ಚಳ್ಳಕೆರೆ ಮಾ24
ಈ ಹಿಂದೆ ಸರ್ಕಾರ ಮಾದಿಗ ಸಮುದಾಯಕ್ಕೆನೀಡಿದಂತಹ ಆಸ್ತಿಗಳನ್ಮ ಕಿತ್ತುಕೊಳ್ಳುವಂತಹ ಕೆಲಸ ಮಾಡಬಾರದು.
ಸಮುದಾಯಕ್ಕೆ ವಾಪಸ್ ನೀಡಬೇಕು ಎಂದು ಕೋಡಿಹಳ್ಳಿ ಶ್ರೀ ಆದಿ ಜಾಂಬವಂಥ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಹೇಳಿದರು.
ಜಿಲ್ಲಾ ಮಾದಿಗ ಮಹಾಸಭಾ ತಾಲೂಕು ಮಾದಿಗ ಸಮುದಾಯದ ವಿವಿಧ ಸಂಘಟನೆಗಳು ಮಾದಿಗ ಸಮುದಾಯದ ಆಸ್ತಿ ರಕ್ಷಣೆ ಹಾಗೂ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ನಗರದ ತಾಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಮಾದಿಗ ಸಮುದಾಯಕ್ಕೆ ಆಸ್ತಿಗಳು ಇರುವುದು ಕಡಿಮೆ ಇಂತಹ ಸಮುದಾಯಕ್ಕೆ ನೀಡಿದಂತಹ ಆಸ್ತಿಗಳ ರಕ್ಷಣೆಯಾಗಬೇಕು ವಿನಹ ಕಸಿದುಕೊಳ್ಳುವಂತಹ ಕೆಲಸ ಮಾಡಿದರೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಇದರಿಂದ ಈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ
ಅನ್ಯಾಯವನ್ನು ಸರಿಪಡಿಸಬೇಕಾದರೆ ಮಾದಿಗ ಸಮುದಾಯಕ್ಕೆ ನೀಡಿದಂತಹ ಆಸ್ತಿಗಳನ್ನ ಮತ್ತೆ ಅವರಿಗೆ ನೀಡಿ ಸಮುದಾಯಕ್ಕೆ ಅನುಕೂಲ ಮಾಡಬೇಕಿದೆ.
ಇದರಿಂದ ಈ ಸಮುದಾಯಕ್ಕೆ ಸಹಕಾರ ಆಗುತ್ತದೆ. ಇಂತಹ ಆಸ್ತಿಗಳನ್ನ ವಾಪಸ್ ಕೊಡುವ ಕೆಲಸವಾಗಬೇಕು. ಇಂತಹ ಆಸ್ತಿಗಳನ್ನ ಪಡೆಯುವಲ್ಲಿ ಸಮುದಾಯದ ಪ್ರತಿಯೊಬ್ಬರು ಕೈಜೋಡಿಸಬೇಕು. ಇಂತಹ ಕಾರ್ಯ ಮಾಡುತ್ತಿರುವುದು ಸಮಾಜ ಇದಕ್ಕಾಗಿ ಎಂಬುದನ್ನ ಅರ್ಥಕೊಂಡು ಹೋರಾಟದಲ್ಲಿ ಭಾಗವಹಿಸಬೇಕು
ಸಮಾಜದ ಚಟುವಟಿಕೆ ಹಾಗೂ ಕಲ್ಯಾಣದ ಕೆಲಸಕ್ಕೆ ಸಹಕಾರ ಮುಖ್ಯವಾಗುತ್ತದೆ. ಕಾರ್ಯಗಳಿಗೆ ಕೈಜೋಡಿಸಿ ಎಂದು ಸಮುದಾಯಕ್ಕೆ ಕರೆ ನೀಡಿದರು.









ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷರಾದ ಎಂ. ಶಿವಮೂರ್ತಿ ಮಾತನಾಡಿ.ಚಳ್ಳಕೆರೆ ತಾಲ್ಲೂಕು, ಕಸಬಾ .ಹೋಬಳಿ, ರಿ.ಸ.ನಂ:280 ರಲ್ಲಿ ಮಾದಿಗ ಜನಾಂಗಕ್ಕೆ ಸೇರಿದ ಚರ್ಮದ ಕುಶಲ ಕೈಗಾರಿಕ ಸಹಕಾರ ಸಂಘ (ನಿ). ಚಳ್ಳಕೆರೆ ಇವರಿಗೆ 4 ಎಕರೆ ಮುಂಜೂರಾಗಿದ್ದು, ಮುಂಜೂರಾಗಿರುವ ದಾಖಲೆಗಳು ನಗರಸಭೆ, ಹಾಗೂ ತಾಲ್ಲೂಕು ಕಛೇರಿಯಲ್ಲಿ ದಾಖಲೆ ನೊಂದಣಿಯಾಗಿರುವುದಿಲ್ಲ. ದಾಖಲೆಗಳು ಶಿಥಿಲಗೊಂಡಿದ್ದು., ಕೂಡಲೇ ಮಾದಿಗ ಸಮಾಜದ ಆಸ್ತಿಗಳನ್ನು ಕೂಡಲೇ ಸಂಬಂಧಪಟ್ಟ ಇಲಾಖೆಯಲ್ಲಿ ಸೃಜನೆ ಮಾಡಿ ದಾಖಲಿಸಬೇಕು.ನಗರದಲ್ಲಿನಿರ್ಮಾಣವಾಗಿರುವ ಜಗಜೀವನರಾಂ ಭವನವನ್ನು ಸರ್ಕಾರ ಮರುನೋಂದಾಣಿ ಮುಖಾಂತರ ಮಾದಿಗ ಸಮಾಜಕ್ಕೆ ನೀಡಬೇಕು, ಮತ್ತು ಸ.ನಂ:278 ಆದಿ ಕರ್ನಾಟಕ ಕ್ಷೇಮಾಭಿವೃದ್ಧಿಗೆ ಕೊಟ್ಟಿರುವಂತಹ ಜಾಗದ 6 ಎಕರೆ, 12 ಗುಂಟೆ ಜಮೀನಿನಲ್ಲಿ ಈಗಾಗಲೆ ಮನೆ ಕಟ್ಟಿಕೊಂಡಿದ್ದು ಇದರ ಬದಲಿ ಜಾಗವನ್ನು ಮಾದಿಗ ಸಮಾಜಕ್ಕೆ ನೀಡಬೇಕು, ಮತ್ತು 1985ರಲ್ಲಿ ಆದಿಕರ್ನಾಟಕ ವಿದ್ಯಾರ್ಥಿನಿಲಯದ ಅಸೆಸ್‌ಮೆಂಟ್, ರಿಜಿಸ್ಟರ್‌ನಲ್ಲಿ ಅಳಕೆ ಜಾಗವನ್ನು ಮರುಸ್ಥಾಪನೆ ಮಾಡಿ ಸಮಾಜಕ್ಕೆ ಬಿಟ್ಟುಕೊಡಬೇಕು. ಚರ್ಮದ ಕುಶಲ ಕೈಗಾರಿಕ ಸಹಕಾರ ಸಂಘದ 4ಎಕರೆ ಜಾಗದಲ್ಲಿ ಈಗಾಗಲೇ 2ಎಕರೆ ಒತ್ತುವರಿಯಾಗಿದ್ದು, 2 ಎಕರೆ ಅಲಿನೇಷನ್ ಆಗಿರುತ್ತದೆ ಅದನ್ನು ಸೃಜನೆ ಮಾಡಿ ಈಗಿನ ದಾಖಲೆನಲ್ಲಿ ಯಥಾವತ್ತಾಗಿ ಪಹಣಿ ಪಟ್ಟ ಮುಟೇಷನ್, ನಗರಸಭೆಯಲ್ಲಿ ಮತ್ತು ತಾಲ್ಲೂಕು ಕಛೇರಿನಲ್ಲಿ ನಮೂದು ಮಾಡಿ ಸರ್ವೇ ಇಲಾಖೆಯಲ್ಲಿ ಸರ್ವೆದಾಖಲು ಮಾಡಬೇಕು. ಮತ್ತು ರಿ.ಸ.ನಂ.2806 ಸಂಬಂಧಿಸಿದ ಜಾಗಕ್ಕೆ ತಹಶೀಲ್ದಾ ಆದೇಶ ಮಾಡಿ ಸರ್ವೆ ಇಲಾಖೆಯಿಂದ ಸ್ಕೆಚ್ ಮಾಡಿಸಿ ಹದ್ದುಬಸ್ತು ಮಾಡಿ ಬೇಲಿ ಹಾಕಿಸಿಕೊಡಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರೆಹಾನ್ ಪಾಷಾ
. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದು. ಮನವಿಯನ್ನ ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು….
ಈ ಧರಣಿಯಲ್ಲಿ ಮಾದಗಿ ಮಹಾಸಭದ
ಟಿ .ಯೋಗೇಶ್ ಬಾಬು ,ಲಕ್ಷ್ಮಣ ,ಜಿಸಿ ಗಿರೀಶ್, ಕೆಂಚಪ್ಪ ,ಮಧು ಕುಮಾರ್, ಸಿದ್ದೇಶ್, ಕೃಷ್ಣಮೂರ್ತಿ, ರಾಜಣ್ಣ, ಚೌಡಪ್ಪ ,ಇಂದ್ರೇಶ್ ,ಜಗಳೂರಪ್ಪ.ವೆಂಕಟೇಶ, ಮೈತ್ರಿ ದ್ಯಾಮಣ್ಣ,ಮೂರ್ತಿ,ರಾಮಕೃಷ್ಣ, ತಿಪ್ಪೇಸ್ವಾಮಿ ಬಸವರಾಜ್ ಹಾಗೂ . ಮಹಾಸಭಾದ ಸದಸ್ಯರು ಹಾಗೂ ಮುಖಂಡರು ಇದ್ದರು.
.
About The Author
Discover more from JANADHWANI NEWS
Subscribe to get the latest posts sent to your email.