ಉಳಿವಿಗಾಗಿ
ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟನೆಯನ್ನು ಅ 25 ಶುಕ್ರವಾರ ನಗರಸಭಾ ಆವರಣ ಹಮ್ಮಿಕೊಳ್ಳಲಾಗಿದೆ.
ತಾಲ್ಲೂಕಿನ ಸಮಸ್ತ ಮಾದಿಗ ಸಮಾಜದ ಬೆಲೆಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುವಂತಹ(ಡೇಲೈಟ್ ರಾಬರಿ) ಈ ಕಾನೂನು ಬಾಹಿರ ಕೆಲಸದ ವಿರುದ್ಧ ಪ್ರತಿಯೊಬ್ಬ ಪ್ರಜ್ಞಾವಂತ ಮಾದಿಗ ಬಂಧು ಈ ಅನ್ಯಾಯದ ವಿರುದ್ಧ ಪ್ರತಿಭಟಿಸಲೇಬೇಕಾದ ಅನಿವಾರ್ಯತೆ
ಇದೆ. ನಮ್ಮ ಪೂರ್ವಜರು ಸಮಾಜದ ಏಳಿಗೆಗಾಗಿ ಚಳ್ಳಕೆರೆ ನಗರದಲ್ಲಿ ನಿರ್ಮಿಸಿದ
ಚರ್ಮ ಹದಮಾಡುವ ಕೈಗಾರಿಕೆ. ಹಾಗೂ ಚರ್ಮಮಾರಾಟ ಮಾಡುವ ಮಳಿಗೆಯನ್ನು
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಣ ಮಾಡುತ್ತಿದ್ದರೂ ಚಳ್ಳಕೆರೆ ನಗರಸಭೆ ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಸೋಜಿಗದ ಸಂಗತಿ. ಅಲ್ಲದೇ ಚಿತ್ರದುರ್ಗ ರಸ್ತೆ ಯಲ್ಲಿರುವ ಬಾಬೂ ಜಗಜೀವನರಾಂ ಭವನ ಹಾಗೂ ಗಾಂಧಿನಗರದಲ್ಲಿರುವ ಪುರಸಭಾ
ಕಲ್ಯಾಣ ಮಂಟಪಕ್ಕೆ, ಚಳ್ಳಕೆರೆ ನಗರಸಭೆ ಇದೇ ರೀತಿ ದ್ವಿ-ಮುಖ ನೀತಿಯನ್ನು ಅನುಸರಿಸುತ್ತಿರುವುದು ನಗರಸಭೆಯ ಆಡಳಿತ ಮಾದಿಗ ಸಮಾಜದ ಪರ ಎಷ್ಟೆಂಬುದು ತಾವೇ ಯೋಚಿಸಬೇಕು. ಈಗಾಗಲೇ ಮೇಲ್ಕಾಣಿಸಿದ ಚರ್ಮ ಕೈಗಾರಿಕೆ ಮಳಿಗೆಯನ್ನು ಅನ್ಯ ಧರ್ಮಿಯರ ಸಂಘಟನೆ ವ್ಯಾಪ್ತಿಗೆ ಒಳಪಡಿಸುತ್ತಿರುವ ಹುನ್ನಾರ ನಡೆಯುತ್ತಿರುವುದು ಗಮನಕ್ಕೆ ಬಂದಿರುತ್ತೆ. ಈ ರೀತಿ ಮಾದಿಗ ಸಮಾಜದ ಬೆಲೆ ಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುತ್ತಿರುವುದು ನಗರಸಭೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ
ನಿರ್ಲಕ್ಷ ತೋರುತ್ತಿರುವುದು, ಅತಿಕ್ರಮಣಗಾರರಿಗೆ ಕುಮ್ಮಕ್ಕು ನೀಡುತ್ತಿರುವುದು ಎಂದು ಅನುಮಾನ ಮೂಡುತ್ತಿದೆ.
ಆದ್ದರಿಂದ ಮಾದಿಗ ಬಂಧುಗಳು ಯಾವುದೇ ಪಕ್ಷ, ಸಂಘಟನೆ
ಇತರೆ ಲೇಬಲ್‌ಗಳನ್ನು ಬದಿಗೊತ್ತಿ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಭಾಗವಹಿಸಿ ಬೆಂಬಲಿಸಲು ಕೋರಿದೆ. ಪತ್ರಕರ್ತರು, ಸಮಾಜದ ಮುಖಂಡರು, ಮಾದಿಗ ಸಮಾಜದ ಹಿರಿಯ ರಾಜಕಾರಣಿಗಳು, ನಿವೃತ್ತ ನೌಕರರು, ಕಲಾವಿದರು, ಎನ್.ಜಿ.ಓ. ಸಂಘಟನೆಗಳು,
ಮಹಿಳಾ ಮತ್ತು ಎಲ್ಲಾ ದಲಿತ ಸಂಘಟನೆಗಳು ಭಾಗವಹಿಸಲು ಕೋರಿದೆ.
ಮಾದಿಗ ಬಂಧುಗಳು ತಮ್ಮತಮಟೆಗಳೊಂದಿಗೆ ಬರಲು ವಿನಂತಿಸುತ್ತೇವೆ.
ಚಳ್ಳಕೆರೆ ಮಾದಿಗ ಮಹಾಸಭಾ (ರಿ.) ಚಳ್ಳಕೆರೆ.
About The Author
Discover more from JANADHWANI NEWS
Subscribe to get the latest posts sent to your email.