ಹಿರಿಯೂರು :
ಬೀದಿನಾಯಿಗಳಿಗೆ ಸಂಬಂಧ ಪಟ್ಟಂತೆ ಮಾನ್ಯ ಸರ್ವೋಚ್ಚ ನ್ಯಾಯ್ಯಲಯದ ಅದೇಶದ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಹಿರಿಯೂರು ನಗರಸಭೆಯ ಆಡಳಿತಾಧಿಕಾರಿಗಳು ಮತ್ತು ಯೋಜನಾ ನಿರ್ದೇಶಕರು ಬೀದಿನಾಯಿಗಳ ನಿರ್ವಹಣೆ ಬಗ್ಗೆ ನೀಡಲಾಗಿರುವ ಸೂಚನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಇಂದು ಸಭೆ ಕರೆಯಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.
ನಗರದ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಪ್ರಾಣಿ ದಯಸಂಘದವರು, ಹೋಟೆಲ್ ಮಾಲೀಕರು, ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸದಸ್ಯರು, ಮತ್ತು ಸ್ವ ಇಚ್ಚೆಯಿಂದ ಬೀದಿನಾಯಿಗಳನ್ನು ದತ್ತು ಪಡೆದು ಆರೈಕೆ ಮಾಡುವವರಿಗೆ ಬೀದಿನಾಯಿಗಳ ನಿರ್ವಹಣೆ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಆವರಣದಲ್ಲಿರುವ ಬೀದಿನಾಯಿಗಳ ಪರಿಶೀಲನೆ ಮಾಡಿ ನೋಡಲ್ ಆಫೀಸರ್ ಗಳನ್ನು ನೇಮಿಸಲಾಗಿರುತ್ತದೆ, ಪ್ರತಿ ಒಂದು ವಾರ್ಡ್ ಗೆ 2 ಫೀಡಲ್ ನೋಡಲ್ ಗಳಂತೆ 31 ವಾರ್ಡ್ ಗಳಿಗೆ 62 ರಂತೆ ಬೀದಿನಾಯಿಗಳಿಗೆ ಆಹಾರ ಹಾಕುವ ಸ್ಥಳಗಳನ್ನು ಗುರುತಿಸಲಾಗಿದೆ ಎಂದರಲ್ಲದೆ,
ಬೀದಿನಾಯಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲು ಕಛೇರಿ ನೌಕರರು/ಸಿಬ್ಬಂದಿ ವರ್ಗದವರನ್ನು ಮೇಲ್ವಿಚಾರಕರಾಗಿ ನೇಮಿಸಲಾಗಿದ್ದು, ಇನ್ನು ಮುಂದೆ ಸಾರ್ವಜನಿಕರು ಬೀದಿನಾಯಿಗಳಿಗೆ ಎಲ್ಲಂದರಲ್ಲಿ ಆಹಾರ ಹಾಕದೆ ನಗರಸಭೆ ಗುರುತಿಸಿರುವ ಸ್ಥಳಗಳಲ್ಲಿಯೇ ಹಾಕಬೇಕು ಮತ್ತು ಅವಶ್ಯವಿದ್ದಲ್ಲಿ ನಗರಸಭೆಯ ವಾಹನ ಚಾಲಕರಿಗೆ ಕರೆ ಮಾಡಿದರೆ ಅವರೇ ಆಹಾರ ತೆಗೆದುಕೊಂಡು ಹೋಗಿ ಗುರುತಿಸಿರುವ ಸ್ಥಳಕ್ಕೆ ಹಾಕುತ್ತಾರೆ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ಅವರು ಹೇಳಿದರು.
ಈ ಸಭೆಯಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ವ್ಯವಸ್ಥಾಪಕಿ ಬಿ.ಆರ್.ಮಂಜುಳಾ, ನಗರಸಭೆ ಇಂಜಿನಿಯರ್ ಗಳಾದ ಪ್ರಸನ್ನ ಹಾಗೂ ಹರ್ಷ, ನಗರಸಭೆ ಆರೋಗ್ಯ ನಿರೀಕ್ಷಕರುಗಳಾದ ಸಂದ್ಯಾ, ಹಾಗೂ ಸುನೀಲ್, ನಯಾಜ್, ಸೇರಿದಂತೆ ಕಚೇರಿ ಸಿಬ್ಬಂದಿವರ್ಗದವರು ಹಾಗೂ ಹೋಟೆಲ್ ಮಾಲೀಕರುಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.