” ಚಳ್ಳಕೆರೆ-ಚಳ್ಳಕೆರೆಯ ನರಹರಿನಗರದ ಶ್ರೀನರಹರೇಶ್ವರ ದೇವಸ್ಥಾನದ ಆವರಣದಲ್ಲಿ ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಶ್ರೀನರಹರಿ ಸೇವಾ ಪ್ರತಿಷ್ಠಾನ ಮತ್ತು ನಾಗ ಸಿಂಹಾದ್ರಿ ಚಾರಿಟೀಸ್ ನ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕ್ಯಾನ್ಸರ್ ಅರಿವು ಮತ್ತು ಉಚಿತ ತಪಾಸಣಾ ಶಿಬಿರ ನಡೆಯಿತು.ಕ್ಯಾನ್ಸರ್ ಅರಿವು ಮತ್ತು ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು-ಕ್ಯಾನ್ಸರ್ ಕಾಯಿಲೆಯನ್ನು ಆರಂಭದಲ್ಲಿಯೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಖಂಡಿತವಾಗಿಯೂ ಅದರಿಂದ ಮುಕ್ತಿ ಪಡೆಯಬಹುದು. ಇಲ್ಲದಿದ್ದರೆ ಅದು ಮಾರಣಾಂತಿಕವಾಗಬಹುದು, ಹೀಗಾಗಿ ಈ ಕಾಯಿಲೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಪ್ರಸಿದ್ಧ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ಅದರ ಬಗ್ಗೆ ಅರಿವು ಮತ್ತು ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ, ಜನರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.









ಕ್ಯಾನ್ಸರ್ ನ ಹುಟ್ಟು , ಬೆಳವಣಿಗೆ ಮತ್ತು ಅದರ ನಿವಾರಣೆಯ ಬಗ್ಗೆ ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅನುಭವಿ ವೈದ್ಯರಾದ ಡಾ.ಸಂಚಿತ ಮತ್ತು ಡಾ.ಸ್ವಾತಿ ಅವರು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಟ್ರಸ್ಟಿಗಳಾದ ಬಿ.ಆರ್ ನಾಗರಾಜ್, ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ ಡಾ.ಸಿ ನಾರಾಯಣಮೂರ್ತಿ, ಚಳ್ಳಕೆರೆಯ ತಾರನಾಥ ಕ್ಲಿನಿಕ್ ನ ಡಾ.ಮಂಜುನಾಥ, ವೈ ಏಕಾಂತರಾಂ, ಡಾ.ವೈ ನರಹರಿ, ರಾಜೇಶ್ವರಿ ರಾಜಾರಾಮ್, ಪದ್ಮಶ್ರೀ , ಬಿ.ಸಿ.ಸಂಜೀವಮೂರ್ತಿ, ವೆಂಕಟೇಶಮೂರ್ತಿ, ರಾಮಚಂದ್ರಪ್ಪ, ಮಲ್ಲಿಕಾರ್ಜುನಪ್ಪ, ರೇಣುಕಸ್ವಾಮಿ, ವಿಜಯಣ್ಣ,ಯತೀಶ್ ಎಂ ಸಿದ್ದಾಪುರ, ಡಾ.ಭೂಮಿಕ,ಶ್ರೀಮತಿ ಯಶೋಧಾ ಪ್ರಕಾಶ್,ಎಸ್ ಎನ್ ಗಂಗಮ್ಮ,ಶ್ರೀಮತಿ ಗೀತಾ ನಾಗರಾಜ್,ಕವಿತ ವೆಂಕಟೇಶ್,ಶಾಂತಮ್ಮ, ಸುಧಾ, ಲೀಲಾವತಿ, ಜಯಮ್ಮ,ವೀರಮ್ಮ, ದ್ರಾಕ್ಷಾಯಣಿ, ಮಾನ್ಯ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.