ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಟಿ. ಮಂಜುಳಾ ಶ್ರೀಕಾಂತ್ ಅವರು 2026-27ನೇ ಸಾಲಿನ ಆಯ-ವ್ಯಯ (ಬಜೆಟ್)ವನ್ನು ಪಂಚಾಯಿತಿ ಸಭಾಂಗಣದಲ್ಲಿ ಮಂಡಿಸಿದರು.
ಒಟ್ಟು ಬಜೆಟ್ ಮೊತ್ತ ₹13,79,85,341 ಆಗಿದ್ದು, ವೆಚ್ಚಗಳ ಮೊತ್ತ ₹13,74,86,462 ಎಂದು ಅಂದಾಜಿಸಲಾಗಿದೆ. ಇದರಿಂದ ₹4,98,872 ಉಳಿತಾಯವಾಗುವ ನಿರೀಕ್ಷೆ ವ್ಯಕ್ತಪಡಿಸಲಾಯಿತು.
ಆದಾಯ ಮೂಲಗಳ ವಿವರಗಳಲ್ಲಿ ರಾಜ್ಯ ಸ್ವ ಆದಾಯದಿಂದ ₹5,24,28,214, ಬಂಡವಾಳ ಆದಾಯದಿಂದ ₹41,10,000 ಹಾಗೂ ವಿಶೇಷ ವಸೂಲಾತಿಗಳಿಂದ ₹4,44,57,128 ರೂಪಾಯಿಗಳ ಆದಾಯ ನಿರೀಕ್ಷಿಸಲಾಗಿದೆ. 2026ನೇ ಸಾಲಿನ ಪ್ರಾರಂಭಿಕ ಶೇಷ ₹3,79,73,815 ಇದ್ದು, 2027ರ ಅಂತ್ಯದ ವೇಳೆಗೆ ₹3,84,72,686 ಆಗುವ ನಿರೀಕ್ಷೆ ಇದೆ.
2026-27ನೇ ಸಾಲಿನಲ್ಲಿ ಆಸ್ತಿ ತೆರಿಗೆಯಲ್ಲಿ 5% ಹಾಗೂ ಕುಡಿಯುವ ನೀರಿನ ದರದಲ್ಲಿ 3% ಹೆಚ್ಚಳ ಮಾಡಲಾಗಿದೆ. ಪ್ರತಿ ಸಂಪರ್ಕಕ್ಕೆ ಕನಿಷ್ಠ ಮಾಸಿಕ ದರವನ್ನು ಗೃಹಬಳಕೆಗಾಗಿ ₹80, ಗೃಹೇತರ ಬಳಕೆಗೆ ₹160 ಮತ್ತು ವಾಣಿಜ್ಯ/ಕೈಗಾರಿಕಾ ಬಳಕೆಗೆ ₹320 ಎಂದು ನಿಗದಿ ಮಾಡಲಾಗಿದೆ.
ಎಸ್‌ಎಫ್‌ಸಿ ಮುಕ್ತ ನಿಧಿ ಯೋಜನೆಯಲ್ಲಿ ₹6 ಲಕ್ಷ, ಎಸ್‌ಎಫ್‌ಸಿ ಎಸ್‌ಸಿ ಎಸ್‌ಪಿ ಯೋಜನೆಯಲ್ಲಿ ₹1 ಲಕ್ಷ ಮತ್ತು ಎಸ್‌ಎಫ್‌ಸಿ ಟಿಎಸ್‌ಪಿ ಯೋಜನೆಯಲ್ಲಿ ₹1 ಲಕ್ಷ ಅನುದಾನ ಸರ್ಕಾರದಿಂದ ಮಂಜೂರಾಗಿದೆ. ಪೌರಾಡಳಿತ ನಿರ್ದೇಶನಾಲಯದ ಮಾರ್ಗಸೂಚಿಯಂತೆ ತೆರಿಗೆ ಹೆಚ್ಚಳ ಜಾರಿಗೊಂಡಿದೆ ಎಂದು ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಬಾಕ್ಸ್ ಸುದ್ದಿ: ತೆರಿಗೆ ಹೆಚ್ಚಳಕ್ಕೆ ವಿರೋಧ
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನವರು ರೈತರು, ಕೂಲಿ ಕಾರ್ಮಿಕರು ಹಾಗೂ ಶ್ರಮಿಕರಾಗಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಮೇಲೆ 3% ಮತ್ತು ಆಸ್ತಿ ತೆರಿಗೆಯಲ್ಲಿ 5% ಹೆಚ್ಚಳ ಮಾಡಿರುವುದು ಅವೈಜ್ಞಾನಿಕ ಎಂದು ವಕೀಲ ಕಲ್ಲಪ್ಪ ಕೆ. ತಿಪ್ಪೇರುದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.
ಸಭೆಯಲ್ಲಿ ಉಪಾಧ್ಯಕ್ಷೆ ಬೋಸಮ್ಮ, ಸದಸ್ಯರಾದ ಎಂ.ಪಿ. ಮಂಜುನಾಥ್, ಓ. ಮಹೇಶ್ವರಿ, ಗುರುಶಾಂತಮ್ಮ, ಸುನೀತ ಮುದಿಯಪ್ಪ, ಈರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಜೆ.ಆರ್. ರವಿಕುಮಾರ್, ಸರ್ವಮಂಗಳ ಉಮಾಪತಿ, ತಿಪ್ಪೇಶ್, ಬಿ. ವಿನುತ, ಎನ್. ಮಹಂತಣ್ಣ, ಪಿ. ಓಬಯ್ಯ ದಾಸ್, ನಾಮ ನಿರ್ದೇಶಿತ ಸದಸ್ಯರಾದ ಟಿ. ವಾಸೀಂ ಅಹಮದ್, ಟಿ. ಓಬಳೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.