March 17, 2026
IMG-20250724-WA0116.jpg

ಪರಶುರಾಂಪುರ.

ಗ್ರಾಮದಲ್ಲಿ 600 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಯ ಜೊತೆಗೆ ವಿವಿಧೆಡೆ ಅಭಿವೃದ್ಧಿಯ ಕಾಮಗಾರಿಗಳನ್ನ ಗುರುವಾರ ಶಾಸಕ ಟಿ.ರಘುಮೂತಿ೯ ಉದ್ಘಾಟಿಸಿದರು.

ಪರಶುರಾಂಪುರ ಗ್ರಾಮದಲ್ಲಿ ಬರುವ ಪ್ರಮುಖ ರಸ್ತೆಗಳ ಅಗಲೀಕರಣದ ರಸ್ತೆಗೆ ಮುಖ್ಯ ವೃತ್ತದಲ್ಲಿ ಆಯೋಜಿಸಿದ್ದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಕುಮಟಾ – ಕಡಮಡಗಿ ಪ್ರಮುಖ ರಸ್ತೆಗೆ ಸಂಪರ್ಕ ಹೊಂದಿದ್ದು ಮುಂದಿನ ದಿನಗಳಲ್ಲಿ ಹೋಬಳಿ ಕೇಂದ್ರವು ತಾಲೂಕು ಆಗುವ ಅಹ೯ತೆ ಇರುವುದರಿಂದ ಹಂತ-ಹಂತವಾಗಿ ಅಭಿವೃದ್ಧಿ ನಡುವೆ ಗ್ರಾಮದ ಪೋಸ್ಟ್ ಆಫೀಸ್ ನಿಂದ ಮುಖ್ಯ ವೃತ್ತದ ತನಕ ಬಳಿಕ ಮುಖ್ಯ ವೃತ್ತದಿಂದ ಕೆ.ಕೆ ರಸ್ತೆಯ ವರೆಗೆ ರಸ್ತೆ ಅಗಲೀಕರಣದ ಜತೆ ಡಿವೈಡರ್ ಮದ್ಯೆ ಲೈಟಿಂಗ್ ವ್ಯವಸ್ಥೆ ಒಳಗೊಂಡಿದೆ.

ರಸ್ತೆ,ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ,ಹಂತ-ಹಂತವಾಗಿ ಅಭಿವೃದ್ಧಿ ಪಡಿಸುವುದರ ಜತೆಗೆ ಸರ್ಕಾರದ ಯೋಜನೆಗಳ ಕಟ್ಟಕಡೆಯ ವ್ಯಕ್ತಿಗೂ ಒದಗಿಸುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನ ಕಾಂಗ್ರೆಸ್ ಸರ್ಕಾರ ನೀಡಿದೆ ಎಂದು ಶಾಸಕ ಟಿ.ರಘುಮೂತಿ೯ ತಿಳಿಸಿದರು.

ಕರೆಕಲ್ಲಟ್ಟಿ, ದೋಡ್ಡಗೊಲ್ಲರ ಹಟ್ಟಿ, ಚೌಳೂರು,ಗೋಲ೯ತ್ತು ಸೇರಿದಂತೆ ವಿವಿಧೆಡೆ ನಾನಾ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್, ಉಪಾಧ್ಯಕ್ಷ, ಸದಸ್ಯರುಗಳು, ಜಿಲ್ಲಾ ಗ್ಯಾರೆಂಟಿ ಸಮಿತಿಯ ಸದಸ್ಯರಾದ ಚನ್ನಕೇಶವ, ಅನಿಲ್ ಕುಮಾರ್, ಚೌಳೂರು ಪ್ರಕಾಶ್, ತಾಲ್ಲೂಕು ಪಂಚಾಯತ್ ನಾಮ ನಿರ್ದೇಶನ ಸದಸ್ಯ ಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಜಿಲ್ಲಾ ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯ ರಂಗಸ್ವಾಮಿ , ಮುಖಂಡರಾದ ಜಗಳೂರುಸ್ವಾಮಿ, ನಾಗರಾಜ್, ನಾಗಭೂಷಣ, ಪ್ರಕಾಶ್, ಬೊಮ್ಮಕ್ಕ, ಮಂಜುಳಮ್ಮ, ಸಣ್ಣವೀರಣ್ಣ, ನಿಜಲಿಂಗಪ್ಪ, ಪ್ರಕಾಶ್, ರವಿಕುಮಾರ್, ವೀರೇಶ್, ವೀರಣ್ಣ,ಮಹಾಲಿಂಗಪ್ಪ,ಗುಜ್ಜಾರಪ್ಪ,ದೇವರಾಜು ,ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವ್ಯ ವಿಜಯಕುಮಾರ್, ಸದಸ್ಯರುಗಳಾದ ಲತಾ,ಅಂಬುಜಮ್ಮ,ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಾಂತೇಶ್, ಮುಖಂಡರಾದ ಜಿ.ಎಲ್ ವೀರಣ್ಣ, ವೀರೇಶ್, ಬಾಷಾ, ಗಂಗಾಧರ್, ಪ್ರಕಾಶ್, ಮೂರ್ತಪ್ಪ, ಗುಜ್ಜಾರಪ್ಪ, ಜಯಕುಮಾರ್, ಕೃಷ್ಣಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ
ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading