ನಾಯಕನಹಟ್ಟಿ:
ಪಟ್ಟಣದ ಪೊಲೀಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಬರ್ ಅಪರಾಧ ರಸ್ತೆ ಸುರಕ್ಷತೆ ಮಹಿಳಾ ಮತ್ತು ಮಕ್ಕಳ ರಕ್ಷಣೆ ಮುಂತಾದ ಅಪರಾಧಗಳ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೋಮವಾರ ಪಟ್ಟಣದಲ್ಲಿ ಜಾಗೃತಿ ಜಾಥಾಕೆ ಚಾಲನೆ ನೀಡಿದ ತಳಕು-ನಾಯಕನಹಟ್ಟಿ ವೃತ್ತ ನಿರೀಕ್ಷಕ ಹನುಮಂತಪ್ಪ ಶಿರಹಳ್ಳಿ.
ನಾಯಕನಹಟ್ಟಿ::ಡಿ.23. ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು ಎಂದು ತಳಕು- ನಾಯಕನಹಟ್ಟಿ ವೃತ್ತ ನಿರೀಕ್ಷಕ ಹನುಮಂತಪ್ಪ ಶಿರಹಳ್ಳಿ ಹೇಳಿದ್ದಾರೆ.



ಸೋಮವಾರ ಪಟ್ಟಣದ ಮಯೂರ ಇಂಟರ್ನ್ಯಾಷನಲ್ ಸ್ಕೂಲ್, ವಿದ್ಯಾವಿಕಾಸ ಎಸ್ ಟಿ ಎಸ್ಆರ್ ಶಾಲೆಯ ವಿದ್ಯಾರ್ಥಿಗಳಿಂದ ಅಪರಾಧ ತಡೆ ಮಾಸಾಚರಣೆ- 2024 ಕಾರ್ಯಕ್ರಮದ ಅಂಗವಾಗಿ ನಾಯಕನಹಟ್ಟಿ ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಅಂಬೇಡ್ಕರ್ ಸರ್ಕಲ್ ಚಾಲನೆ ನೀಡಿದರು ವಾಲ್ಮೀಕಿ ಸರ್ಕಲ್ ಬಿತ್ತಿ ಪತ್ರ ಸಾರ್ವಜನಿಕರಿಗೆ ಹಂಚುವ ಮೂಲಕ ಮತ್ತು ಪಾದಗಟ್ಟೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರ ಕುರಿತು ಮಾತನಾಡಿದರು ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳು ಕಣ್ಣಿಗೆ ಬಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು ಅಪ್ರಾಪ್ತ ವಯಸ್ಸಿನವರು ಬೈಕ್ ಚಲಾಯಿಸಬಾರದು ಸಂಚಾರ ನಿಯಮ ಪಾಲಿಸಬೇಕು ಎಂದು ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಇನ್ನೂ ಜಾಗೃತಿ ಜಾಥದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಪಟ್ಟಣದ ಪೊಲೀಸ್ ಠಾಣೆ ಪಿಎಸ್ಐ ದೇವರಾಜ್ ಮಾತನಾಡಿದರು ವಿದ್ಯಾರ್ಥಿಗಳು ಮನೆಯಲ್ಲಿರುವಂತಹ ಬೈಕುಗಳನ್ನ ತಂದೆ ತಾಯಿಗಳಿಗೆ ಗೊತ್ತಿಲ್ಲದಂತೆ ರಸ್ತೆಗೆ ಅವುಗಳನ್ನು ತಂದು ಚಲಾವಣೆ ಮಾಡಿದರೆ ದೊಡ್ಡ ಮಟ್ಟದ ದಂಡವನ್ನು ವಿಧಿಸಲಾಗುವುದು ಜೊತೆಗೆ ಪ್ರತಿಯೊಬ್ಬರೂ ಕೂಡ ಬೈಕ್ ಓಡಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು ಇದರಿಂದ ತಮ್ಮ ಜೀವ ರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ-2 ಕೆ. ಶಿವಕುಮಾರ್, ಎಎಸ್ಐ ತಿಪ್ಪೇಸ್ವಾಮಿ ದಾದಾಪೀರ್ ಸಿಬ್ಬಂದಿಗಳಾದ ಅಣ್ಣಪ್ಪ ನಾಯ್ಕ, ಭಾಷಾ, ಧನುಜಯ, ರುದ್ರಪ್ಪ , ಮಂಜುಳಾ, ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.