ವರದಿ: ಕೆ.ಟಿ.ಮೋಹನ್ ಕುಮಾರ್
ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವುದರ ಮೂಲಕ ರೈತರ ಏಳಿಗೆಗೆ ಶ್ರಮಿಸಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ
ಎಚ್.ಎನ್.ವಿಜಯ್ ಹೇಳಿದರು.
ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಹೊರತಂದಿರುವ 2025ನೇ ಸಾಲಿನ ನೂತನ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಸಹಕಾರ ಸಂಘಗಳಿಂದ ಸಂಘದ ರೈತ ಸದಸ್ಯರುಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ರೈತರುಗಳಿಗೆ ಅಗತ್ಯ ಮಾಹಿತಿಯನ್ನು ನೀಡಬೇಕು. ರೈತರುಗಳನ್ನು ಸಣ್ಣ ಪುಟ್ಟ ವಿಷಯಗಳಿಗೆ ಸಂಘಕ್ಕೆ ಅಲೆಸಬಾರದು. ಸಂಘದಿಂದ ವಿವಿಧ ಉದ್ದೇಶಗಳಿಗೆ ರೈತರುಗಳಿಗೆ ನೀಡುವ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದ ವಿಜಯ್ ಅವರು ಅಂಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಇತರ ಸಹಕಾರ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಮೈಮುಲ್ ನಿರ್ದೇಶಕರು ಹಾಗೂ ಅಂಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ
ಎ.ಟಿ.ಸೋಮಶೇಖರ್ ಅವರು ಮಾತನಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರುಗಳು ಪಡೆಯುವ ಸಾಲವನ್ನು ಸದುಪಯೋಗಪಡಿಸಿಕೊಂಡು ತಾವುಗಳು ಅಭಿವೃದ್ಧಿಯತ್ತ ಸಾಗಬೇಕು ಆ ಮೂಲಕ ಸಂಘದ ಬೆಳವಣಿಗೆಗೂ ಕಾರಣಕರ್ತರಾಗಬೇಕು ಎಂದರು.
ಸಂಘದಿಂದ ರೈತರುಗಳು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಇತರ ರೈತ ಸದಸ್ಯರುಗಳಿಗೆ ಸಹಕಾರಿಯಾಗುವಂತೆ ಹಾಗೂ ತಾವುಗಳು ಮರಳಿ ಸಾಲವನ್ನು ಪಡೆಯಲು ಅನುಕೂಲವಾಗುವಂತೆ ನಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ನಾಗೇಶ್, ನಿರ್ದೇಶಕರುಗಳಾದ ರಾಘವೇಂದ್ರ, ರಮೇಶ್, ಸುರೇಶ, ಗೋವಿಂದ, ನಾಗರಾಜು, ವೆಂಕಟೇಶ್, ಸುನಂದಾ, ಮಮತ, ಕೃಷ್ಣನಾಯಕ, ಮೇಲ್ವಿಚಾರಕ ಬಸವರಾಜು, ಸಿಇಓ ಎ.ಟಿ.ಸತೀಶ್, ಸಿಬ್ಬಂದಿಗಳಾದ ಚಂದ್ರಶೇಖರ, ಸುಷ್ಮಾ, ಹೊಸಮನೆರಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.