
ಚಳ್ಳಕೆರೆ:ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಘಟಕದ ವತಿಯಿಂದ ಐದನೇ ವರ್ಷದ ಯಶಸ್ವಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಗರದ ಕೆಎಸ್ಆರ್ ಟಿಸಿ ನಿಲ್ದಾಣದ ಮುಂಭಾಗದಲ್ಲಿ ಅದ್ದೂರಿಯಾಗಿ ಜರುಗಿತು ಕಾರ್ಯಕ್ರಮದ ಧ್ವಜಾರೋಹಣವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜಿ ಟಿ ವೀರಭದ್ರ ಸ್ವಾಮಿ ನೆರವೇರಿಸಿದರು.

ನಂತರ ಮಾತನಾಡಿದ ಅವರು ಕನ್ನಡ ಅಸ್ಮಿತೆ ಉಳಿಯಬೇಕಾದರೆ ಮೊದಲು ಕನ್ನಡಿಗರು ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ವಾಣಿ ಕೇವಲ ನಾಲಿಗೆಯ ಮೇಲೆ ಹೊರಳಿದರೆ ಸಾಲದು ಅದು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಕನ್ನಡ ಭಾಷೆಯನ್ನು ಹೆಚ್ಚು ಬಳಸಿದಾಗ ಮಾತ್ರ ಭಾಷೆ ಉಳಿಯಲು ಸಾಧ್ಯ ಭಾಷೆಯನ್ನು ನಾವು ಉಳಿಸಿದರೆ ಭಾಷೆಯು ನಮ್ಮನ್ನು ಉಳಿಸುತ್ತದೆ ಕನ್ನಡ ಮಾಧ್ಯಮ ಶಾಲೆಗಳು ನಶಿಸುತ್ತಿರುವುದು ವಿಷಾದದ ಸಂಗತಿಯಾಗಿದ್ದರು ಇದು ಸತ್ಯವಾಗಿದೆ ಕನ್ನಡ ಅಳಿವು ಉಳಿವು ಶಿಕ್ಷಣದ ಮೇಲೆ ನಿಂತಿರುವುದರಿಂದ ಕನ್ನಡದಲ್ಲಿ ಹೆಚ್ಚಿನ ಶಿಕ್ಷಣ ದೊರೆತರೆ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಕನ್ನಡಿಗರು ಮನಸ್ಸು ಮಾಡಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಕುಶಲಕರ್ಮಿ ವಿಭಾಗದ ರಾಜ್ಯಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ಮಾತನಾಡಿ ಚಳ್ಳಕೆರೆ ತಾಲ್ಲೂಕು ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ಕನ್ನಡ ಹಾಗೂ ತೆಲುಗು ಭಾಷೆಗಳನ್ನು ಕನ್ನಡಿಗರಾದ ನಾವು ಬಳಸುತ್ತಿದ್ದೇವೆ ರಾಜ್ಯದ ನಾಡು ನುಡಿ ಜಲದ ವಿಷಯಗಳಿಗೆ ಧಕ್ಕೆ ಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಎಲ್ಲ ಸಂಘಟನೆಗಳು ಹೋರಾಟ ನಡೆಸುತ್ತವೆ ಇಂತಹ ಹೋರಾಟಗಳಲ್ಲಿ ಸಾರ್ವಜನಿಕರು ಸಹ ಭಾಗವಹಿಸಿ ಬೆಂಬಲ ನೀಡಿದಾಗ ಮಾತ್ರ ಸಂಘಟನೆಗಳಿಗೆ ಬಲ ತುಂಬಿದಂತಾಗುತ್ತದೆ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದರು ಕಲೆ ಸಾಹಿತ್ಯಕ್ಕೆ ಯಾವುದೇ ಬರವಿಲ್ಲ ತಾಲೂಕಿನ ಹೆಸರಾಂತ ಸಾಹಿತಿಗಳು ಚಿಂತಕರು ಹಾಗೂ ಹೋರಾಟಗಾರರು ಕನ್ನಡ ಭಾಷೆಗೆ ತಮ್ಮದೇ ಆದ ಕೊಡುಗೆ ನೀಡಿದ್ದು ಕನ್ನಡ ಭಾಷೆಯ ಉಳಿವಿಗಾಗಿ ಹಾಗೂ ಹೋರಾಟಗಳಿಗೆ ಸರ್ವರೂ ಸರ್ವ ರೀತಿಯಲ್ಲಿಯೂ ಒಗ್ಗೂಡುವ ಅವಶ್ಯಕತೆ ಇದೆ ಎಂದರು.
ಪಿರಿಯ ಪತ್ರಕರ್ತ ಕೆಎಸ್ ರಾಘವೇಂದ್ರರವರಿಗೆ ಸನ್ಮಾನಿಸಲಾಯಿತು.ಮದಕರಿ ನಗರದ ಸ.ಹಿ.ಪ್ರಾ. ಶಾಲೆ ಮಕ್ಕಳು ನಾಡಗೀತೆಗೆ ನೃತ್ಯ ಮಾಡುವುದರ ಮೂಲಕ ರಂಜಿಸಿದರು.
ಈ ಸಂದರ್ಭದಲ್ಲಿಕರವೇ ಪ್ರವೀಣ್ ಶೆಟ್ಟಿ ಬಳಗದ ಅಧ್ಯಕ್ಷ ಮಂಜುನಾಥ್ ಗೌರವಾಧ್ಯಕ್ಷ ಸಿ ಬೋಜರಾಜ ಉಪಾಧ್ಯಕ್ಷರ ಬಾಲ್ರಾಜ್ ಪ್ರಧಾನ ಕಾರ್ಯದರ್ಶಿ ಮರುಕುಂಟೆ ಚಂದ್ರಣ್ಣ ಯುವ ಘಟಕದ ಅಧ್ಯಕ್ಷ ರವಿಕುಮಾರ್ ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ್ ಸಂಘಟನಾ ಕಾರ್ಯದರ್ಶಿ ಕೆ ಮುರುಳಿ(ಪ್ರೆಸ್) ಸಿಎನ್ ಮಾರುತಿ ನಾಯಕನಹಟ್ಟಿ ಹೋಬಳಿಯ ಅಧ್ಯಕ್ಷ ಪ್ರಕಾಶ್ ಫರೀದ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.