September 15, 2025
Screenshot_20241123_214912.png

ಚಳ್ಳಕೆರೆ ನ.23

ವಿದ್ಯಾರ್ಥಿನಿಯರ ವ್ಯಾಸಂಗಕ್ಕೆಂದು ನಿರ್ಮಿಸಿದ ಸುಸಜ್ಜಿತ ನಿಲಯ ಕಟ್ಟಡ ಅನೈತಿಕ ತಾಣವಾಗಿದೆ.


ಹೌದು ಇದು ಚಳ್ಳಕೆರೆ ನಗರದ ಹೆಚ್ ಪಿಪಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಡಿ.ಸುಧಾಕರ್ ಸಮಾಜ ಕಲ್ಯಾಣ ಸಚುವರ ಅವಧಿಯಲ್ಲಿ ಗ್ರಾಮೀಣ ಹಾಗೂ ವಿವಿಧ ದೂರದ ಪ್ರದೇಶಗಳಿಂದ ಕಾಲೇಜಿಗೆ ವ್ಯಾಸಂಗಕ್ಕೆ ಬರುವ ಪರಿಶಿಷ್ಟ ಪಂಗಡದ( ನಾಯಕ) ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಸಹಕಾರಿಯಾಗಲೆಂದು ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ಎಸ್ಟಿ ಮಹಿಳಾ ವಿದ್ಯಾರ್ಥಿನಿಲಯ ಪ್ರಾರಂಭ ಮಾಡದೆ ಇರುವುದರಿಂದ ಕಟ್ಟಡ ಅನೈತಿಕ ತಾಣವಾಗಿ ಕುಡುಕರ ಹಾಗೂ ಶೌಚಾಲಯವಾಗಿದ್ದು ಕಿಡಿಗೇಡಿಗಳು ಕಟ್ಟಡದ ಕಿಟಕಿಯ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದ್ದು ಸುಸಜ್ಜಿತ ಕಟ್ಟಡ ಬಳಕೆ ಮಾಡದೆ ಇರುವುದರಿಂದ ಗಿಡಗೆಂಟೆಗಳ ಪೊದೆ ಸೇರುವ ಸ್ಥಿತಿ ತಲುಪಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಚಳ್ಳಖೆರೆ ನಗರದ ಹೆಚ್ ಪಿಪಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರದ ಮೂಲೆಯಲ್ಲಿರುವ ವಿದ್ಯಾರ್ಥಿನಿಯದ ಕಟ್ಟಡದ ಸ್ಥಿತಿ.

ನಗರದಲ್ಲಿ ವಿದ್ಯಾರ್ಥಿನಿಯಗಳಿಗೆ ಬಹಳ ಬೇಡಿಕೆ ಇದ್ದು ವಸತಿ ನಿಲಯದಲ್ಲಿ ಪ್ರವೇಶ ಲಭ್ಯವಾಗದ ವಿದ್ಯಾರ್ಥಿಗಳು ಸಂಸದರ.ಶಾಸಕರ.ಸಚಿವರ ಶಿಪಾರಸ್ ಪತ್ರಕ್ಕಾಗಿ ಅಲೆದಾಡುವ ದೃಶ್ಯಗಳನ್ನು ಕಾಣ ಬಹುದು ಆದರೆ ಕಾಲೇಜು ಯುಸಿಸಿ ಯೋಜನೆಯ ಸಾರ್ವಜನಿಕ‌ತೆರಿಗೆ ಅಮನುದಾನದಡಿತಲ್ಲಿ ನಿರ್ಮಿಸಿದ ಎಸ್ಟಿ ಸಮುದಾದ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಿದ ವಿದ್ಯಾರ್ಥಿನಿಲಯಕ್ಕೆ ದಾಖಲಾತಿ ನೀಡದೆ ಮುಚ್ಚಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಸ್ಟಿ ಸಮುದಾಯದ ಮಹಿಳೆಯರ ವಸತಿ ನಿಲಯ ಪ್ರಾರಂಭಿಸುವರೇ  ಕಾದು ನೋಡ ಬೇಕಿದೆ…

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading