ಮೊಳಕಾಲ್ಮೂರು ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ – ಪ್ರಭಾಕರ ಮ್ಯಾಸನಾಯಕ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿ ಆಗಿಲ್ಲ, ರಾಜ್ಯಾದ್ಯಂತ ಇರುವಂತೆ ಕ್ಷೇತ್ರದ ರಸ್ತೆಗಳು ಗುಂಡಿಗಳಿಂದ ತುಂಬಿವೆ….ಈ ಗುಂಡಿಗಳಿಂದ ಬಿದ್ದು ಜನ ಸಾಯುವಂತಾಗಿದೆ. ಜನ ಕಾಂಗ್ರೆಸ್ ಸರ್ಕಾರಕ್ಕ ಹಿಡಿಶಾಪ ಹಾಕುತ್ತಿದ್ದಾರೆ. ಶಾಸಕರಿಂದ ಒಂದೇ ಒಂದು ಸಮುದಾಯ ಭವನ ನಿರ್ಮಾಣ ವಾಗಿಲ್ಲ. ಎಸ್. ಇ ಪಿ ಟಿ.ಎಸ್.ಪಿ ಅಡಿಯಲ್ಲಿ ಒಂದೇ ಒಂದು ರೂಪಾಯಿ ಅನುದಾನವನ್ನು ಕ್ಷೇತ್ರಕ್ಕೆ ತoದಿಲ್ಲ. ಇಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ ಎಂದು ಪ್ರಭಾಕರ ಮ್ಯಾಸನಾಯಕ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಮೊಳಕಾಲ್ಮುರು ಪಟ್ಟಣದಲ್ಲಿ ಇರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಗೆ ಸಾರ್ವಜನಿಕರ ಸಮಸ್ಯೆಗಳೊಂದಿಗೆ ಭೇಟಿ ನೀಡಿ ತರುವಾಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಹಣ ಜಮಾ ಆಗಿರುವುದಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ರಾಜ್ಯಕ್ಕೆ ಏಳು ಲಕ್ಷ ಮೂವತ್ತು ಸಾವಿರ ಮನೆಗಳ ಮಂಜೂರಾಗಿದ್ದರೂ, ಕ್ಷೇತ್ರದಲ್ಲಿ ಈ ಯೋಜನೆ ಅಡಿ ಮನೆ ನಿರ್ಮಾಣವಾಗಿಲ್ಲ….ನಿವೇಶನಗಳಿಗೆ ಜಿಪಿಎಸ್ ಮಾತ್ರ ಮಾಡಲಾಗಿದೆ…. ಸಾರ್ವಜನಿಕರು ಪ್ರತಿನಿತ್ಯ ಕಚೇರಿಗಳ ಸುತ್ತ ಅಲೆದಾಡುವಂತೆ ಆಗಿದೆ ಎಂದು ಪ್ರಭಾಕರ್ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿರುವಂತವರಿಗೆ ಕೂಲಿ ಹಣ ಜಮಾ ಆಗಿಲ್ಲ..ಮೆಟೀರಿಯಲ್ ಹಣ ಬಂದಿರುವುದಿಲ್ಲ…. ಕ್ಷೇತ್ರವು ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಮೊದಲನೆಯ ಸ್ಥಾನ ಮೊಳಕಾಲ್ಮೂರಿಗೆ ಬಂದಿದೆ. ಈ ಹಣೆಪಟ್ಟಿಯಿಂದ ಹೊರಬರಲು ಶಾಸಕರು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ ತೋರಿಸಬೇಕಲ್ಲವೇ ಎಂದು ಪ್ರಭಾಕರ್ ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಚಿಂತನೆ ಉಳ್ಳ ಮತ್ತು ಬಡವರ ಕಷ್ಟಗಳ ನಿವಾರಣೆ ಮಾಡುವಂತಹ ನಿಟ್ಟಿನಲ್ಲಿ ಇಲ್ಲಿನ ಯುವ ಜನತೆಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕಾ ಮಂತ್ರಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಯಾವುದಾದರೂ ಕಾರ್ಖಾನೆ, ಫ್ಯಾಕ್ಟರಿಗಳನ್ನು ತಂದು ಅಭಿವೃದ್ಧಿ ಮಾಡುವ ಒಬ್ಬ ಶಾಸಕನ ಅವಶ್ಯಕತೆ ಈ ಕ್ಷೇತ್ರಕ್ಕೆ ಇದೆ. ಹೊಸ ಯೋಜನೆಗಳನ್ನು ತರುವ ಶಾಸಕರನ್ನು ನಾವು ಆಯ್ಕೆ ಮಾಡಿಕೊಳ್ಳುವ ತನಕ ಈ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವೇ ಇಲ್ಲ ಎಂದು ಪ್ರಭಾಕರ್ ಹೇಳಿದ್ದಾರೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರು ಸದನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆಯಾಗಲಿ, ಕ್ಷೇತ್ರಕ್ಕೆ ಹೊಸ ಯೋಜನೆ ತರುವ ಬಗ್ಗೆ ಮಾತನಾಡಿದ ಉದಾಹರಣೆ ನಾನಂತು ನೋಡಿಲ್ಲ ತಾವೇನಾದರೂ ನೋಡಿದ್ದರೆ ಹೇಳಿ ಎಂದು ಪ್ರಭಾಕರ್ ಕೇಳಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಕೋಷ್ಠಗಳ ಕಾರ್ಯಾಲಯ ಕಾರ್ಯದರ್ಶಿ ಜಿ.ಕೆ.ನವೀನ್, ದೇವಸಮುದ್ರದ ಪರಮೇಶ್ವರಪ್ಪ, ಕೋನಸಾಗರದ ಆಂಜನಪ್ಪ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪಾಲಯ್ಯ, ಘಟಪರ್ತಿ ಮಲ್ಲಿಕಾರ್ಜುನ, ಬಸವರಾಜ್, ಧನು ಮಾರಮ್ಮನಹಳ್ಳಿ ಶರಣಪ್ಪ ಗ್ರಾಮ ಪಂಚಾಯತಿ ಸದಸ್ಯ ಪಾರಂಪರಿಕ ವೈದ್ಯ ಡಾ. ಸುರೇಶ್, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು…
About The Author
Discover more from JANADHWANI NEWS
Subscribe to get the latest posts sent to your email.