
ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬುಡಕಟ್ಟುಗಳಾದ ಕಾಡುಗೊಲ್ಲ ಮತ್ತು ಮ್ಯಾಸ ಬೇಡ ಸಮುದಾಯಕ್ಕೆ ತಮ್ಮ ಆರಾಧ್ಯ ದೇವತೆ ಗೌರಸಮುದ್ರ ಮಾರಿದೇವತೆ ಜಾತ್ರೆ ಆ.25 ರ ಮಂಗಳವಾರ ಜಾತ್ರೆ ಉತ್ಸವ ಸಂಭ್ರಮವಾಗಿ ಆಚರಣೆ ಮಾಡುವ ಸಲುವಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸಕಲ ಸಿದ್ದತೆಗೆ ಮಾಡಿದೆ.
ಜಿಲ್ಲೆಯಲ್ಲಿ ನಾಯಕನಹಟ್ಟಿ ಶ್ರೀತಿಪ್ಪೇರುದ್ರಸ್ವಾಮಿ ಜಾತ್ರೆ ಬಿಟ್ಟರೆ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನಸೇರುವ ಬಹುದೊಡ್ಡ ಜಾತ್ರೆ ಎಂದರೆ ತಪ್ಪಾಗಲಾರದು.
ಹಿನ್ನೆಲೆ: ದಾನಸಾಲಮ್ಮ ಎಂಬ ಯುವತಿ ಈಶ್ವರ ತಪಸ್ಸಿನಿಂದ ವರಪಡೆದ ಕುಂಬಳಕಾಯಿಯನ್ನು ಬೇಯಿಸಿ ತಿಂದ ಮೇಲೆ ದಾನಸಾಲಮ್ಮನಿಗೆ ಒಂದು ಹೆಣ್ಣು ಮಗು ಜನಿಸಿತು. ಬಹಳ ದಿನಗಳಿಗೆ ಈಶ್ವರನ ವರದಾನದಿಂದ ಹುಟ್ಟಿದ ಹೆಣ್ಣು ಮಗುವಿಗೆ ಮಾರಮ್ಮ ಎಂದು ನಾಮಕರಣ ಮಾಡಲಾಗಿದೆ.
ದಾನಸಾಲಮ್ಮ ಪತಿ ಸಂಚಸಿಖನಾಯಕ ದಂಪತಿಗಳಿಗೆ ಮಾರಮ್ಮ ಜನಿಸಿದ ನಂತರ ಏಳು ಜನ ಗಂಡು ಮಕ್ಕಳು ಹುಟ್ಟಿದರು. ಇವರು ಬೆಳೆದು ದೊಡ್ಡವರಾದ ಮೇಲೆ ಮಾರಮ್ಮ ಕುಟುಂಬದೊಂದಿಗೆ ಕೋಟೆಕೊತ್ತಲಗಳನ್ನ ಕಟ್ಟಿಸಿ ಸಮಾಜದೊಂದಿಗೆ ಸಂತೋಷದಿಂದ ಜೀವನ ಸಾಗಿಸಿದರು.
ಬಹುದಿನಗಳನಂತರ ಉಪ್ಪಾರ ಉಪ್ಪಿನ ಮಾಳಿಗೆಯಲ್ಲಿ ಹುತ್ತ ಬೆಳೆಯಲು ಪ್ರಾರಂಬವಾಯಿತು ದಿನಲೂ ಅವರು ಬಂದು ಬೆಳೆದ ಹುತ್ತವನ್ನು ಕಿತ್ತು ಹಾಕಿ ತನ್ಮ ಕಾಯಕ ಮಾಡುತ್ತಿದ್ದರು ಪ್ರತಿ ದಿನ ಹುತ್ತವನ್ನು ಕಿತ್ತು ಹಾಕಿದರೂ ಸಹ ಅದು ದೊಡ್ಡದಾಗಿ ಬೆಳೆಯಲು ಪ್ರಾರಂಬಿಸಿದಾಗ ಇವರಿಗೆ ಆಶ್ವರ್ಯ ಜತೆಗೆ ಗಾಬರಿಗೊಂಡು ಗೌರಸಮುದ್ರದ ಐಹೋರಿ ಮಠಕ್ಕೆ ಬಂದು ಜೋತಿಷ್ಯ ಕೇಳಿದಾಗ ಅವರಿಗೆ ಆಶ್ಚರ್ಯವಾಯಿತು.
ಹುತ್ತಬೆಳೆಯುವುದನ್ನು ಮತ್ತೆ ಕಿತ್ತುಹಾಕಲು ಹೋಗುವುದು ಬೇಡ ಈ ಸ್ಥಳದಲ್ಲಿ ಮಾರಮ್ಮ ಎಂಬ ಹೆಣ್ಣು ಮಗಳು ನಿಮಗೆ ಒಲಿಯುತ್ತಾಳೆ ಆದ್ದರಿಂದ ಭಯ ಭಕ್ತಿ ಶ್ರದ್ದೆಯಿಂದ ಪೂಜೆ ಮಾಡಿದರೆ ನಿಮಗೆ ಒಳ್ಳೆಯಾಗುತ್ತದೆ ಎಂಬ ಜ್ಯೋತಿಷಿಯ ಸಲಹೆಯಂತೆ ಉಪ್ಪಾರ ಜನಾಂಗದ ಕೆಂಚಮ್ಮ ಎಂಬ ಮಹಿಳೆ ಪತ್ರಿ ನಿತ್ಯ ಹುತ್ತಕ್ಕೆ ಹಾಲು ಬಿಟ್ಟು ಪೂಜೆ ಸಲ್ಲಿಸುತ್ತಿದ್ದಳು ಈಗಿರುವ ದೇವಸ್ಥಾನದ ಸ್ಥಳವೇ ಗೌರಸಮುದ್ರ ಮಾರಮ್ಮ ದೇವಿಯ ಗುಡಿ ಎಂದು ಹೇಳಲಾಗುತ್ತಿದೆ.
ಈಗಲೂ ಹುತ್ತಕ್ಕೆ ಹಾಲು ಬಿಡುವ ಮೂಲಕ ಜಾತ್ರೆ ಪ್ರಾರಂಭವಾಗುವುದು ಭಾನುವಾರ ಹುತ್ತಕ್ಕೆ ಹಾಲು ಬಿಡುವ ಮೂಲಕ ಹುತ್ತಕ್ಕೆ ಅಭಿಶೇಷಕು ಪೂಜೆಯನ್ನು ಭಾನುವಾರ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಇಂದಿಗೂ ಸಹ ಗೌರಸಮುದ್ರಮಾರಮ್ಮ ದೇವಿಯ ಪೂಜೆಯನ್ನು ಉಪ್ಪಾರ ಜನಾಂಗದವರೇ ಪೂಜೆ ಮಾಡುವ ಪದ್ದತಿ ಇದೆ ಎನ್ನಲಾಗುತ್ತಿದೆ.
ಭಕ್ತಾಧಿಗಳು ಈ ದೇವಿಯ ಪೂಜೆಯನ್ನು ಶ್ರದ್ದೆ ಭಕ್ತಿಗಳಿಂದ ಪೂಜಿಸಿ ತಮ್ಮ ಇಷ್ಟಾರ್ತಗಳನ್ನು ಪೂರೈಸುವಂತೆ ಜಾತ್ರೆಯಲ್ಲಿ ಬೇವಿನ ಸೀರೆ, ಈರುಳ್ಳಿ, ಹರಿಸಿಣ ಕುಂಕುಮ, ಬಂಡಾರದ ಅಭಿಷೇಕ, ಸಾಕಿದ ಕೋಳಿ ಮರಿಗಳನ್ನು ತೂರುವುದು, ಕೋಣ, ಕುರಿ ಬಲಿಕೊಡುವ ಪದ್ದತಿಯನ್ನು ಆಚರಿಸಿಕೊಂಡು ಬರುತಿದ್ದು ಗೌರಸಮುದ್ರ ಜಾತ್ರೆ ಮುಗಿದ ನಂತರ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಒಂದು ತಿಂಗಳವರೆಗೆ ಪ್ರತಿ ಮಂಗಳವಾರ ಮಾರಿಹಬ್ಬವನ್ನು ಆಚರಿಸುವ ಪದ್ದತಿ ಇಂದಿಗೂ ಇದೆ.
ಜಾತ್ರೆ ವಿಶೇಷ ಕಾರ್ಯಕ್ರಮಗಳು:- ಭಾನುವಾರ ಹುತ್ತಕ್ಕೆ ಅಭಿಶೇಷಕ ಪೂಜೆ.
ಸೋಮಾರ ಮೂಲ ಸನ್ನಿಧಿಗೆ ಅಭಿಷೇಕ.
ಮಂಗಳವಾರ ಮಾರಮ್ಮದೇವಿ ಮಧ್ಯಾಹ್ನ 2.30 ಗಂಟೆಗೆ ತುಂಬಲಿಗೆ ಆಗಮಿಸಿ ವಿಶೇಷ ಪೂಜೆ ಸಾವಿರಾರು ಭಕ್ತರಿಂದ ದರ್ಶನ, ಅರಕೆ ತೀರಿಸುವರು.
ಬುಧವಾರ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಸಿಡಿ, ಗುರುವಾರ ಓಕಳಿ, ಶುಕ್ರವಾರ ಬೆಳಗ್ಗೆ 8.30 ಕ್ಕೆ ಮಹಾಮಂಗಳಾರತಿಯೊಂದಿಗೆ ಗುಡಿದುಂಬಿದ ನಂತರ ಜಾತ್ರೆಗೆ ತೆರೆ.








About The Author
Discover more from JANADHWANI NEWS
Subscribe to get the latest posts sent to your email.