September 15, 2025
IMG-20241123-WA0288.jpg

ಚಳ್ಳಕೆರೆ ನ.23

ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಅವರ ವಿಚಾರಗಳು ಬದುಕಿರುವುದು ಮುಖ್ಯ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಕುರುಡಿಹಳ್ಳಿ ಲಂಬಾಣಿ ಹಟ್ಟಿ ಗ್ರಾಮದ ಬಾವಾಜಿ ಸೇವಾಶ್ರಮದಲ್ಲಿ ನಡೆದ ಶ್ರೀ ಶಿವಸಾಧು ಬಾವಾಜೀ ಇವರ ಪ್ರಥಮ ಪುಣ್ಯ ಸ್ಮರಣೆ ಹಾಗೂ 2025ರ ಕ್ಯಾಲೆಂಡರ್ ಬಿಡುಗಡೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹುಟ್ಟಿದಾಗ ಇದ್ದ ಮುಗ್ಧತೆಯನ್ನು ಜೀವಿತದ ಕೊನೆಯವರೆಗೂ ಮುಂದುವರಿಸಿಕೊಂಡು ಹೋಗುವುದು ಕಷ್ಟಕರ. ಅಂತರಂಗದಲ್ಲಿ ಶುದ್ಧಿ ಇದ್ದರೆ ಬಹಿರಂಗ ಶುದ್ಧಿ ಕಾಣಬಹುದು. ಅಂತಹವರ ಸಾಲಿಗೆ ಶಿವಸಾದುಸ್ವಾಮೀಜಿ ಸೇರಿದವರು ಗೋಶಾಲೆ. ಸಮಾಜಕ್ಕೆ ಮಾರ್ಗದರ್ಶಕರಾಗಿ ಆದ್ಯಾತ್ಮಿ ಚಿಂತನೆಗಳನ್ನು ಜನರಲ್ಲಿ ಜಾಗೃತಿ ಗೊಳಿಸುವ ಮೂಲಕ ಉತ್ತಮ ಸೇವೆ ಮಾಡಿದ್ದು ಇವರು ಇಹಲೋಕ ತ್ಯಜಿಸಿ ಒಂದು ವರ್ಷಕಳೆದರೂ ಅವರು ಮಾಡಿದ ಸೇವೆಯನ್ನು ಇಂದು ಸ್ಮರಣೆ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಮಠದ ಸ್ವಾಮೀಜಿಗಳಾದ ಶ್ರೀ ಸೇವಾ ಭಗತ್ ಮಹಾರಾಜ, ಶ್ರೀ ಸರ್ದಾರ್ ಸೇವಾಲಾಲ್‌ ಸ್ವಾಮೀಜಿ, ಶ್ರೀ ದೇವಾ ಭಗತ್ ಗುರೂಜಿ, ಶ್ರೀ ಶಿವಪ್ರಕಾಶ ಮಹಾರಾಜರು, ಶ್ರೀ ನಾಗರಾಜ್ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸೇವಾಲಾಲ್ . ಶ್ರೀ ವೆಂಕಟೇಶ್ ಜ್ಯೋತಿಷಿ, ಶ್ರೀ ಪಂಡಿತ್ ನಾಗುಸಾದ್,
ಶ್ರೀ ತಿಪ್ಪೇಶ್ ಸೇವಾಲಾಲ್‌ಸ್ವಾಮಿ, ಶ್ರೀ ನಂದಾಮಸಂದ್ ಸೇವಾಲಾಲ್ ಸ್ವಾಮೀಜಿಗಳು ದೀವ್ಯ ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ಮಾಜಿ ಜಿ ಪಂ ಸದಸ್ಯ ಬಾಬುರೆಡ್ಡಿ, ಮಾಜಿ ತಾಪಂ ಅಧ್ಯಕ್ಷ ತಿಪ್ಪೇಶ್ ರೆಡ್ಡಿ, ಗ್ರಾಪಂ ಸದಸ್ಯರಾದ ರಾಮಸ್ವಾಮಿ, ವೀರಭದ್ರ ನಾಯ್ಕ್, ಮುಖಂಡರಾದ ಡಾ.ಚಂದ್ರನಾಯ್ಕ.ಪುರುಷೋತ್ತಮ್ ಇತರರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading