
ನಾಯಕನಹಟ್ಟಿ: ಪಟ್ಟಣ ಪಂಚಾಯತಿ ವ್ಯಾಪ್ತಿಯ ಒಂದನೇ ವಾರ್ಡಿನ ಜಾಗನೂರಹಟ್ಟಿ ಗ್ರಾಮದಲ್ಲಿ ನಡೆದ ಉಪಚುನಾವಣೆ ಶಾಂತಿಯುತವಾಗಿ ಜರುಗಿತು.
ತೆರವಾಗಿದ್ದ ಪಟ್ಟಣ ಪಂಚಾಯತಿ ಸ್ಥಾನಕ್ಕೆ ನಡೆದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಚಂದ್ರಮ್ಮ, ಬಿಜೆಪಿ ಪಕ್ಷದಿಂದ ಎಚ್ ಮಲ್ಲೇಶಪ್ಪ, ಪಕ್ಷೇತರರಾಗಿ ಎಂ ಟಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು.
ಶನಿವಾರ ಬೆಳಗ್ಗೆ ಏಳು ಗಂಟೆಯಿಂದ ಮತದಾನ ಪ್ರಾರಂಭವಾಗಿ, ಸಂಜೆ 5:00 ಮುಕ್ತಾಯವಾಯಿತು. ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಒಟ್ಟು 929 ಮತದಾರರಿದ್ದು, ಇವರಲ್ಲಿ 81 ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಶೇಕಡ 86% ಮತದಾನವಾಗಿದೆ. ಒಟ್ಟು ಗಂಡು 472 ಮತದಾರರಲ್ಲಿ 423 ಗಂಡು ಮತದಾರರು ಹಾಗೂ ಒಟ್ಟು ಹೆಣ್ಣು 457 ಮತದಾರರಲ್ಲಿ 378 ಹೆಣ್ಣು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.



ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಹರಿಪ್ರಸಾದ್, ಉಪಚುನಾನಾಧಿಕಾರಿ ಡಿ ಎಸ್ ಪಾಲಯ್ಯ, ಬಿ ಎಲ್ ಓ ಬಿ. ಕುಬೇರಪ್ಪ, ಮತಗಟ್ಟೆ ಅಧಿಕಾರಿಗಳಾದ ಎಚ್ ಟಿ ರುದ್ರೇಶ್, ಕೆ ಎಂ ಮಲ್ಲಿಕಾರ್ಜುನ, ಟಿ ಬೊಮ್ಮಲಿಂಗಪ್ಪ, ಸಿ ಹನುಮಂತಪ್ಪ ಹಾಗೂ ನಾಯಕನಹಟ್ಟಿ ಪೊಲೀಸ್ ಠಾಣೆಯ ಎಎಸ್ಐ ತಿಪ್ಪೇಸ್ವಾಮಿ ಹೆಡ್ಕಾಸ್ಟೇಬಲ್ ರಾಘವೇಂದ್ರ, ಸಿಬ್ಬಂದಿ ರಾಜು. ವರ್ಗದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.