December 14, 2025
CLK-Janapada-23.jpeg

ಚಳ್ಳಕೆರೆ:
ಗ್ರಾಮೀಣ ಜನಜೀವನದಲ್ಲಿ ಜಾನಪದ ಕಲೆಗೆ ಕೊರತೆ ಇಲ್ಲ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ, ರಂಗಭೂಮಿ ಕಲಾವಿದ ಕೆ.ಪಿ. ಭೂತಯ್ಯ ಹೇಳಿದರು.
ಚಳ್ಳಕೆರೆ ತಾಲೂಕಿನ ಭತ್ತಯ್ಯನಹಟ್ಟಿ ಗ್ರಾಮದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾಲ್ಮೀಕಿ ಭಜನಾ ಕಲಾ ಸಂಘ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಸಂತೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಆಧುನಿಕತೆ ಬೆಳೆದಂತೆ ಜನಪದ ಕಲಾವಂತಿಕೆ ನಶಿಸುತ್ತಿದೆ. ಆದರೂ, ಹಳ್ಳಿಗಳಲ್ಲಿ ಯಾವ ನಿರ್ದೇಶಕರಿಲ್ಲದಿದ್ದರೂ ಜಾನಪದ ಕಲೆಯಲ್ಲಿ ಪರಿಣಿತರಿದ್ದಾರೆ. ಈಗಲೂ ಕೃಷಿ ಚಟುವಟಿಕೆಗಳಲ್ಲಿ ಬೇಸರಿಕೆ ಕಳೆಯಲು ಜನಪದ, ತತ್ವಪದ ಕಲಾವಿದರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಜನೆ ಪಾಂಡಿತ್ಯದಲ್ಲಿ ಮುಖ್ಯವಾಹಿನಿಗೆ ಬರುತ್ತಿರುವ ಕಲಾವಿದರಿದ್ದಾರೆ. ಗ್ರಾಮೀಣ ಭಾಗದ ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಇದಕ್ಕೆ ಸಂಬAಧಿಸಿದ ಸರ್ಕಾರಿ ಇಲಾಖೆಗಳು ಪಾರದರ್ಶಕವಾಗಿ ಅರ್ಹ ಕಲಾವಿದರ ಬದುಕಿನ ಸಾಮಾಜಿಕ ಭದ್ರತೆ ಕಾಪಾಡಬೇಕಿದೆ ಎಂದು ಮನವಿ ಮಾಡಿದರು.
ಪತ್ರಕರ್ತ ಕರ‍್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಜನಪದ ನಾಡೋಜ ಸಿರಿಯಜ್ಜಿಯಂತೆ ಕಲಾ ಶ್ರೀಮಂತಿಕೆಯ ವಾರಸುದಾರರಾಗಿ ಪ್ರತಿಭಾವಂತರು ಬೆಳೆಯಬೇಕು. ಜನಪದ ಬಗ್ಗೆ ಡಾ.ಗೊ. ಚನ್ನಬಸಪ್ಪ ಅವರು, ಕನ್ನಡ ನೆಲದ ಜನಕೋಟಿಯ ಜನಜೀವನದ ಉಸಿರು ಎಂದಿದ್ದಾರೆ. ನಾಡಿನ ಅಗಲಕ್ಕೂ ಜನಪದ ಕಲೆ ಸಂಭ್ರಮ ಕಾಣುತ್ತೇವೆ. ಕಲಾವಿದರಿಗೆ ಯಾವುದೇ ಜಾತಿ, ವರ್ಗ, ಗಡಿರೇಖೆಯಿಲ್ಲ. ಕಲಾ ಶ್ರೀಮಂತಿಕೆಯಿAದ ಸಮಾಜ ಬೆಸೆಯುವ ಕೆಲಸ ಆಗಬೇಕು. ಯಾವುದೇ ಪ್ರಶಸ್ತಿ, ಗೌರವ ಬಯಸದೆ ಜನ ಮನ ತಲುಪುವ ಕಲೆ ಸಿದ್ಧಿಸಿಕೊಳ್ಳಬೇಕು. ಪ್ರತಿಭಾವಂತರಿಗೆ ಒಳ್ಳೆಯ ಅವಕಾಶಗಳು ಸದಾ ಇರುತ್ತವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಸುಷ್ಮಾ ಉದ್ಘಾಟಿಸಿದರು. ತಾಪಂ ಮಾಜಿ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಗ್ರಾಪಂ ಸದಸ್ಯ ಡಿ. ತಿಪ್ಪೇಸ್ವಾಮಿ, ಕಲಾವಿದರಾದ ಪಿ. ಚಿತ್ರಯ್ಯ, ಎಸ್. ಕಾಟಯ್ಯ, ಈಶಣ್ಣ, ಪೂಜಾರಿ ಹನುಮಂತಪ್ಪ, ಜಯಣ್ಣ, ಭರತ್, ಆರ್. ಚಂದ್ರಣ್ಣ, ಜಿ. ಗೋಪಾಲ, ಪಿ. ವಿಜಯಕುಮಾರ್, ಶಿಕ್ಷಕರಾದ ಪ್ರಭಾಕರ ರೆಡ್ಡಿ, ಆಂಜನೇಯ ಮತ್ತಿತರರು ಇದ್ದರು.
ವಾಲ್ಮೀಕಿ ಭಜನಾ ಕಲಾ ಸಂಘ ವತಿಯಿಂದ ಭಜನೆ, ಲಕ್ಷö್ಮಮ್ಮ, ಈಶಣ್ಣ, ತಿಪ್ಪೇಸ್ವಾಮಿ, ರುದ್ರಮುನಿ ಕಲಾತಂಡದ ವತಿಯಿಂದ ಸೋಬಾನೆ, ಭಜನಾ ಮೇಳ, ಕೋಲಾಟ ಮತ್ತು ತಮಟೆ ವಾದ್ಯ ಕಲಾ ಪ್ರದರ್ಶನ ಮಾಡಲಾಯಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading