March 18, 2026
d23-tm3.jpg

ನಾಗತಿಹಳ್ಳಿಮಂಜುನಾಥ್

ಹೊಸದುರ್ಗ : ತಾಲ್ಲೂಕಿನ ಕಂಚೀಪುರದಲ್ಲಿ ನೆಲೆಸಿರುವ ಹೊನ್ನಿನ ದೈವ ಕಂಚಿವರದರಾಜ ಸ್ವಾಮಿಯ ಕಾರ್ತಿಕ ಮಹೋತ್ಸವ ಜನಸಾಗರದ ನಡುವೆ ಅತ್ಯಂತ ವಿಜೃಂಭಣೆಯಿAದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ, ಪುಷ್ಪಾಲಂಕಾರದ ನಂತರ ಮಹಾಮಂಗಳಾರತಿ ನಡೆಯಿತು. ರಾತ್ರಿ ಲಕ್ಷದೀಪೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸ್ವಾಮಿಗೆ ಗರುಡ ವಾಹನೋತ್ಸವ ಮೂಲಕ ರಾಜಬೀದಿ ಉತ್ಸವ ನಡೆಯಿತು. ಸ್ವಾಮಿ ದೇವಾಲಯದಿಂದ ಹೊರ ಬರುತ್ತಿದ್ದಂತೆ ಹರಕೆ ಹೊತ್ತ ಭಕ್ತರು ನಾಣ್ಯ ಸಮರ್ಪಿಸಿದರು. ಭಕ್ತರು ದೇವರನ್ನು ಪ್ರಾರ್ಥಿಸಿ, ಅನ್ನಸಂತರ್ಪಣೆ ಸವಿದರು.
ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading