December 14, 2025
IMG-20250424-WA0161.jpg

ನಾಯಕನಹಟ್ಟಿ ಏ24.ಮೊಳಕಾಲ್ಮೂರು ಕ್ಷೇತ್ರದಲ್ಲಿ ಶಾಸಕರ ಭಯವಿಲ್ಲದೆ ಅಧಿಕಾರಿಗಳು ಮರಳು ದಂಧೆ, ಭೂಕಬಳಿಕೆ ಮಾಡುವ ಮಧ್ಯವರ್ತಿಗಳೊಂದಿಗೆ ಕೈಜೋಡಿಸುತ್ತಾರೆ ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.
ನಾಯಕನಹಟ್ಟಿ ನಾಡಕಚೇರಿ ಮುಂದೆ ಗುರುವಾರ ಹಿರೇಕೆರೆ ಕಾವಲು ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ಆಸ್ತಿಯನ್ನು ಬೇರೆಯವರಿಗೆ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ವಂಚನೆಗೆ ಒಳಗಾದ ರೈತರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿರೇಕೆರೆ ಕಾವಲಿನ ರಿ.ಸ.ನಂ. ೫೪೦, ೫೯೭, ೬೪೪, ೪೯೦ ರ ರೈತರ ಜಮೀನಿಗಳನ್ನು ಅಧಿಕಾರಿಗಳು ಮಧ್ಯವರ್ತಿಗಳೊಂದಿಗೆ ಕೈಜೋಡಿಸಿ ಭೂ ಕಬಳಿಕೆದಾರರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಉಪತಹಶೀಲ್ದಾರ್ ಇದರ ಬಗ್ಗೆ ಕ್ರಮತೆಗೆದುಕೊಂಡು ೧೫ ದಿನಗಳೊಳಗೆ ರೈತರಿಗೆ ಜಮೀನು ಹಿಂದಿರುಗಿಸಿಕೊಡಬೇಕು. ಇಲ್ಲವಾದರೆ ಪಾದೆಯಾತ್ರೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಡವರ ಕಷ್ಟಗಳನ್ನು ಕೇಳದ ಮೇಲೆ ಯಾಕೆ ಶಾಸಕರು ಆಗಿದ್ದೀರಾ, ಮನೆಯಲ್ಲಿ ಕುಳಿತುಕೊಳ್ಳಲು ಶಾಸಕರಾಗಿದ್ದೀರಾ, ನಾಯಕನಹಟ್ಟಿ ಹಿರೇಕೆರೆ ಕಾವಲು ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರ ಆಸ್ತಿಗಳನ್ನು ಅಧಿಕಾರಿಗಳು ಬೇರೆಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಇದನ್ನು ಕೇಳುವವರು ಯಾರು ಎಂದು ಶಾಸಕ ಎನ್.ವೈ,ಗೋಪಾಲಕೃಷ್ಣ ವಿರುದ್ದ ಮಾಜಿ ಶಾಸಕರು ಪ್ರಶ್ನೆ ಮಾಡಿ, ರಾಜ್ಯದಲ್ಲಿ ನಿಮ್ಮದೆ ಕಾಂಗ್ರೇಸ್ ಸರ್ಕಾರ ಇದೆ, ನಾಯಕನಹಟ್ಟಿ ಹೋಬಳಿ, ತಳಕು, ಖಾನಹೊಸಳ್ಳಿ, ತುರುನೂರು ಹೋಬಳಿ ಸೇರಿಸಿಕೊಂಡು ನಾಯಕನಹಟ್ಟಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು. ಪಟ್ಟಣದಲ್ಲಿ ನಾನು ಶಾಸಕನಾಗಿದ್ದಾಗ ೨ ಎಕರೆ ಅಗ್ನಿಶಾಮಕ ದಳಕ್ಕೆ ಜಾಗ ಮಾಡಿಸಿದ್ದೆ, ನೀವು ಅಗ್ನಿಶಾಮಕ ದಳದ ಕಚೇರಿ ಮಾಡಲಿಲ್ಲ, ಬಿಜೆಪಿ ಮಾಜಿ ಶಾಸಕ ಶ್ರೀರಾಮುಲು ಮಾಡಲಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ತಾಪಂ ಮಾಜಿ ಸದಸ್ಯ ಜಂಬಣ್ಣ, ಎತ್ತಿನಹಟ್ಟಿ ಪಾಪಜ್ಜ, ರೈತರಾದ ಯಲ್ಲಮ್ಮ, ಲಕ್ಷಿö್ಮÃ, ಶಿವಯ್ಯ, ಶೈಲಾಜ, ಮೈಲಾರಪ್ಪ, ಮಲ್ಲೇಶ, ತಿಮ್ಮಣ್ಣ, ಶ್ರೀನಿವಾಸ, ಹೊನ್ನೂರಪ್ಪ, ತಿಮ್ಮಣ್ಣ, ಈಶ್ವರಪ್ಪ ಸೇರಿದಂತೆ ಮುಂತಾದವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading