September 15, 2025
D1-CLKP1.jpg

ಚಳ್ಳಕೆರೆ ಮೇ24

ಕಂದಾಯ ಇಲಾಖೆ, ಉಪ ನೋಂದಣಾಧಿಕಾರಿಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆಯಲ್ಲಿ ದಾಖಲೆ ಇಲ್ಲ ಎಂದು ಹಿಂಬರ ನೀಡಿದರೆ, ಅಂತಹ ಅಧಿಕಾರಿ ಯಾ ಸರಕಾರಿ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬಹುದು ಎಂಬ ಆದೇಶವಿದೆ.

ಹೌದು ಇದು ಚಳ್ಳಕೆರೆ ಕಸಬಾ ವ್ಯಾಪ್ತಿಯ ಸರ್ವೆ ನಂಬರ್ 260 ರಲ್ಲಿ ಸುಮಾರು 37 ಎಕರೆ ಭೂಮಿ ಯಿದ್ದು 2000 ನೇ ಸಾಲಿನ ತನಕ ಕೈ ಬರಹ ಪಹಣಿಯಲ್ಲಿ ಕಾಲಂ ನಂಬರ್ 10 ರಲ್ಲಿ  ಪಾರೆಸ್ಟ್ ಹಾಗೂ ಕಾಲಂ ನಂಬರ್ 9 ರಲ್ಲಿ ಸರಕಾರಿ ಹುಲ್ಲು ಬನ್ನಿ ಎಂದು ನಮೂದು ಹಾಗಿದೆ 2001 ರ ನಂತರ ಬರಿ ಹುಲ್ಲು ಬನ್ನಿ ಎಂದು ಬರುತ್ತದೆ. ನಂತರ ಎಂ ಆರ್ ನಂ 55/01-02 ಚಳ್ಳಕೆರೆ ರಿ .ಸಂ,ನಂ 260ರಲ್ಲಿ ಕಲ್ಲು ಹೊಡಯುವ ಯಂತ್ರ ಸ್ಥಾಪಿಸು ನಿರಾಕ್ಷೇಪಣೆ ಪತ್ರ ನೀಡಿದ್ದು ಆ ಮೇರೆಗೆ  ಸಂಬಂದಪಟ್ಟ ಇಲಾಖೆಯಿಂದ ಸ್ಥಾಪಿಸಲು ಪರವಾನಿಗೆ ಪಡೆಯದೇ ಇರುವುದರಿಂದ ಈ ಹಿಂದೆಮತ್ತು ವಿಧಿಸಿರುವ ಷರತ್ತುಗಳ ಉಲ್ಲಂಘ ಆಗಿರುವುದರಿಂದ  ಈ ಹಿಂದೆ (ಎಂ,ಆರ್,ನಂ30/2000-01) ಶ್ರೀಸೂರಪಾಲಯ್ಯ ಮುಷ್ಟಲಗುಮ್ಮಿ ಸೂರಯ್ಯ ಇವರಿಗೆ ನೀಡಲಾಗಿದ್ದನಿರಾಕ್ಷೆಪಣ ಪತ್ರವನ್ನು ರದ್ದುಪಡಿದಲಾಗಿದ್ದು.

ಆರ್ ಟಿ ಸಿ ಕಾಲಂ ಪಹಣಿಯ ಕಾಲಂ 11 ರಲ್ಲಿರುವ ನಮೂನೆ ಯನ್ನು ತೆಗೆದು ಹಾಕಿ ಸಿ.ಆರ್, ನಂ1/2001-02  ರ ದಿನಾಂಕ5-2-2002 ಆದೇಶಿಸಲಾಗಿದೆ ಎಂದು  ಅಂದಿನ ಕರ್ತವ್ಯನಿರ್ವಹಿಸಿದ ತಹಶೀಲ್ದಾರ್ ನಮೂನೆ 12 ಹಕ್ಕು ಬದಲಾವಣೆ ವಹಿ(ಮ್ಯುಟೇಷನ್ ರಿಜಸ್ಟರ್)ನಲ್ಲಿ ನಮೂದು ಮಾಡಿರುತ್ತಾರೆ.

ಎಂ.ಆರ್.  ಸಂಖ್ಯ 24 /2001-02 ರ ಮ್ಯೂಟೇಷನ್ ರಿಜಸ್ಟರ್ ನಲ್ಲಿ ಮತ್ತೊಂದು  ಆದೇಶ ಬರೆಯುತ್ತಾರೆ / ಎ ಸ್ಲಿಪ್ ನಂಬರ್  ಸ.ಸ.ನಿ1/2001-02 25-8-2001 ರ ಮೇರೆಗೆ ಪಹಣಿ  ಕಾಲಂ  10 ರಲ್ಲಿ ತಪ್ಪಾಗಿ ಫಾರೆಸ್ಟ್ ಎಂದು ನಮೂದಾಗಿರುವುದನ್ನು ತೆಗೆದು ಹಾಕುವುದು ಅರಣ್ಯ ಇಲಾಖೆಯ ದಾಖಲೆ ಪ್ರಕಾರ ಸರಿಪಡಿಸಿರುವ ಪ್ರಕಾರ ಚಳ್ಳಕೆರೆ ಸರ್ವೆ ನಂ  260 ರಲ್ಲಿನ 37 ಎಕರೆ ಪ್ರದೇಶದಲ್ಲಿನ ಕಲ್ಲು ಗಣಿ ಶಾಖೆಯಿಂದ  “”ಎ” ಸ್ಲಿಪ್ ನಂತೆ ಆದೇಶದಂತೆ ಫಾರೆಸ್ಟ್ ಎಂಬುದನ್ನು ಕೈಬಿಡಲಾಗಿದೆ ಎಂದು ದಿನಾಂಕ  27/8/2001 ರಲ್ಲಿ ಅಂದಿನ ತಹಶೀಲ್ದಾರ್ ಮತ್ತೊಂದು ಆದೇಶ ಬರೆಯುತ್ತಾರೆ.

ನವೀನ್ ರೆಡ್ಡಿ ಎಂಬ ವ್ಯಕ್ತಿಯೊಬ್ಬರು ಚಳ್ಳಕೆರೆ ರಿ ಸಂ 260 1965 ರಿಂದ2000 ತನಕ ಕೈ ಬರಹ ಪಹಣಿ,   ಎ ಸ್ಲಿಪ್,  ಹಾಗೂ ಸದರಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಕೋರಿ ಚಳ್ಳಕೆರೆ ತಾಲೂಕು ಕಚೇರಿಯ ಅಭಿಲೇಖಾಲಯಕ್ಕೆ ದಿ 15-4-2025 ರಂದು ಅರ್ಜಿ  ನೀಡುತ್ತಾರೆ ಇಂದು ನಾಳೆ ಕೊಡುತ್ತೇವೆ ಎಂದು ಅಲೆದಾಡಿಸಿ ಕೊನೆಗೆ 22-5-2025 ರಂದು ದಾಖಲೆ ಬದಲಾಗಿದೆನೀವು ಕೇಳಿದ ದಾಖಲೆಗಳು ಲಭ್ಯವಿಲ್ಲದ ಕಾರಣ ನಕಲು ನೀಡಲು ಅವಕಾಶವಿಲ್ಲ ಎಂದು ಅಭಿಲೇಖಲಯ ಹಿಂಬರಹ ನೀಡಿ ಕೈತೊಳೆದು ಕೊಂಡಿದೆ.

ನವೀನ್ ರೆಡ್ಡಿ ಕೇಳಿರುವ ದಾಖಲೆ ಸ್ವಾತಂತ್ರ್ಯ ಪೂರ್ವ ದಾಖಲೆಯಲ್ಲಿ2001-02 ನೇ ಸಾಲಿನ ದಾಖಲೆ  ಅದರಲ್ಲಿ ಕೈ ಬರಹ ಪಹಣಿ, ಮ್ಯುಟೇಷನ್ ಕಾಫಿ , ಆರ್ ಟಿ,ಸಿ ದಾಖಲೆ ನೀಡಿದ್ದಾರೆ ಎಲ್ಲಾ ದಾಖಲೆ ಇದ್ದರಲ್ಲಿ ಎಂ.ಆರ್. ನಂ ಆಗಿರುವ ಎ ಸ್ಪಿಪ್ ಒಂದೆ ಹೇಗೆ ಕಾಣೆಯಾಗುತ್ತದೆ ಒಮ್ಮೆ ತಹಶೀಲ್ದಾರ್ ಮಂಜುರಾತಿ ನೀಡಿದರೆ ಮತ್ತೆ ಅದನ್ನು ರದ್ದು ಮಾಡುವ ಅಧಿಕಾರಿ ತಹಶೀಲ್ದಾರ್ ಗೆ ಇಲ್ಲ ಉಪವಿಭಾಗಾಧಿಕಾರಿ ಅಂತದಲ್ಲಿ ಬದಲಾಲವಣೆ ಆಗಬೇಕು ಎಂಬ ನಿಯಮವಿದೆ.

