
ಹರೀಶ್ ಟಿ.ಟಿ ತಿಮ್ಮಪ್ಪಯ್ಯನಹಳ್ಳಿ
ನಾಯಕನಹಟ್ಟಿ :- ನೇರಲಗುಂಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರ ನಿರ್ಲಕ್ಷತನದಿಂದ ಚರಂಡಿ ಸ್ವಚ್ಚತೆ ಮರೆತ ಭೀಮನಕೆರೆ ಗ್ರಾಮ ಸ್ವಚ್ಚತೆ ಮರೆಚಿಕೆಯಾಗಿದೆ.





ದಲಿತರು ವಾಸಿಸುವ ಪ್ರದೇಶದಲ್ಲಿ ಚರಂಡಿ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ನೀರು ನಿಂತುಕೊಳ್ಳುತ್ತವೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಮಾದಿಗರು ವಾಸಿಸುವ ಪ್ರದೇಶವೆಂಬ ಕಾರಣಕ್ಕೆ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ ಎಂದು ಸ್ಥಳಿಯ ನಿವಾಸಿಗಳು ಆರೋಪಿಸುತ್ತಿದ್ದಾರೆ. ಬಹುತೇಕ ಚರಂಡಿಗಳ ನೀರು ಇದ್ದು, ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಕೊಳಚೆ ನೀರು ಹರಿಯದೆ ಅಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ.
ಹಲವಾರು ಯುವತಿಯರು, ಮಕ್ಕಳು, ಗ್ರಾಮಸ್ಥರು ನೇರಲಗುಂಟೆ ಗ್ರಾಮ ಪಂಚಾಯಿತಿಗೆ ಶಾಪ ಹಾಕಿದ್ದಾರೆ.
ಚುನಾವಣೆಯ ಸಮಯದಲ್ಲಿ
ಮತದಾರರಿಗೆ ಮರಳು ಮಾಡಿ ನನಗೆ ವೋಟ್ ಹಾಕಿ ನಿಮ್ಮ ಗ್ರಾಮವನ್ನು ಅಭಿವೃದ್ಧಿಗೆ ಕೊಂಡುಯ್ಯೂತ್ತೇನೆ ಎಂದು ಹೇಳಿ ಈಗ ಇತ್ತಕಡೆ ಗಮನ ಹರಿಸುತ್ತಿಲ್ಲ. ಚರಂಡಿಯಲ್ಲಿ ಹೂಳು ತೆಗೆಯದೆ ಹಲವು ಸಣ್ಣ ಮಕ್ಕಳಿಗೆ ಡೆಂಗ್ಯೂ, ಟೈಫೆಡ್ ಜ್ವರಕ್ಕೆ ಒಳಗಾಗಿದ್ದಾರೆ. ಈ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ.
ಅಂತದರಲ್ಲಿ ಮಕ್ಕಳಿಗೆ ಏನಾದರು ಆದರೆ ಯಾರು ಗತಿ ಎಂದು ಹಲವು ಹೆಣ್ಣು ಮಕ್ಕಳು ಅಳಲು ತೋಡಿಕೊಂಡರು
. ಸ್ವಚ್ಚತೆ ಇಲ್ಲದೆ ಗೊಬ್ಬು ನಾರುತ್ತಿರುವ ಚರಂಡಿ, ಪಕ್ಕದ ಮನೆಯಲ್ಲಿ ಚರಂಡಿ ಇದ್ದು ಹಲವು ಸಣ್ಣ ಮಕ್ಕಳಿದ್ದು, ಚರಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಕೊಳಚೆ ನೀರು ಮುಂದೆ ಸಾಗದೆ ವಾಸನೆ ಬರುತ್ತಿದೆ. ಸುಮಾರು ತಿಂಗಳು ಕಳೆದಿವೆ.
ಆದರೂ ಸ್ವಚ್ಚತೆ ಇಲ್ಲ. ನೇರಲಗುಂಟೆ ಗ್ರಾಮ ಪಂಚಾಯಿತಿ ಬೇಜವಬ್ದಾರಿ ತನದಿಂದ ಸ್ವಚ್ಚತೆಗೆ ಮುಂದಾಗುತ್ತಿಲ್ಲ.
ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಮಳೆಗಾಳ ಶುರುವಾಗುವ ಮುನ್ನ ಸ್ವಚ್ಚತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ತಗ್ಗು ಗುಂಡಿ ಚರಂಡಿಗಳಲ್ಲಿ ಚರಂಡಿ ನೀರು ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ.
ಸೊಳ್ಳೆ ನಾಶಕ ಸಿಂಪಡನೆ ಸ್ವಚ್ಚತೆ ಕೈಗೊಳ್ಳುತ್ತಿಲ್ಲ. ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಬೀತಿಯಲ್ಲಿ ಕಾಲ ಕಳೆಯುವ ಸ್ಥಿತಿ ಎದುರಾಗಿದೆ.
ಕೂಡಲೇ ಗ್ರಾಮ ಪಂಚಾಯಿತಿ ಸ್ವಚ್ಚತೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗಾಗಿ ನಿರಂತರವಾಗಿ ಕಲುಷಿತ ನೀರು ಬರುತ್ತಿದೆ.
ಇದರಿಂದ ಕೆಲವರ ಆರೋಗ್ಯವು ಆಳಾಗಿದೆ. ಗ್ರಾಮದ ರಸ್ತೆ ದುರಸ್ಥಿ, ಸಮರ್ಪಕ ನೀರು ಪೂರೈಕೆ, ಚರಂಡಿ ಸ್ವಚ್ಚತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಇದ್ದಲ್ಲಿ ಕೂಡಲೇ ಸಮಸ್ಯೆಗಳಿಗೆ ಪರಿಹಾರ ನೀಡದೆ ಇದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಚರಂಡಿಗಳನ್ನು
ಸ್ವಚ್ಚಗೊಳಿಸಿ ಅದ್ಯಾವ ಕಾಲ ಆಯಿತೋ ಗೊತ್ತಿಲ್ಲ. ಗಲಿಜು ನೀರು ರಸ್ತೆಯಲ್ಲಿ ಹರಿಯುತ್ತದೆ. ಮನೆಗಳಿಗೆ ಇದೇ ದಾರಿಯಲ್ಲಿ ಸಾಗಬೇಕು.
ಎಷ್ಟು ಸಲ ಹೇಳಿದರು ಚರಂಡಿ ಸ್ವಚ್ಚತೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು.
ಭೀಮನಕೆರೆ ಗ್ರಾಮ ಅಭಿವೃದ್ಧಿ ಎಳ್ಳಷ್ಟು ಆಗಿಲ್ಲ. ಮೂಲ ಸೌಕರ್ಯವನ್ನು ಸರಿಯಾಗಿ ಕಲ್ಪಿಸುತ್ತಿಲ್ಲ ಎಂದು ಕಿಡಿಕಾರಿದರು.
ಚರಂಡಿ ಸ್ವಚ್ಚಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡಿದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ನಿವಾರಣೆ ಕ್ರಮ ಕೈಗೊಳ್ಳುವುದರಿಂದ ಊರಿನ ಜನತೆ ಬೇಸತ್ತು ಹೋಗಿದ್ದಾರೆ ಚುನಾವಣೆ ಸಂದರ್ಭದಲ್ಲಿ ಬೆಟ್ಟದಷ್ಟು ಆಶ್ವಾಸನೆ ನೀಡಿ ಗೆಲ್ಲುತ್ತಾರೆ. ನಂತರ ಮೂಲ ಸೌಕರ್ಯ ಒದಗಿಸಲು ನಿರ್ಲಕ್ಷೆತನದಿಂದ ತೋರುತ್ತಾರೆ.
ಮಳೆಗಾಲದಲ್ಲಿ ಚರಂಡಿ ಇನ್ನಷ್ಟು ತುಂಬಿ ಗೊಬ್ಬುನಾರುತ್ತಿವೆ. ಚರಂಡಿಗಳಲ್ಲಿ ಕುಡಿಯುವ ನೀರಿನ ಬಾಟಲಿ ಬಿದ್ದಿರುವುದು ಕಂಡು ಬಂದಿದೆ
About The Author
Discover more from JANADHWANI NEWS
Subscribe to get the latest posts sent to your email.