ಚಳ್ಳಕೆರೆ: ರೈತ ಸಂಘಟನೆಗಳು ತಮ್ಮ ಹೋರಾಟಗಳಿಗೆ ಬಲ ಬರಬೇಕಾದರೆ ಎಲ್ಲಾ ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ಹೋರಾಟಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಶಾಸಕ ಟಿ ರಘುಮೂರ್ತಿ ರೈತ ಸಂಘಟನೆಗಳಿಗೆ ಸಲಹೆ ನೀಡಿದರು.













ನಗರದ ಕೃಷಿ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರೈತ ಸಂಘಟನೆಗಳು ರೈತರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸರ್ಕಾರದ ವಿರುದ್ಧ ಹೋರಾಟಗಳನ್ನು ಹಮ್ಮಿಕೊಳ್ಳುತ್ತಾರೆ ಆದರೆ ವಿವಿಧ ರೀತಿಯ ಸಂಘಟನೆಗಳು ಇರುವುದರಿಂದ ದ್ಯೇಯೋದ್ದೇಶಗಳು ಒಂದೇ ಆಗಿದ್ದರೂ ಮಂಡಿಸುವ ಅಭಿಪ್ರಾಯ ವಿಭಿನ್ನವಾಗಿರುತ್ತದೆ ಮುಂದಿನ ದಿನಗಳಲ್ಲಿ ಎಲ್ಲಾ ರೈತ ಸಂಘಟನೆಗಳು ಒಂದಾಗಿ ಹೋರಾಟ ನಡೆಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕು ಚೌದರಿ ಚರಣ್ ಸಿಂಗ್ ರವರ ಆಶಯಗಳು ಈಡೇರಬೇಕಾದರೆ ರಾಜಕೀಯ ಪಕ್ಷಗಳು ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು ರೈತ ಬೆಳೆ ಬೆಳೆದರೆ ದೇಶದ ಜೊತೆಗೆ ನಾವು ಉಳಿಯುತ್ತೇವೆ ಹೀಗಾಗಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಸೌಲಭ್ಯವನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ರೈತರ ಹಿತ ಕಾಯಲು ರಾಜ್ಯ ಸರ್ಕಾರ ಬದ್ಧ: ರಾಜ್ಯ ಸರ್ಕಾರ ರೈತ ಪರವಾದ ಯೋಜನೆಗಳನ್ನು ರೂಪಿಸುತ್ತಿದ್ದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಯೋಜನೆಗಳಿಗೆ ಹಣ ನೀಡುತ್ತಿಲ್ಲ ಸಾರ್ವಜನಿಕರು ಕಟ್ಟುತ್ತಿರುವ ತೆರಿಗೆಯ ರಾಜ್ಯದ ಜಿಎಸ್‌ಟಿ ಪಾಲನ್ನು ಕೇಳಿದರೆ ನೀಡದೆ ತಾರತಮ್ಯ ಮಾಡುತ್ತಿದೆ ರಾಜ್ಯದ ಸಂಸದರು ಇದರ ಬಗ್ಗೆ ಧ್ವನಿ ಎತ್ತದೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ 2022 23ನೇ ಸಾಲಿನಲ್ಲಿ ಬೆಳೆ ಪರಿಹಾರದಲ್ಲಿ ಆಗಿರುವ ಲೋಪದಲ್ಲಿ ಭಾಗಿಯಾಗಿರುವ ಯಾವುದೇ ಅಧಿಕಾರಿಗಳನ್ನು ಬಿಡುವ ಮಾತೇ ಇಲ್ಲ ರೈತರಿಗೆ ಅನ್ಯಾಯವಾಗದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೋಲ್ಡ್ ಸ್ಟೋರೇಜ್ ನಿರ್ಮಾಣ: ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ತೋಟಗಾರಿಕೆ ಇಲಾಖೆ ಸಹಾಯೋಗದೊಂದಿಗೆ ತಾಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಇದೇ ವೇಳೆ ತಿಳಿಸಿದರು.
:ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ ಪಿ ಭೂತಯ್ಯ ಮಾತನಾಡಿ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ರೈತ ಬೆಳೆದ ಅನ್ನವನ್ನು ತಿಂದು ದೇಶದ 130 ಕೋಟಿ ಜನ ನೆಮ್ಮದಿಯ ನಿದ್ದೆ ಮಾಡುತ್ತಿದ್ದಾರೆ ರಾಸಾಯನಿಕ ಗೊಬ್ಬರಗಳಿಂದ ಭೂಮಿ ವಿಷ ವಾಗಿ ಬೆಳೆ ಬೆಳೆಯಲು ರೈತ ಕಷ್ಟ ಪಡುವಂತಾಗಿದೆ ರೈತರ ಹೆಸರೇಳಿ ಅಧಿಕಾರಕ್ಕೆ ಬರುವ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗುತ್ತಿವೆ ಇಂದಿನ ಜನಪ್ರತಿನಿಧಿಗಳು ಚೌದರಿ ಚರಣ್ ಸಿಂಗ್ ರವರ ರೈತ ಬದ್ಧತೆಯ ಕಾಳಜಿಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದರು
ರೈತ ಮುಖಂಡ ಸೋಮಗುದ್ಧು ರಂಗಸ್ವಾಮಿ ಮಾತನಾಡಿ ಚೌದರಿ ಚರಣ್ ಸಿಂಗ್ ಪ್ರಧಾನಮಂತ್ರಿಯಾಗಿ ಆರು ತಿಂಗಳ ಅಧಿಕಾರ ಅವಧಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದ ಮಹಾನ್ ತ್ಯಾಗಮಯಿ ಬೆಳೆ ವಿಮೆ ಬೆಳೆಗಳಿಗೆ ಬೆಂಬಲ ಬೆಲೆ ಮೊದಲು ಘೋಷಿಸಿದ ಕೀರ್ತಿ ಚರಣ್ ಸಿಂಗ್ ರವರಿಗೆ ಸಲ್ಲಬೇಕು ಇಂದಿನ ರಾಜಕಾರಣಿಗಳು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ ಆದರೆ ಬೆನ್ನೆಲುಬನ್ನು ಮುರಿಯಲು ಸದಾ ಹವಣಿಸುತ್ತಿರುತ್ತಾರೆ ಎಂದು ತಿಳಿಸಿದರು.
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ದೇಶಕ್ಕೆ ಅನ್ನ ದಾಸೋಹವನ್ನು ಉಣ ಬಡಿಸುವ ಜವಾಬ್ದಾರಿಯನ್ನು ರೈತರು ಹೊತ್ತಿದ್ದಾರೆ ದೇಶದಲ್ಲಿ ಕೃಷಿ ಅಭಿವೃದ್ಧಿ ಆದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ರೈತರಿಗೆ ನೀಡಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡಿದ್ದಲ್ಲಿ ದೇಶದ ರೈತ ಅನ್ನ ಬೆಳೆಯಲು ಸಾಧ್ಯವಾಗುತ್ತದೆ 2023ರಲ್ಲಿ ತಾಲೂಕಿನಲ್ಲಿ ಬರಗಾಲ ಬಂದು 36,000 ಕೋಟಿಯಷ್ಟು ಬೆಳೆ ನಷ್ಟವಾಗಿದ್ದು ಕೇಂದ್ರದಿಂದ ಕೇವಲ 4300 ಕೋಟಿ ಮಾತ್ರ ನೀಡಿದೆ ಇದರಿಂದ ರೈತರಿಗೆ ಅನ್ಯಾಯವಾಗಿದ್ದು ಇದರ ವಿರುದ್ಧ ರಾಜ್ಯ ಸರ್ಕಾರದ ಮಂತ್ರಿಗಳು ಶಾಸಕರು ಹಾಗೂ ಕೇಂದ್ರದ ಸಂಸದರು ಧ್ವನಿ ಎತ್ತುವ ಮೂಲಕ ರೈತನ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆಪಿ ಬೂತಯ್ಯ ರೆಡ್ಡಿಹಳ್ಳಿ ವೀರಣ್ಣ ಚಿಕ್ಕಣ್ಣ ಸೋಮುಗುದ್ದು ರಂಗಸ್ವಾಮಿ ತಾಲೂಕು ಪಂಚಾಯತಿ ಈ ಓ ಶಶಿಧರ್ ಕೃಷಿ ಅಧಿಕಾರಿ ಪ್ರಭಾಕರ್ ಅಶೋಕ್ ವಿಶ್ವನಾಥ್ ರಮೇಶ್ ಶಿವಲಿಂಗಪ್ಪ ಶಿವಲೀಲಾ ತಿಪ್ಪೇಸ್ವಾಮಿ ನಂದಿನಿ ವಿರೂಪಾಕ್ಷಪ್ಪ ರೇವಣ್ಣ ಉಮಾಪತಿ ಪಾಲಮ್ಮ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.