ರೈತರ ಪಹಣಿಯಲ್ಲಿ ಅಧಿಕಾರಿಗಳೇ ತಪ್ಪು ಮಾಡಿದರೂ ಸಹ  ಅದನ್ನು ಸರಿಪಡಿಸಲು ಉಪವಿಭಾಗಾಧಿಕಾರಿ ಕಚೇರಿಗೆ ಹೋಗ ಬೇಕು ಎಂದು ಹೇಳುತ್ತಾರೆ ಆದರೆ ಚಳ್ಳೆಕೆರೆ ರಿ.ಸಂ. 260 ರಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಂದಿನ ತಹಶೀಲ್ದಾರ್ ಬದಲಾವಣೆ ಮಾಡಿದರಾ..? ಪ್ರಭಾವಿಗಳ ಒತ್ತಡಕ್ಕೆ ಮಣಿದು ರಿ ಸಂ 260 ಜಮೀನಿನ ಎ ಸ್ಲಿಪ್ ದಾಖಲೆ ಮಂಗಮಾಯವಾಯಿತೆ..? ಎಂಬ ಪ್ರಶ್ನೆಗಳು ಕಾಡತೊಡಗಿವೆ.

ಹಿಂಬರಹ ನೀಡಿದರೆ ಕ್ರಿಮಿನಲ್ ಕೇಸ್.

ಸಾರ್ವಜನಿಕ ದಾಖಲೆಗಳ ಕಾಯ್ದೆ- 2010ರ ಪ್ರಕಾರ ಸರ್ಕಾರ ತನ್ನ ಎಲ್ಲ ಕಚೇರಿಗಳಲ್ಲಿ ಅಗತ್ಯ ದಾಖಲೆಗಳನ್ನು ಸಂರಕ್ಷಿಸಬೇಕಾಗಿದೆ. ಇದು ಸರ್ಕಾರಿ ಅಧಿಕಾರಿಯ ಕರ್ತವ್ಯ ಕೂಡ ಆಗಿರುತ್ತದೆ.ಅವುಗಳ ಮಾಹಿತಿಯನ್ನು ಸಂಬಂಧಪಟ್ಟ ಅರ್ಜಿದಾರರು ಕೋರಿದಾಗ, ಕಡತ ಲಭ್ಯವಿಲ್ಲ ಎಂದು ಉತ್ತರಿಸುವುದಕ್ಕೆ ಮುನ್ನ ಸರ್ಕಾರಿ ಸಿಬ್ಬಂದಿ ಅಧಿಕಾರಿ ಹಲವು ಬಾರಿ ಗಂಭೀರವಾಗಿಆಲೋಚಿಸಬೇಕಾಗುತ್ತದೆ.ಮಾಹಿತಿ ನೀಡುವಲ್ಲಿ ಉದಾಸೀನ  ನಿರ್ಲಕ್ಷತೋರಿದ ವ್ಯಕ್ತಿಗೆ ಜೈಲು ಶಿಕ್ಷೆ ಕಾದಿದೆ ಎಂಬುದನ್ನು ಕರ್ನಾಟಕ ಮಾಹಿತಿ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಚಳ್ಳಕೆರೆ ನಗರದ ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ 2001 ನೇ ಸಾಲಿನ ದಾಖಲೆ  ಕೇಳಿದರೆ ಲಭ್ಯವಿಲ್ಲ  ಎಂದು ಹಿಂಬರಹ ನೀಡಿದ್ದು ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕ್ರಮಕೈಗೊಳ್ಳುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading