ನಾಗತಿಹಳ್ಳಿಮಂಜುನಾಥ್
ಹೊಸದುರ್ಗ:ತಾಲ್ಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ನೆಲೆಸಿರುವ ಮಲ್ಲಿಕಾರ್ಜುನ ಸ್ವಾಮಿಯ ಕೆಂಡೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿAದ ನಡೆಯಿತು.
ಕಾರ್ತೀಕ ಮಾಸದಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವ ೩ ದಿನಗಳ ಕಾಲ ನಡೆಯುತ್ತದೆ.
ಗುರುವಾರ ಬೆಳಿಗ್ಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂದೇ ಹೆಬ್ಬಳ್ಳಿ, ಬನಸೀಹಳ್ಳಿ, ಬೀಸನಹಳ್ಳಿ, ತುಂಬಿನಕೆರೆ ಗ್ರಾಮ ದೇವತೆಗಳ ಕೂಡು ಭೇಟಿ ನಡೆಯಿತು.
ಶುಕ್ರವಾರ ಬೆಳ್ಳಿಗ್ಗೆ ೧೦ ಕ್ಕೆ ವೀರಭದ್ರೇಶ್ವರ ಸ್ವಾಮಿಯ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ಕೆಂಡದಾರ್ಚನೆ ನಡೆಯಿತು. ನಂತರ ೧೨ ಗಂಟೆಯಿAದ ಶುರುವಾದ ಅನ್ನ ದಾಸೋಹ ಸಂಜೆ ೭ ಗಂಟೆಯವರೆಗೂ ಯಾವುದೇ ಲೋಪವಿಲ್ಲದೇ ಅತ್ಯಂತ ಸಮರ್ಪಕವಾಗಿ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೋತ್ಸವಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ನಾಗರಕಟ್ಟೆ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೋತ್ಸವಕ್ಕೂ ಮುನ್ನ ಸುತ್ತಲಿನ ಎನ್.ಜಿ. ಹಳ್ಳಿ, ಹೊಸಹಟ್ಟಿ, ಗೌಡಿಹಳ್ಳಿ, ಉಪ್ಪಾರಹಟ್ಟಿ, ಕಡ್ಲಪ್ಪನಹಟ್ಟಿ, ಹೆಬ್ಬಳ್ಳಿ ಸೇರಿದಂತೆ ವಿವಿಧೆಡೆಯಿಂದ ಕಂತೆ ಬೀಕ್ಷೆ ಮೂಲಕ ಪ್ರತಿ ಗ್ರಾಮಕ್ಕೂ ತೆರಳಿ ಅಕ್ಕಿ, ಬೇಳೆಕಾಳನ್ನು ಸಂಗ್ರಹಿಸಲಾಗುತ್ತದೆ. ಅದನ್ನೇ ದಾಸೋಹಕ್ಕೆ ಬಳಸಲಾಗುವುದು. ಭಕ್ತರು ಹರಕೆಯ ರೂಪದಲ್ಲಿ ಅಕ್ಕಿ ಪಾಕೇಟ್, ದಿವಸ ಧಾನ್ಯಗಳನ್ನು ಸ್ವಾಮಿಯ ಸನ್ನಿಧಿಯಲ್ಲಿ ತಂದು ಹಾಕುತ್ತಾರೆ. ಈ ಜಾತ್ರೆಯಲ್ಲಿ ಅನ್ನದಾಸೋಹವೇ ಪ್ರಸಿದ್ಧವಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.