December 14, 2025
IMG-20250424-WA0100.jpg

ಚಳ್ಳಕೆರೆ ಏ24 ರಕ್ತ ಯಾವುದೋ ಅಂಗಡಿ-ಮುಂಗಟ್ಟುಗಳಲ್ಲಿ ಸಿಗುವ ವಸ್ತುವಲ್ಲ. ಮನುಷ್ಯರ ದೇಹದಲ್ಲಿ ಉತ್ಪತ್ತಿಯಾಗುವ ಸಂಪನ್ಮೂಲವಾಗಿದೆ. ಇಂದಿನ ದಿನಗಳಲ್ಲಿ ರಕ್ತದ ಅಗತ್ಯ ಹೆಚ್ಚಿದ್ದು, ಶಸ್ತ್ರ ಚಿಕಿತ್ಸೆ, ಮಹಿಳೆಯರಿಗೆ ಹಾಗೂ ಕಡಿಮೆ ರಕ್ತ ಇರುವ ರೋಗಿಗಳಿಗೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ರಕ್ತದಾನ ಶಿಬಿರಗಳು ನಡೆಯಬೇಕು ಎಂದು ಪ್ರಭಾರ ತಾಪಂ ಇಒ ಒ ರವಿಕುಮಾರ್ ಹೇಳಿದರು.
ಚಳ್ಳಕೆರೆ ನಗರದಬಾಲಾಜಿ ನರ್ಸಿಂಗ್ ಹೋಂ ಆವರಣದಲ್ಲಿ ಕನ್ನಡದ ವರನಟ
ಡಾ.ರಾಜಕುಮಾರ ಜನ್ಮದಿನ ಹಾಗೂ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಹುಣ್ಣಿಮೆ ಪ್ರಕಾಶನ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ಸಂಘ,
ಹಾಗೂ
ಬಾಲಾಜಿ ಹಾಸ್ಪಿಟಲ್ ರಕ್ತ ನಿಧಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ
ರಕ್ತದಾನ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ನೌಕರರು ಕೆಲಸದ ಒತ್ತಡಗಳ ನಡುವೆಯೂ ನೌಕರರು ರಕ್ತದಾನ ಮಾಡಿ ಜೀವ ಉಳಿಸಲು ಮುಂದಾಗಿರುವುದು ಶ್ಲಾಘನೀಯ . ಅಪಘಾತ.ಹೆರಿಗೆ ಹಾಗೂ ಗಂಭೀರ ಕಾಯಿಲೆಗೆ ತುತ್ತಾಗ ರಿತ್ತ ಸಿಗದೆ ಸಾವನ್ನ್ಪುತ್ತಾರೆ ಆದ್ದರಿಂದ ರಕ್ತದಾನದಿಂದ ಆರೋಗ್ಯ ಸಮತೋಲನ ಕಾಪಾಡಲು ಸಹಕಾರಿಯಾಗಲಿದೆ ಇಂತಹ ರಕ್ತದಾನ ಶಿಬಿರಗಳನ್ನು ಹೆಚ್ಚು ಹೆಚ್ಚು ಹಮ್ಮಿಕೂಳ್ಳುವಂತೆ ತಿಳಿಸಿದರು.
ಶಿಬಿರದಲ್ಲಿ ಸುಮಾರು 35ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆರ್ ಡಿ ಪಿ ಆರ್ ಚಳ್ಳಕೆರೆ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ ಇಂತಹ ಶಿಬರಗಳ ಮೂಲಕ ಉಚಿತವಾಗಿ ಪಡೆದುಕೊಂಡ ರಕ್ತವನ್ನು ಬಡವರಿಗೆ ರಕ್ತವನ್ನು ಕನಿಷ್ಠ ಪ್ರೋಸೆಸಿಂಗ್ ದರದಲ್ಲಿ ನೀಡಿದರೆ ಅನುಕೂಲವಾಗುತ್ತದೆ ಎಂದರು.
ಹುಣ್ಣಿಮೆ ಪ್ರಕಾಶನದ ಎನ್ ಆರ್ ತಿಪ್ಪೇಸ್ವಾಮಿ ಮಾತನಾಡಿ ಸ್ಥಳೀಯ ಸಂಸ್ಥೆಗಳ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಸ್ಥಿರೀಕರಿಸಲು 73 ನೇ ತಿದ್ದುಪಡಿ ಮೂಲಕ ರಾಷ್ಟ್ರದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ಬಂದಿದ್ದು ಅದರ ಮೂಲಕ ಇಂದು ಮೂರು ಸ್ತರಗಳ ಪಂಚಾಯತ್ ರಾಜ್ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಯಲ್ಲಿದ್ದು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಹೊಣೆ ಇಲಾಖಾ ನೌಕರರ ಮೇಲಿದ್ದು ಎಲ್ಲರೂ ಶ್ರಮವಹಿಸಬೇಕಾಗಿದೆ. ಇಂದು ಆ ದಿನದ ನೆನಪಿನಲ್ಲಿ ರಕ್ತದಾನವನ್ನು ಮಾಡಿರುವ ಎಲ್ಲ ನೌಕರರಿಗೆ ಧನ್ಯವಾದಗಳು ತಿಳಿಸಿದರು.
ಚಳ್ಳಕೆರೆ ತಾಲೂಕು ಸರ್ಕಾರಿ ನೌಕರರ ಸಂಘದ ಖಜಾಂಚಿ ಎಂ ರಾಮಚಂದ್ರ, ತಾಲೂಕ್ ಪಂಚಾಯತಿ ಸಹಾಯಕ ನಿರ್ದೇಶಕರುಗಳಾದ ಟಿ. ಎಚ್ .ಸಂತೋಷ್ , ಸಂಪತ್ ಕುಮಾರ್
ಬಾಲಾಜಿ ರಕ್ತ ನಿಧಿ ಕೇಂದ್ರದ ವ್ಯವಸ್ಥಾಪಕ ತಿಮ್ಮಪ್ಪ ಹಾಗೂ ಉದ್ಯಮಿಗಳಾದ ಎಂ.ಆರ್ ರೇವಣ್ಣ , ಅಪ್ಪಾಜಿ ರಾಜು, ಬಿ ಮಂಜುನಾಥ್, ಸತೀಶ್, ಹರೀಶ್. ಮಹೇಂದ್ರಪ್ಪ, ಶ್ರೀನಿವಾಸ್, ಗುಂಡಪ್ಪ, ಶಶಿಕಲಾ, ಭಾರತಿ, ಪ್ರತಿಭಾ, ನಾಗರಾಜ, ರಾಘವೇಂದ್ರ, ಈಶ್ವರಪ್ಪ
ಮತ್ತು ಶಿಕ್ಷಕರಾದ ಅಶೋಕ್ ಕುಮಾರ್, ಕೆ ಓ ನಾಗೇಶ್, ರಾಘವೇಂದ್ರ , ಸರ್ಕಾರಿ ಐಟಿಐ ಕಾಲೇಜಿನ ಪ್ರಿನ್ಸಿಪಾಲರಾದ ಬಸಣ್ಣ ಎಂ ಬಿ . ನಿಸರ್ಗ ಗೋವಿಂದರಾಜ್.ಇತರರಿದ್ದರು.
.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading