September 15, 2025
IMG-20250224-WA0175.jpg

” ಚಳ್ಳಕೆರೆ:-ಮನುಷ್ಯ ಮತ್ತು ಪ್ರಕೃತಿಗೆ ಅನೇಕ ಅನುಕೂಲಗಳನ್ನು ಒದಗಿಸುವ ಗೋವುಗಳ ಸಂರಕ್ಷಣೆಗೆ ಕಟಿಬದ್ಧವಾಗಬೇಕಿದೆ ಎಂದು ನಗರದ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಪ್ರಾಯಪಟ್ಟರು. ಬಂಟ್ವಾಳದ ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ನ ವತಿಯಿಂದ ನಡೆಯುತ್ತಿರುವ ನಂದಿ ರಥಯಾತ್ರೆಗೆ ನಗರದ ಚಳ್ಳಕೆರೆಮ್ಮ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಮೆರವಣಿಗೆಗೆ ಚಾಲನೆ ನೀಡಿದ ನಂತರದ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಮಾತನಾಡಿ ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಗೋವಿಗೆ ಪವಿತ್ರ ಸ್ಥಾನವನ್ನು ನೀಡಲಾಗಿದ್ದು ಸಕಲ ದೇವರುಗಳ ಆವಾಸ ಸ್ಥಾನ ಎಂಬ ಬಲವಾದ ನಂಬಿಕೆ ಹಿಂದೂಗಳಲ್ಲಿದೆ , ಹೀಗಾಗಿ ಅವುಗಳ ಉಳಿವಿಗಾಗಿ ನಾವು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಆದ್ದರಿಂದ ಇಂತಹ ಸಂದರ್ಭದಲ್ಲಿ ನಂದಿ ರಥಯಾತ್ರೆಯನ್ನು ಕರ್ನಾಟಕದಾದ್ಯಂತ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.ಈ ರಥಯಾತ್ರೆಯ ಬಗ್ಗೆ ತಾಲೂಕಿನ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗಗುರು ಮಹೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಬಂಗಾರದೇವರಹಟ್ಟಿಯ ಕಿಲಾರಿ ಜೋಗಯ್ಯ, ಕಾಲುವೆಹಳ್ಳಿ ಪಾರ್ವತಮ್ಮ, ಎತ್ತಿನಗೌಡ್ರಹಟ್ಟಿಯ ಪಾಲಯ್ಯ ಅವರನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಬಿ.ಎಂ ಕೃಷ್ಣಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಉಪಾಧ್ಯಕ್ಷ ಡಾ.ಡಿ.ಎನ್ ಮಂಜುನಾಥ, ಅನಂತರಾಮ್ ಗೌತಮ್ , ಬಾಳೆಕಾಯಿ ರಾಮದಾಸ್, ಕೆ.ಟಿ.ಕುಮಾರಸ್ವಾಮಿ,ಸೂರನಹಳ್ಳಿ ಶ್ರೀನಿವಾಸ್, ಜ್ಯೋತಿಪ್ರಕಾಶ್ ಹೋಟೆಲ್ ತಿಮ್ಮಾರೆಡ್ಡಿ,ಮುಖಂಡೆ ಜಗದಂಬಾ,ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ,ಸುಮನ ಕೊಟೇಶ್ವರ,ಕಲ್ಪನ,ಸೀತಾಲಕ್ಷ್ಮೀ ಬಸವರಾಜ್, ಸುಮ ಪ್ರಕಾಶ್, ರತ್ನಮ್ಮ,ಮೋಹಿನಿ, ತಿಪ್ಪಮ್ಮ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading