ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ: ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ನಲಗೇತನಹಟ್ಟಿ ಗ್ರಾಮದ ನಾಯಕ ಸಮಾಜದವರು ಜಾತಿ ಗಣತಿಯಲ್ಲಿ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಬೇಕು ಎಂದು ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ. ಸದಸ್ಯ ಪಿ.ಎನ್. ಮುತ್ತಯ್ಯ ಮನವಿ ಮಾಡಿದ್ದಾರೆ.
ಮಂಗಳವಾರ ನಾಯಕನಹಟ್ಟಿ ಸಮೀಪದ ನಲಗೇತನಹಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿ ಬಗ್ಗೆ ವಿದ್ಯಾವಂತ ಯುವಕರು ತಮ್ಮ ತಮ್ಮ ಮನೆಯಲ್ಲಿ ಜಾತಿ ಗಣತಿ ಕಾಲಂನಲ್ಲಿ ನಾಯಕ ಎಂದು ನಮೂದಿಸಲು ಜಾಗೃತಿ ಮೂಡಿಸಬೇಕು ಜಾತಿಗಣತಿಯಲ್ಲಿ ಸ್ವಲ್ಪ ನಿರ್ಲಕ್ಷವಹಿಸಿದರೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವುದು ಶತಸಿದ್ದ ಪಕ್ಷಾತೀತವಾಗಿ ಜಾತಿಗಣತಿ ಸಮೀಕ್ಷೆಯಲ್ಲಿ
ಸಹಕರಿಸಬೇಕು ಎಂದು ನಲಗೇತನಹಟ್ಟಿ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ ಮನವಿ ಮಾಡಿದರು.
About The Author
Discover more from JANADHWANI NEWS
Subscribe to get the latest posts sent to your email.