ಚಳ್ಳಕೆರೆ: ನಶಿಸಿ ಹೋಗುತ್ತಿರುವ ಬಯಲು ಸೀಮೆಯ ಸಾಹಿತ್ಯ ಹಾಗೂ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಕಲಾ ಕುಸುಮಗಳು 2024- 25 ಎಂಬ ವಿನೂತನ ಕಾರ್ಯಕ್ರಮವನ್ನು ಜ. 27ರಿಂದ 29ರ ವರೆಗೆ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲಾ ಆವರಣದ ಬಯಲು ರಂಗಮಂದಿರದಲ್ಲಿ ಜರುಗಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿಟಿ ವೀರಭದ್ರ ಸ್ವಾಮಿ ತಿಳಿಸಿದರು.




ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಕಲಾ ಕುಸುಮಗಳು ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದು ಜ. 27ರಂದು ಸೋಮವಾರ ಸಂಜೆ ಆರಕ್ಕೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಜ. 28ರ ಮಂಗಳವಾರದಂದು ಸಂಜೆ ಆರಕ್ಕೆ ಧಾತ್ರಿ ಸಿರಿಗೇರಿ ರವರಿಂದ ಶ್ರೀ ಕೃಷ್ಣ ಸಂಧಾನ ವಿಶೇಷ ಹಾಸ್ಯ ನಾಟಕ ಪ್ರದರ್ಶನ ತಾಲೂಕಿನ ಗ್ರಾಮೀಣ ಪ್ರದೇಶದ ಜಾನಪದ ಸೊಗಡನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಜ 29ರಂದು ಬುಧವಾರ ಸಂಜೆ ಗ್ರಾಮಗಳಿಂದ ಹಾಗೂ ನಗರ ಪ್ರದೇಶದ ಕಲಾವಿದರಿಂದ ಕೋಲಾಟ ವಾದ್ಯಗಳನ್ನು ನುಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಲಾ ಕುಸುಮಗಳು 2024 25ರ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ತಂಡಕ್ಕೆ ಆಕರ್ಷಕ ಬಹುಮಾನ ನೀಡಲಿದ್ದು ನಗದು ಹಾಗೂ ಪಾರಿತೋಷಕ ರೂಪದಲ್ಲಿ ನೀಡಿ ಗೌರವಿಸಲಾಗುವುದು ವಿಜೇತರನ್ನು ಘೋಷಿಸಲು ತೀರ್ಪಗಾರರನ್ನಾಗಿ ಹೊರಗಿನವರನ್ನು ಕರೆತರಲಾಗುತ್ತಿದೆ ಎಂದು ತಿಳಿಸಿದರು.
ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿಯ ಕಾರ್ಯದರ್ಶಿ ಮಲ್ಲೇಶ್ ಮಾತನಾಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮದ ಸಲುವಾಗಿ ಪ್ರಚಾರ ಕೈಗೊಂಡು ಕಲಾವಿದರನ್ನು ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದ ಯಶಸ್ವಿಗಾಗಿ ಸರ್ವ ರೀತಿಯಲ್ಲಿ ಸನ್ನದ್ಧವಾಗಿದ್ದು ನಗರದ ನಾಗರಿಕರು ಹಾಗೂ ಸಾಹಿತ್ಯ ಆಸಕ್ತರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಹಾಗೂ ವಿವಿಧ ಶಾಲೆಗಳಿಂದ ಮಕ್ಕಳನ್ನು ಕರೆತಂದು ಅವರಲ್ಲಿನ ಕಲಾಪ್ರತಿಭೆಯನ್ನು ಅನಾವರಣಗೊಳಿಸಲು ಶಿಕ್ಷಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ಚಿತ್ತಯ್ಯ ಡಿ ದಯಾನಂದ್ ಸಂಜೀವಿನಿ ಲ್ಯಾಬ್ ಎಂಎನ್ ಮೃತ್ಯುಂಜಯ ಚಂದ್ರಪ್ಪ ವನಜಾಕ್ಷಿ ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.