March 17, 2026
IMG-20250724-WA0257.jpg

ತಳಕು:: ಗ್ರಾಮೀಣ ಪ್ರದೇಶದಲ್ಲಿ ಆಚಾರ ವಿಚಾರ ಸಂಪ್ರದಾಯ ಸಂಸ್ಕೃತಿಗಳ ನಪ ಹೇಳಿ ಬಾಲಕಿಯರಿಗೆ ವಿವಾಹ ಮಾಡಲು ಮುಂದಾದರೆ ಯಾವ ಬಾಲಕಿಯರು ಎದುರು ಅವಶ್ಯಕತೆ ಇಲ್ಲ ಸಮೀಪದ ಅಂಗನವಾಡಿ ಶಿಕ್ಷಕಿ ಹಾಗೂ ಆಶಾ ಕಾರ್ಯಕರ್ತರಿಗೆ ತಿಳಿಸಿದರೆ ಇಲಾಖೆ ಗಮನಕ್ಕೆ ಬರುತ್ತದೆ ಇಲ್ಲವಾದರೆ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಚಿತ್ರದುರ್ಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಆರ್. ಮಂಜುನಾಥ್ ಹೇಳಿದರು.

ಗುರುವಾರ ತಳಕು ಹೋಬಳಿಯ ಹಿರೇಹಳ್ಳಿ ಗ್ರಾಮದ ಚಿಂತಾಮಣೇಶ್ವರ ಪ್ರೌಢಶಾಲೆಯಲ್ಲಿ 2025- 26 ನೇ ಸಾಲಿನ ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ ಹರಿವು ಜಾಗೃತಿ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬಾರದು ಪ್ರೀತಿ ಪ್ರೇಮದ ಎಂದು ಬೀಳಬೇಡಿ ವಿದ್ಯಾಭ್ಯಾಸ ಮುಂದುವರಿಸಿ ನಿಮ್ಮ ಜೀವ ಆಳು ಮಾಡಿಕೊಳ್ಳಬೇಡಿ ತಂದೆ ತಾಯಿ ಮಾತು ಕೇಳಿ ಒಳ್ಳೆ ಮಕ್ಕಳಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ಅಂಗನವಾಡಿ ಮೇಲ್ವಿಚಾರಕಿ ಸೌಮ್ಯ ಮಾತನಾಡಿದರು 18 ವರ್ಷದೊಳಗಿನ ಹೆಣ್ಣು 21 ವರ್ಷದೊಳಗಿನ ಗಂಡು ಮಗುವಿಗೆ ಮದುವೆ ಮಾಡುವುದನ್ನು ಬಾಲ್ಯ ವಿವಾಹ ಎಂದು ಕರೆಯಲಾಗುತ್ತದೆ ಬಾಲ್ಯ ವಿವಾಹಕ್ಕೆ ಸಹಕರಿಸಿದ ತಂದೆ ತಾಯಿ ಬಂಧು ಬಳಗ ಪೂಜಾರಿಯೆ ಆಗಲಿ ಎರಡು ವರ್ಷ ಜೈಲು ಹಾಗೂ ದಂಡ ವಿಧಿಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಅಂಗನವಾಡಿ ಮೇಲ್ವಿಚಾರಕಿ ಸೌಮ್ಯ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕ- ಶಿಕ್ಷಕಿಯರು ಮತ್ತು ಆಯುರ್ವೇದಿಕ್ ಕಲ್ಪನಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading